ಮೆಗಾ ಹೀರೊ ಜೋಡಿಯಾಗಿ ಟಾಲಿವುಡ್‌ಗೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ಎಂಟ್ರಿ?

ಚಿತ್ರರಂಗಕ್ಕೂ ಕ್ರಿಕೆಟ್‌ಗೂ ಬಿಡಿಸಲಾರದ ನಂಟು. ಕ್ರಿಕೆಟಿಗರು ಸಿನಿಮಾ ನಟಿಯರ ಜೊತೆ ಡೇಟಿಂಗ್ ನಡೆಸೋದು, ಮದುವೆ ಆಗಿರೋ ಉದಾಹರಣೆಗಳಿವೆ. ಅದೇ ರೀತಿ ಕ್ರಿಕೆಟಿಗರು ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಖ್ಯಾತ ಕ್ರಿಕೆಟಿಗರ ಬಯೋಪಿಕ್‌ಗಳು ತೆರೆಮೇಲೆ ಬಂದಿದೆ.

ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ತಮ್ಮದೇ ಬಯೋಪಿಕ್‌ ಸಿನಿಮಾದಲ್ಲಿ ನಟಿಸಿದ್ದರು. ಇದೀಗ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಚಿತ್ರರಂಗಕ್ಕೆ ಎಂಟ್ರಿ ಕೊಡುವ ಬಗ್ಗೆ ಚರ್ಚೆ ನಡೀತಿದೆ. ಕಳೆದೆರಡು ವರ್ಷಗಳಿಂದ ಸಾರಾ ಬಾಲಿವುಡ್‌ ಎಂಟ್ರಿ ಬಗ್ಗೆ ಗುಸುಗುಸು ಕೇಳಿಬರುತ್ತಲೇ ಇದೆ. ಆದರೆ ಅದು ನಿಜವಾಗಿಲ್ಲ. ಇದೀಗ ಆಕೆ ಟಾಲಿವುಡ್‌ಗೆ ಎಂಟ್ರಿ ಕೊಡ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

RC16: Sachin Tendulkar daughter Sara to star opposite Ram Charan in Buchi Babus next?

ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್ ಜೊತೆ ಸಾರಾ ತೆಂಡೂಲ್ಕರ್ ಹೆಸರು ತಳುಕು ಹಾಕಿಕೊಂಡಿದೆ. ಇಬ್ಬರೂ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಕೇಳಿಬರುತ್ತಿದೆ. ಆದರೆ ಇಬ್ಬರೂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂದು ಕೆಲವರು ಇದೇ ನಿಜ ಎಂದು ವಾದಿಸುತ್ತಿದ್ದಾರೆ. ಮತ್ತೊಂದು ಕಡೆ ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಸಂದರ್ಶನವೊಂದರಲ್ಲಿ ಗಿಲ್- ಸಾರಾ ಡೇಟಿಂಗ್ ನಡೆಸುತ್ತಿದ್ದಾರೆ, ಶೀಘ್ರದಲ್ಲೇ ಮದುವೆ ಆಗುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದರು.

ರಾಮ್‌ಚರಣ್ ಮುಂದಿನ ಚಿತ್ರದಲ್ಲಿ ಸಾರಾ ತೆಂಡೂಲ್ಕರ್ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಸದ್ಯ ಶಂಕರ್ ನಿರ್ದೇಶನದ 'ಗೇಮ್‌ ಚೇಂಜರ್' ಚಿತ್ರದಲ್ಲಿ ಚರಣ್ ನಟಿಸುತ್ತಿದ್ದಾರೆ. ಬಳಿಕ ಬುಚ್ಚಿಬಾಬು ನಿರ್ದೇಶನದ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನು ಹೆಸರಿಡದ ಈ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ RC16 ಟೈಟಲ್‌ನಲ್ಲಿ ನಡೀತಿದೆ. RC16 ಚಿತ್ರಕ್ಕೆ ಯಾರು ನಾಯಕಿ ಆಗ್ತಾರೆ? ಎನ್ನುವ ವಿಚಾರ ಭಾರೀ ಕುತೂಹಲ ಮೂಡಿಸಿದೆ.

RC16: Sachin Tendulkar daughter Sara to star opposite Ram Charan in Buchi Babus next?

RC16 ಚಿತ್ರದಲ್ಲಿ ಚರಣ್ ಜೋಡಿಯಾಗಿ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು. ಇದೀಗ ನಿರ್ದೇಶಕರು ಸಚಿನ್ ಪುತ್ರಿಯನ್ನು ಒಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ವದಂತಿ ಶುರುವಾಗಿದೆ. ಮೆಗಾ ಸ್ಟಾರ್ ಚಿರಂಜೀವಿ ಮಗನ ಜೊತೆ ಮಾಸ್ಟರ್‌ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ನಟಿಸಿದ್ರೆ ಸಹಜವಾಗಿಯೇ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚುತ್ತದೆ, ಈ ಕ್ರೇಜಿ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಚೆನ್ನಾಗಿರುತ್ತದೆ ಅನ್ನೋದು ಅಭಿಮಾನಿಗಳ ಆಸೆಯಾಗಿದೆ.

RC16 ಚಿತ್ರಕ್ಕೆ ಆಸ್ಕರ್ ವಿಜೇತ ಎ. ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಲಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದೆ. ಈ ಹಿಂದೆ ಜಾನ್ವಿ ಕಪೂರ್, ಮೃಣಾಲ್ ಟಾಕೂರ್, ರವೀನಾ ಟಂಡನ್ ಮಗಳ ಹೆಸರು ಚಿತ್ರದ ನಾಯಕಿ ಪಾತ್ರಕ್ಕೆ ಕೇಳಿಬಂದಿತ್ತು. ಆದರೆ ಜಾನ್ವಿ, ಜ್ಯೂ. ಎನ್‌ಟಿಆರ್ ಜೊತೆ 'ದೇವರ' ಚಿತ್ರಕ್ಕೆ ಆಯ್ಕೆ ಆಗಿದ್ದರು. ಬಳಿಕ ಸಾಯಿ ಪಲ್ಲವಿ ಹೆಸರು ಚಾಲ್ತಿಗೆ ಬಂತು. ಇದೀಗ ಸಾರಾ ತೆಂಡೂಲ್ಕರ್ ಹೆಸರು ಚರ್ಚೆಗೆ ಬಂದಿದೆ.

ಅಕ್ಟೋಬರ್ 12, 1997ರಲ್ಲಿ ಜನಿಸಿದ ಸಾರಾ, ಮುಂಬೈನಲ್ಲೇ ಶಾಲಾ ಶಿಕ್ಷಣ ಮುಗಿಸಿದರು. ಲಂಡನ್ ಯೂನಿವರ್‌ಸಿಟಿಯಲ್ಲಿ ಪದವಿ ಪಡೆದುಕೊಂಡಿದ್ದಾರೆ. ಮಾಡೆಲಿಂಗ್‌ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದು ಒಂದಷ್ಟು ಉಡುಗೆ ಬ್ರ್ಯಾಂಡ್‌ಗಳ ರಾಯಭಾರಿಯಾಗಿದ್ದಾರೆ.

ನಿರ್ದೇಶಕ ಸುಕುಮಾರ್ ಗರಡಿಯಲ್ಲಿ ಪಳಗಿನ ಬುಚ್ಚಿಬಾಬು 'ಉಪ್ಪೆನ' ಸಿನಿಮಾ ಮಾಡಿ ಸಕ್ಸಸ್ ಕಂಡಿದ್ದರು. ಇದೀಗ RC16 ಚಿತ್ರದಲ್ಲಿ ಹಳ್ಳಿ ಸೊಗಡಿನ ಕತೆ ಹೇಳಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. 'ರಂಗಸ್ಥಳಂ' ಚಿತ್ರದಲ್ಲಿ ಚರಣ್ ಚಿಟ್ಟಿಬಾಬು ಆಗಿ ಗೆದ್ದಿದ್ದರು. ಅದೇ ರೀತಿಯ ಪಾತ್ರವನ್ನು ಈ ಚಿತ್ರದಲ್ಲೂ ಡಿಸೈನ್ ಮಾಡಲಾಗ್ತಿದೆಯಂತೆ. ಶೀಘ್ರದಲ್ಲೇ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

More from Filmibeat

English summary
Sachin Tendulkar daughter Sara To Make Tollywood Debut Opposite Ram Charan in RC16;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X