For Quick Alerts
  ALLOW NOTIFICATIONS  
  For Daily Alerts

  ಕ್ರಿಕೆಟರ್ ಯಜುವೇಂದ್ರ ಚಾಹಲ್ ಮುಂದೆ ಕ್ಲೀನ್ ಬೌಲ್ಡ್ ಆದ ಕನ್ನಡ ನಟಿ!

  By Harshitha
  |

  ನಟ ಗುರುನಂದನ್ ಅಭಿನಯದ 'ಫಸ್ಟ್ Rank ರಾಜು' ಚಿತ್ರವನ್ನ ನೀವು ನೋಡಿದ್ರೆ, ನಿಮಗೆ 'ಮೇರಿ' ಪಾತ್ರಧಾರಿ ತನಿಷ್ಕಾ ಕಪೂರ್ ಪರಿಚಯ ಇದ್ದೇ ಇರುತ್ತೆ. ಈಗೀಗಷ್ಟೇ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ನಟಿ ತನಿಷ್ಕಾ ಕಪೂರ್ ಇದೀಗ ಗಾಸಿಪ್ ಕಾಲಂಗೆ ಆಹಾರವಾಗಿದ್ದಾರೆ.

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹಾಗೂ ನಟಿ ತನಿಷ್ಕಾ ಕಪೂರ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗುಸು ಗುಸು ಎಲ್ಲ ಕಡೆ ಕೇಳಿ ಬರುತ್ತಿದೆ. ಸದ್ಯದಲ್ಲೇ ಯಜುವೇಂದ್ರ ಚಾಹಲ್ ಹಾಗೂ ನಟಿ ತನಿಷ್ಕಾ ಕಪೂರ್ ಮದುವೆ ಆಗಲಿದ್ದಾರೆ ಅಂತ ಹೇಳುವವರೂ ಇದ್ದಾರೆ.

  ಐಪಿಎಲ್ 2018 ಮುಗಿದ ನಂತರ ಯಜುವೇಂದ್ರ ಚಾಹಲ್-ತನಿಷ್ಕಾ ಕಪೂರ್ ನಿಶ್ಚಿತಾರ್ಥ ನಡೆಯಲಿದ್ದು, ಮದುವೆ ದಿನಾಂಕ ಇನ್ನೂ ನಿಗದಿ ಆಗಿಲ್ಲ.

  ಕನ್ನಡ ನಟಿಗೆ ಮನಸೋತ ಸ್ಪಿನ್ನರ್ ಯಜುವೇಂದ್ರ ಚಾಹಲ್!

  ಹರಿಯಾಣ ಮೂಲದ ಯಜುವೇಂದ್ರ ಚಾಹಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 58 ಪಂದ್ಯಗಳನ್ನಾಡಿದ್ದು, 73 ವಿಕೆಟ್ ಗಳನ್ನು ಗಳಿಸಿದ್ದಾರೆ. ಇತ್ತ ದೆಹಲಿ ಮೂಲದವರಾದರೂ ನಟಿ ತನಿಷ್ಕಾ ಕಪೂರ್ ಬೆಳೆದಿದ್ದೆಲ್ಲ ಮಂಗಳೂರು ಹಾಗೂ ಬೆಂಗಳೂರಿನಲ್ಲಿ.

  'ಮಿಸ್ ಟೀನ್ ಡೀವಾ' ಸೇರಿದಂತೆ ಕೆಲ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ತನಿಷ್ಕಾ ಕಪೂರ್ 2013 ರಲ್ಲಿ 'ಮಿಸ್ ಮಂಗಳೂರು' ಟೈಟಲ್ ಪಡೆದರು.

  ಕ್ರಿಕೆಟರ್ ಗಳು ಸಿನಿಮಾ ನಟಿಯರನ್ನು ಮದುವೆ ಆಗುವುದು ಹೊಸತೇನಲ್ಲ. ಮನ್ಸೂರ್ ಅಲಿ ಖಾನ್ ಪಟೌಡಿ-ಶರ್ಮಿಳಾ ಟ್ಯಾಗೋರ್, ಯುವರಾಜ್ ಸಿಂಗ್-ಹಜೇಲ್ ಕೀಚ್, ಜಹೀರ್ ಖಾನ್-ಸಾಗರೀಕ ಘಟ್ಗೆ, ಹರ್ಭಜನ್ ಸಿಂಗ್-ಗೀತಾ ಬಸ್ರಾ, ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮ ಜೋಡಿಯಂತೆ ಯಜುವೇಂದ್ರ ಚಾಹಲ್ ಹಾಗೂ ತನಿಷ್ಕಾ ಕಪೂರ್ ಕೂಡ ಆಗಬಹುದು.

  English summary
  According to the latest Grapevine, RCB Spinner Yazvendra Chahal to get married to Kannada Actress Thanishka Kapoor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X