For Quick Alerts
  ALLOW NOTIFICATIONS  
  For Daily Alerts

  ಮಹೇಶ್ ತಂದೆಯಾಗಿ ಸ್ಟಾರ್ ಹೀರೋ: ಇಬ್ಬರ ನಡುವಿನ ವಯಸ್ಸಿನ ಅಂತರ ಬರೀ ಏಳು ವರ್ಷ!

  |

  ಸೂಪರ್ ಸ್ಟಾರ್ ಮಹೇಶ್ ಬಾಬು ಟಾಲಿವುಡ್‌ನಲ್ಲಿ ಸೂಪರ್‌ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಇದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಮುಂದಿನ ಸಿನಿಮಾವನ್ನು ಸಿಕ್ಕಾಪಟ್ಟೆ ಯೋಚನೆ ಮಾಡಿ ಒಪ್ಪಿಕೊಳ್ಳುತ್ತಿದ್ದಾರೆ.

  ಇತ್ತೀಚೆಗೆ ಮಹೇಶ್ ಬಾಬು ಸೂಪರ್‌ ಡೂಪರ್‌ ಫಾರ್ಮ್‌ನಲ್ಲಿದ್ದಾರೆ. ಕೊರಟಾಲ ಶಿವ ಜೊತೆಗಿನ 'ಭರತ್ ಅನೆ ನೇನು' ನಿಂದ 'ಮಹರ್ಷಿ' ಮತ್ತು 'ಸರಿಲೇರು ನೀಕೆವ್ವರು' ಅಂತ ಸೂಪರ್ ಹಿಟ್ ಸಿನಿಮಾ ನೀಡಿದ್ದರು. ಆದರೆ ಅದ್ಯಾಕೋ 'ಸರ್ಕಾರು ವಾರಿ ಪಾಟ' ಸಿನಿಮಾ ಬಾಕ್ಸಾಫೀಸ್‌ನಲ್ಲಿಅಂದ್ಕೊಂಡಷ್ಟು ಸದ್ದು ಮಾಡಲಿಲ್ಲ.

  ಮಹೇಶ್ ಬಾಬು ಸಿನಿಮಾ ಮುಗಿಸಲು ರಾಜಮೌಳಿಗೆ ಬೇಕು 3 ವರ್ಷ: ಫ್ರಾನ್ಸ್‌ನಲ್ಲಿ VFX!ಮಹೇಶ್ ಬಾಬು ಸಿನಿಮಾ ಮುಗಿಸಲು ರಾಜಮೌಳಿಗೆ ಬೇಕು 3 ವರ್ಷ: ಫ್ರಾನ್ಸ್‌ನಲ್ಲಿ VFX!

  ಈ ಕಾರಣಕ್ಕೆ ರಾಜಮೌಳಿಗೂ ಮುನ್ನ ಪದ ಮಾಂತ್ರಿಕ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೇ ವೇಳೆ ಪ್ರಿನ್ಸ್ ಮಹೇಶ್ ಬಾಬು ಹಾಗೂ ತ್ರಿವಿಕ್ರಮ್ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ಸ್ಟಾರ್ ಹೀರೋ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಹೊರಬಿದ್ದಿದೆ. ಅವರು ಯಾರು ಅನ್ನುವುದನ್ನು ನೀವೇ ನೋಡಿ!

  ತ್ರಿವಿಕ್ರಮ್-ಮಹೇಶ್ ಬಾಬು ಸಿನಿಮಾ

  ತ್ರಿವಿಕ್ರಮ್-ಮಹೇಶ್ ಬಾಬು ಸಿನಿಮಾ

  ಪದ ಮಾಂತ್ರಿಕ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಸಿನಿಮಾ ಶೀಘ್ರದಲ್ಲಿಯೇ ಸೆಟ್ಟೇರಲಿದೆ. ರಾಧಾಕೃಷ್ಣ ಎಂಬುವವರು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಮ್ಮೆ ಮಹೇಶ್ ಬಾಬುಗೆ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದು, ಈ ಬಗ್ಗೆ ನಿರೀಕ್ಷೆಗಳು ಗರಿಗೆದರಿವೆ. ಅದರಲ್ಲೂ ದಿಗ್ಗಜರು ಒಂದಾಗಿರುವ ಸಿನಿಮಾ ಬಗ್ಗೆ ಮಹೇಶ್ ಅಭಿಮಾನಿಗಳಲ್ಲಿಯೂ ಕುತೂಹಲ ದುಪ್ಪಟ್ಟಾಗಿದೆ.

  ರಾಜಮೌಳಿಗೆ ಸ್ಟೋರಿ ಆಯ್ಕೆಯಲ್ಲಿ ಗೊಂದಲ: ಮಹೇಶ್ ಬಾಬು ಸಿನಿಮಾ ಸೆಟ್ಟೇರಲ್ವಾ?ರಾಜಮೌಳಿಗೆ ಸ್ಟೋರಿ ಆಯ್ಕೆಯಲ್ಲಿ ಗೊಂದಲ: ಮಹೇಶ್ ಬಾಬು ಸಿನಿಮಾ ಸೆಟ್ಟೇರಲ್ವಾ?

  ಪ್ರೀ-ಪ್ರೊಡಕ್ಷನ್ ಕೆಲಸ ಕಂಪ್ಲೀಟ್

  ಪ್ರೀ-ಪ್ರೊಡಕ್ಷನ್ ಕೆಲಸ ಕಂಪ್ಲೀಟ್

  ತ್ರಿವಿಕ್ರಮ್ ಈಗಾಗಲೇ ಪ್ರೀ-ಪ್ರೊಡಕ್ಷನ್ ಕೆಲಸ ಮುಗಿಸಿದ್ದಾರೆ. ಟಾಲಿವುಡ್‌ ಮೂಲಗಳ ಪ್ರಕಾರ, ತ್ರಿವಿಕ್ರಮ್ ಈಗಾಗಲೇ ಡೈಲಾಗ್ ಹಾಗೂ ಸ್ಕ್ರೀನ್ ಪ್ಲೇಯನ್ನು ಮುಗಿಸಿದ್ದಾರೆ. ಇದರೊಂದಿಗೆ ಸಂಗೀತ ನಿರ್ದೇಶಕ ತಮನ್ ಹಾಡುಗಳನ್ನೂ ಕಂಪ್ಲೀಟ್ ಮಾಡಿದ್ದಾರೆ. ಇದೀಗ ಸಿನಿಮಾದ ಸ್ಟಾರ್‌ ಕಾಸ್ಟ್‌ ಬಗ್ಗೆ ಗಮನ ಹರಿಸಿದ್ದಾರೆ ಎಂದು ಟಾಲಿವುಡ್ ಹೇಳುತ್ತಿದೆ. ಈ ವೇಳೆ ಕನ್ನಡದ ಸ್ಟಾರ್ ನಟನ ಹೆಸರು ಜೋರಾಗಿ ಓಡಾಡುತ್ತಿದೆ.

  ಮಹೇಶ್ ಬಾಬುಗೆ ಉಪ್ಪಿ ತಂದೆ

  ಮಹೇಶ್ ಬಾಬುಗೆ ಉಪ್ಪಿ ತಂದೆ

  ಸುಮಾರು 11 ವರ್ಷಗಳ ಬಳಿಕ ತ್ರಿವಿಕ್ರಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್ ಸಿನಿಮಾ ಮತ್ತೆ ಸೆಟ್ಟೇರುತ್ತಿದೆ. ಈ ಪ್ರತಿಷ್ಠಿತ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಇನ್ನೊಬ್ಬ ಸ್ಟಾರ್ ನಟನ ಹೆಸರು ಟಾಲಿವುಡ್‌ನಲ್ಲಿ ಓಡಾಡುತ್ತಿದೆ. ಈ ಸಿನಿಮಾದಲ್ಲಿ ರಿಯಲ್‌ ಸ್ಟಾರ್ ಉಪೇಂದ್ರ, ಮಹೇಶ್ ಬಾಬು ತಂದೆಯ ಪಾತ್ರದಲ್ಲಿ ನಟಿಸಲಿದ್ದಾರಂತೆ. ಟಾಲಿವುಡ್‌ನಲ್ಲಿ ಇಂತಹದ್ದೊಂದು ಲೇಟೆಸ್ಟ್ ಮಾಹಿತಿ ಹರಿದಾಡುತ್ತಿದೆ.

  ಮಹೇಶ್ ಬಾಬುಗೆ ಬಾಲಿವುಡ್ ನಟಿಯರು ಬೇಡವಂತೆ, ರಾಜಮೌಳಿಗೆ ಷರತ್ತು!ಮಹೇಶ್ ಬಾಬುಗೆ ಬಾಲಿವುಡ್ ನಟಿಯರು ಬೇಡವಂತೆ, ರಾಜಮೌಳಿಗೆ ಷರತ್ತು!

  ಉಪ್ಪಿ ತಂದೆ ಆಗುವುದು ಹೇಗೆ?

  ಉಪ್ಪಿ ತಂದೆ ಆಗುವುದು ಹೇಗೆ?

  ಸೂಪರ್‌ ಸ್ಟಾರ್ ಮಹೇಶ್ ಬಾಬುಗೆ ರಿಯಲ್‌ಸ್ಟಾರ್ ಉಪೇಂದ್ರ ತಂದೆ ಅಂದ್ರೆ ಹೇಗೆ? ಇಬ್ಬರ ವಯಸ್ಸಿನ ಅಂತರ ಹೆಚ್ಚೇನೂ ಇಲ್ಲ. ಹೀಗಿದ್ದರೂ, ಉಪೇಂದ್ರ ಪ್ರಿನ್ಸ್ ತಂದೆ ಆಗುವುದು ಹೇಗೆ? ಅನ್ನೋದೇ ಮ್ಯಾಟರ್. ಇಲ್ಲಿ ಮಹೇಶ್ ಬಾಬು ಹಾಗೂ ಉಪೇಂದ್ರ ಇಬ್ಬರ ಒಂದೇ ವೇಳೆ ತೆರೆ ಮೇಲೆ ಕಾಣಿಸಿಕೊಳ್ಳುವುದಿಲ್ಲವಂತೆ. ಉಪ್ಪಿಯದ್ದು ಫ್ಲ್ಯಾಶ್ ಬ್ಯಾಕ್ ಸೀನ್‌ಗಳು. ಈ ಕಾರಣಕ್ಕೆ ಉಪೇಂದ್ರ ತಂದೆಯ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತು ಹೇಳಿಬರುತ್ತಿದೆ.

  English summary
  Real Star Upendra To Play Mahesh Babu Father In Trivikram Next Movie, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X