ನಯಾಪೈಸೆ ಸಂಭಾವನೆಯಿಲ್ಲದೇ 'ಭೋಳಾ ಶಂಕರ'ನಾಗಿ ಚಿರು ಆರ್ಭಟ? ಕಾರಣ ಏನು?
ಮೆಗಾಸ್ಟಾರ್ ಚಿರಂಜೀವಿ ನಟನೆಯ 'ಭೋಳಾ ಶಂಕರ್' ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಮಾಸ್ ಮಸಾಲಾ ಎಂಟರ್‌ಟೈನರ್ ಸ್ಯಾಂಪಲ್‌ಗೆ ಮಿಶ್ರಪ್ರತಿಕ್ರಿಯೆ ಸಿಕ್ತಿದೆ. ತಮಿಳಿನ 'ವೇದಾಳಂ' ರೀಮೆಕ್ ಆಗಿರುವ ಈ ಚಿತ್ರಕ್ಕೆ ಮೆಹರ್ ರಮೇಶ್ ಆಕ್ಷನ್ ಕಟ್ ಹೇಳಿದ್ದಾರೆ. ತಮಿಳಿನಲ್ಲಿ ಅಜಿತ್ ಮಾಡಿದ್ದ ಪಾತ್ರವನ್ನು ಚಿರು ನಿಭಾಯಿಸಿದ್ದಾರೆ. ಟ್ರೈಲರ್ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.
ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ ಬಳಿಕ ಚಿರಂಜೀವಿ ಅಭಿಮಾನಿಗಳನ್ನು ಮೆಚ್ಚಿಸುವಂತೆ ಸಿನಿಮಾಗಳನ್ನು ಹೆಚ್ಚು ಹೆಚ್ಚು ಟ್ರೈ ಮಾಡ್ತಿದ್ದಾರೆ. ಐತಿಹಾಸಿಕ ಸಿನಿಮಾ 'ಸೈರಾ ನರಸಿಂಹ ರೆಡ್ಡಿ' ಸೋಲುಂಡಿತ್ತು. ಹಾಗಾಗಿ ಮತ್ತೆ ಯಾವುದೇ ಪ್ರಯೋಗ ಮಾಡಲು ಚಿರು ಸಿದ್ಧರಿಲ್ಲ. ಈ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ 'ವಾಲ್ತೇರು ವೀರಯ್ಯ' ಆಗಿ ಮೆಗಾಸ್ಟಾರ್ ಗೆದ್ದಿದ್ದರು. ಅದೇ ಜೋಶ್‌ನಲ್ಲಿ 'ಭೋಳಾ ಶಂಕರ್' ಸಿನಿಮಾದಲ್ಲಿ ನಟಿಸಿದ್ದಾರೆ. ತಮನ್ನಾ ನಾಯಕಿಯಾಗಿ ಸಾಥ್ ಕೊಟ್ಟಿದ್ದು ಕೀರ್ತಿ ಸುರೇಶ್ ಚಿರು ಸಹೋದರಿಯಾಗಿ ಬಣ್ಣ ಹಚ್ಚಿದ್ದಾರೆ.

ಎಕೆ ಎಂಟರ್‌ಟೈನ್‌ಮೆಂಟ್ಸ್ ಹಾಗೂ ಕ್ರಿಯೇಟಿವ್ ಕಮರ್ಷಿಯಲ್ ಬ್ಯಾನರ್‌ಗಳು ಜಂಟಿಯಾಗಿ 'ಭೋಳಾ ಶಂಕರ್' ಸಿನಿಮಾ ನಿರ್ಮಾಣ ಮಾಡ್ತಿವೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ. ಈಗಾಗಲೇ ಚಿತ್ರದ ಲಿರಿಕಲ್ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಅಭಿಮಾನಿಗಳ ಮನಗೆದ್ದಿದೆ. ನಿಧಾನವಾಗಿ ಸಿನಿಮಾ ಪ್ರಚಾರ ಶುರು ಮಾಡುತ್ತಿದ್ದಾರೆ.
ಸಂಭಾವನೆ ಇಲ್ಲದೇ ಚಿರು ನಟನೆ?
'ಭೋಳಾ ಶಂಕರ್' ಒಂದು ರೂಪಾಯಿ ಸಂಭಾವನೆ ಪಡೆಯದೇ ಚಿರಂಜೀವಿ ನಟಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಚಿತ್ರವೊಂದಕ್ಕೆ ಚಿರು 50 ಕೋಟಿ ರೂ. ಚಾರ್ಚ್ ಮಾಡುತ್ತಾರೆ ಎನ್ನುವ ಮಾತಿದೆ. ಆದರೆ ಈ ಚಿತ್ರಕ್ಕಾಗಿ ಸಂಭಾವನೆ ಇಲ್ಲದೇ ನಟಿಸುತ್ತೀನಿ ಎಂದಿದ್ದಾರಂತೆ. ಇದೇ ವಿಚಾರ ಈ ಟಾಲಿವುಡ್‌ನಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

'ಭೋಳಾ ಶಂಕರ್' ಲಾಭದಲ್ಲಿ ಪಾಲು?
ಚಿರು ಸಂಭಾವನೆ ಪಡೆಯದೇ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಅಂದರೆ ಚಿತ್ರದಿಂದ ಅವರಿಗೆ ಯಾವುದೇ ಆದಾಯ ಬರಲ್ಲ ಎಂದು ಅರ್ಥವಲ್ಲ. ಸಂಭಾವನೆ ರೂಪದಲ್ಲಿ ಯಾವುದೇ ಹಣ ಬೇಡ. ಚಿತ್ರದಿಂದ ಬರುವ ಲಾಭದಲ್ಲಿ ಪಾಲು ಪಡೆಯುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. 'ಭೋಳಾ ಶಂಕರ್' ಸಿನಿಮಾ ಮೇಲೆ ಚಿರು ಭಾರೀ ನಂಬಿಕೆ ಇಟ್ಟುಕೊಂಡಿದ್ದಾರೆ. ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡುತ್ತದೆ. ಕೋಟಿ ಕೋಟಿ ಕೊಳ್ಳೆ ಹೊಡೆಯುವುದು ಖಚಿತ ಎನ್ನುವ ಭರವಸೆಯಲ್ಲಿದ್ದಾರೆ ಎನ್ನಲಾಗ್ತಿದೆ. ಹಾಗಾಗಿಯೇ ಈಗ ಸಂಭಾವನೆ ಬೇಡ ಎಂದಿರುವುದಾಗಿ ಗುಸುಗುಸು ಕೇಳಿಬರ್ತಿದೆ.
'ಭೋಳಾ' ಪ್ರೀ ರಿಲೀಸ್ ಬ್ಯುಸಿನೆಸ್
ಚಿರು ಕ್ರೇಜ್‌ಗೆ ತಕ್ಕಂತೆ ಚಿತ್ರದ ಥ್ರಿಯೇಟ್ರಿಕಲ್ ರೈಟ್ಸ್, ಆಡಿಯೋ, ಡಿಜಿಟಲ್ ರೈಟ್ಸ್ ಒಳ್ಳೆ ಬೆಲೆಲೆ ಮಾರಾಟವಾಗಿದೆ ಎನ್ನಲಾಗ್ತಿದೆ. ಅದೇ ಕಾರಣಕ್ಕೆ ಚಿರು ಲಾಭದಲ್ಲಿ ಪಾಲು ಪಡೆಯುವ ನಿರ್ಧಾರ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸ್ಟಾರ್ ನಟರು ಈ ರೀತಿ ಲಾಭದಲ್ಲಿ ಪಾಲು ಕೇಳುವ ಪ್ರವೃತ್ತಿ ಹೆಚ್ಚಾಗ್ತಿದೆ. 'ಭೋಳಾ ಶಂಕರ್' ಚಿತ್ರಕ್ಕೆ ಡುಡ್ಲೆ ಸಿನಿಮಾಟೋಗ್ರಫಿ, ಮಹತಿ ಸ್ವರ ಸಾಗರ್ ಸಂಗೀತ, ಮಮಿಡಲ ತಿರುಪತಿ ಸಂಭಾಷಣೆ ಇದೆ.
ಚಿರುಗೆ ಮತ್ತೊಂದು ಗೆಲುವು?
ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಚಿರು ಸಿಕ್ಕಾಪಟ್ಟೆ ಜೋಶ್‌ನಲ್ಲಿ ಸಿನಿಮಾಗಳನ್ನು ಮಾಡ್ತಿದ್ದಾರೆ. ಪುತ್ರ ರಾಮ್‌ಚರಣ್‌ಗೆ ಪೈಪೋಟಿ ಕೊಡುವಂತೆ ಯಂಗ್ ಅಂಡ್ ಎನರ್ಜಿಟಿಕ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಯಾಕೆ ಅಷ್ಟಾಗಿ ಸಿನಿಮಾ ಮ್ಯಾಜಿಕ್ ನಡೀತಿಲ್ಲ. ಖೈದಿ ನಂಬರ್ 150 ಒಂದು ಹಂತಕ್ಕೆ ಗೆದ್ದಿತ್ತು. ಬಳಿಕ ಬಂದ ಸೈರಾ, ಆಚಾರ್ಯ, ಗಾಡ್ ಫಾದರ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದ್ದವು. ಆದರೆ ವಾಲ್ತೇರು ವೀರಯ್ಯ ಮಾತ್ರ ಗೆಲುವಿನ ದಡ ಸೇರಿತ್ತು. 'ಭೋಳಾ ಶಂಕರ್' ಕಥೆ ಏನಾಗುತ್ತೆ? ಕಾದು ನೋಡಬೇಕಿದೆ.


Click it and Unblock the Notifications











