India
  For Quick Alerts
  ALLOW NOTIFICATIONS  
  For Daily Alerts

  'ಕನ್ನಡದ ಕೋಟ್ಯಾಧಿಪತಿ'ಗೆ ಇವರೆಲ್ಲಾ ಎಷ್ಟು ಸಂಭಾವನೆ ಕೇಳಿದ್ರು ಗೊತ್ತಾ?

  By ಸೋನು ಗೌಡ
  |

  ಚಂದನವನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿದ್ದ 'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮ ಹಿಟ್ ಆಗಿರೋ ವಿಷಯ ನಿಮಗೆ ತಿಳಿದೇ ಇದೆ ಅಲ್ವಾ.

  ಇದೀಗ ಅದೇ ಕಾರ್ಯಕ್ರಮ ಮತ್ತೊಂದು ಸೀಸನ್ ಗೆ ತಯಾರಾಗಿದ್ದು, ಖಾಸಗಿ ಚಾನಲ್ ಸುವರ್ಣಾ ವಾಹಿನಿಯಲ್ಲಿ ಮೂಡಿಬರಲಿದೆ. ಇದೀಗ ಕೋಟ್ಯಾಧಿಪತಿಯ ಸಾರಥ್ಯ ಯಾರು ವಹಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ಗಾಂಧಿನಗರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ.

  ಕಳೆದ ಕೋಟ್ಯಾಧಿಪತಿ ಸೀಸನ್ ಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಉತ್ತಮ ನಿರೂಪಕರಾಗಿ ಹೊರಹೊಮ್ಮಿ ಎಲ್ಲರಿಂದ ಸೈ ಎನಿಸಿಕೊಳ್ಳುವುದರ ಜೊತೆಗೆ ಜನರಿಂದ ಪ್ರಶಂಸೆ ಗಿಟ್ಟಿಸಿಕೊಂಡು, ಎಲ್ಲರ ಪ್ರೀತಿಪಾತ್ರರಾಗಿದ್ದರು. ಜೊತೆಗೆ ಕಾರ್ಯಕ್ರಮ ನಿರೂಪಿಸಿದ್ದಕ್ಕಾಗಿ 4 ಕೋಟಿ ರೂಪಾಯಿ ಸಂಭಾವನೆ ಕೂಡ ಪಡೆದಿದ್ದರಂತೆ.['ಕನ್ನಡದ ಕೋಟ್ಯಾಧಿಪತಿ', ಬೆನ್ನು ಹತ್ತಲಿದ್ದಾರ, ಲಕ್ಕಿ ಸ್ಟಾರ್ ರಮ್ಯಾ?]

  ಆದರೆ ಈ ಬಾರಿ ಪವರ್ ಸ್ಟಾರ್ ಪುನೀತ್ ಬದಲಾಗಿ ಬೇರೆ ಯಾರನ್ನಾದರೂ ಆಯ್ಕೆ ಮಾಡೋಣ ಎಂದು ಸುವರ್ಣ ವಾಹಿನಿ ನಿರ್ಧಾರ ಮಾಡಿದೆಯಂತೆ. ಹಾಗೆಯೇ ಯಾರು ನಿರೂಪಕರಾಗಬಹುದು ಎಂದು ಸಿಕ್ಕಾ ಪಟ್ಟೆ ತಲೆ ಕೆಡಿಸಿಕೊಂಡು ಹುಡುಕಾಟ ನಡೆಸಿದ್ದಾರಂತೆ.

  ಅಂದಹಾಗೆ ಇದಕ್ಕೆಲ್ಲಾ ಮೂಲ ಕಾರಣ ನಟ ಪುನೀತ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿದ್ದಾರೆ ಎಂದು ಅಲ್ಲಲ್ಲಿ ಗಾಳಿ ಸುದ್ದಿ ಹಬ್ಬಿದೆ. ಮೂಲಗಳ ಪ್ರಕಾರ ಪವರ್ ಸ್ಟಾರ್ ಪುನೀತ್ ಅವರು ಸುಮಾರು 5 ಕೊಟಿ ಡಿಮ್ಯಾಂಡ್ ಮಾಡಿದ್ದಾರಂತೆ. ಹೀಗಾಗಿ ಸುವರ್ಣ ಮುಖ್ಯಸ್ಥರು ಮೋಹಕ ತಾರೆ ರಮ್ಯಾ ಅವರ ಮನೆ ಬಾಗಿಲು ತಟ್ಟಿದ್ದಾರಂತೆ. ಆದರೆ ಪೂರ್ತಿ ಕನ್ನಡ ಸರಿಯಾಗಿ ಬಾರದ ಈಕೆ ಇನ್ನೂ ಹಸಿರು ನಿಶಾನೆ ತೋರಿಲ್ಲ ಎನ್ನಲಾಗಿದೆ.

  ಈ ನಡುವೆ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೋಟ್ಯಾಧಿಪತಿ ಹಾಟ್ ಸೀಟ್ ಮೈಟೆಂನ್ ಮಾಡಲು ಸುವರ್ಣ ವಾಹಿನಿ ಆಲೋಚನೆ ಮಾಡಿದ್ದು, ಯಶ್ ಜೊತೆ ಒಂದು ರೌಂಡ್ ಮಾತುಕತೆ ಕೂಡ ಮುಗಿಸಿದ್ದಾರೆ ಎಂದು ಮಾಹಿತಿ ಲಭಿಸಿದೆ.

  ಆದರೆ ಯಶ್ ಇಟ್ಟ ಬೇಡಿಕೆ ಎಷ್ಟು ಅಂತೀರಾ?, ಬರೋಬ್ಬರಿ 10 ಕೊಟಿ ರೂಪಾಯಿ ಬೇಡಿಕೆ ಇಟ್ಟ ಕಾರಣ ಚಾನಲ್ ಅವರನ್ನು ಸೈಡಿಗೆ ಇಟ್ಟಿದ್ದಾರೆ. ಆದರೂ ಮನ ಒಲಿಸುವ ಕಾರ್ಯ ಮುಂದುವರಿದಿದ್ದು, ಏನಾಗುತ್ತೆ ಅಂತ ಮುಂದೆ ನೋಡಬೇಕಿದೆ.

  ಒಟ್ನಲ್ಲಿ ಯಶ್ ಹಾಗೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಒಪ್ಪದಿದ್ದಲ್ಲಿ , ಕೊನೆಗೆ ಹಳೇ ಗಂಡನ ಪಾದವೇ ಗತಿ ಅಂತ ಪವರ್ ಸ್ಟಾರ್ ಪುನೀತ್ ಅವರೇ ಕಾರ್ಯಕ್ರಮ ನಡೆಸಿಕೊಡುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ. ಅಂತೂ ಇಂತೂ ಈ ಬಾರಿ ಕೋಟ್ಯಾಧಿಪತಿ ಯಾರ ಮಡಿಲಿಗೆ ಬೀಳುತ್ತೆ ಅಂತ ಕಾದು ನೋಡಬೇಕು.

  English summary
  Remuneration demand from the sandalwood stars for 'Kannada Kotyadipathi' reality show which will be telecasted on Suvarna Kannada Channel soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X