ಹರ್ಷದ ಕೂಳಿಗಾಗಿ ವರ್ಷದ ಕೂಳು ಕಳೆದುಕೊಳ್ಳುತ್ತಿದ್ದಾರಾ ಶ್ರೀಲೀಲಾ?

ಕನ್ನಡ ನಟಿ ಶ್ರೀಲೀಲಾ ಈ ಪರಭಾಷಾ ಸಿನಿಮಾಗಳಲ್ಲಿ ಕಮಾಲ್ ಮಾಡುತ್ತಿದ್ದಾರೆ. ತೆಲುಗು ಬಳಿಕ ಈಗ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದ್ದಾರೆ. ಮತ್ತೊಂದು ಕಡೆ ಕನ್ನಡ ಚಿತ್ರರಂಗವನ್ನು ಮರೆತೇಬಿಟ್ಟಿದ್ದಾರೆ.

ಶ್ರೀಲೀಲಾ ಸದ್ಯ ಕನ್ನಡದ ಯಾವುದೇ ಚಿತ್ರದಲ್ಲಿ ನಟಿಸುತ್ತಿಲ್ಲ. ಮಾಜಿ ಸಚಿತ ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಜೋಡಿಯಾಗಿ 'ಜ್ಯೂನಿಯರ್' ಚಿತ್ರದಲ್ಲಿ ಮಿಂಚಿದ್ದಾರೆ. ಶೀಘ್ರದಲ್ಲೇ ಆ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ತೆಲುಗು ನಿರ್ಮಾಪಕರು, ನಿರ್ದೇಶಕರು ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಹಾಗಾಗಿ ಚಂದನವನದಲ್ಲಿ ಈ ಸಿನಿಮಾ ಬಗ್ಗೆ ಹೆಚ್ಚು ನಿರೀಕ್ಷೆಯಿಲ್ಲ.

Reports claiming Sreeleela dropped Telugu projects for Hindi films

ಇನ್ನು ಬಾಲಿವುಡ್ ಅಂಗಳಕ್ಕೆ ಶ್ರೀಲೀಲಾ ಪಾದಾರ್ಪಣೆ ಮಾಡುತ್ತಿದ್ದಾರೆ. 'ಆಶಿಕಿ- 3' ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಜೋಡಿಯಾಗಿ ನಟಿಸುತ್ತಿದ್ದಾರೆ. ಮತ್ತಷ್ಟು ಹಿಂದಿ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಗುಸುಗುಸು ಶುರುವಾಗಿದೆ. ಈಗಾಗಲೇ ಒಂದಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಆದರೆ ಬಾಲಿವುಡ್ ಸಿನಿಮಾಗಳಿಗೆ ಕಾಲ್‌ಶೀಟ್‌ ಕೊಡಲು ಒಪ್ಪಿಕೊಂಡಿರುವ ತೆಲುಗು ಸಿನಿಮಾಗಳನ್ನು ಕೈಬಿಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ವಿಚಾರ ಟಾಲಿವುಡ್ ಅಂಗಳದಲ್ಲಿ ಹೆಚ್ಚು ಸದ್ದು ಮಾಡ್ತಿದೆ.

ಅಖಿಲ್ ಅಕ್ಕಿನೇನಿ ಜೋಡಿಯಾಗಿ 'ಲೆನಿನ್' ಸಿನಿಮಾದಲ್ಲಿ ಶ್ರೀಲೀಲಾ ನಟಿಸಬೇಕಿತ್ತು. ಈಗಾಗಲೇ ಚಿತ್ರದ ಟೀಸರ್ ಸಹ ಬಿಡುಗಡೆ ಆಗಿತ್ತು. ಆದರೆ ಡೇಟ್ಸ್ ಕಾರಣ ಕೊಟ್ಟು ಆ ಚಿತ್ರದಿಂದ ಶ್ರೀಲೀಲಾ ಹೊರ ಬರುತ್ತಿದ್ದಾರೆ ಎನ್ನಲಾಗ್ತಿದೆ. ಸ್ಟಾರ್ ನಟಿಯರು ಹೀಗೆ ದೊಡ್ಡ ಅವಕಾಶ ಸಿಕ್ಕಾಗ ಒಪ್ಪಿಕೊಂಡಿರುವ ಸಣ್ಣ ಸಿನಿಮಾಗಳಲ್ಲು ಕೈಚೆಲ್ಲುವುದು ಸರ್ವೇ ಸಾಮಾನ್ಯ. ಈ ಹಿಂದೆ ರಶ್ಮಿಕಾ ಮಂದಣ್ಣ ಕೂಡ ಹೀಗೆ ಮಾಡಿದ್ದರು.

Reports claiming Sreeleela dropped Telugu projects for Hindi films

ನಿತಿನ್ ನಟನೆಯ 'ರಾಬಿನ್ ಹುಡ್' ಚಿತ್ರಕ್ಕೆ ರಶ್ಮಿಕಾ ಆಯ್ಕೆ ಆಗಿದ್ದರು. ಆದರೆ ಬಾಲಿವುಡ್‌ನಲ್ಲಿ 'ಚಾವ' ಹಾಗೂ 'ಸಿಕಂದರ್' ಸಿನಿಮಾ ಅವಕಾಶಗಳು ಸಿಗುತ್ತಿದ್ದಂತೆ ತೆಲುಗು ಸಿನಿಮಾ ಕೈ ಬಿಟ್ಟಿದ್ದರು. ಡೇಟ್ಸ್ ಸಮಸ್ಯೆ ಕಾರಣ ಮುಂದಿಟ್ಟಿದ್ದರು. ಬಳಿಕ ಆ ಅವಕಾಶ ಶ್ರೀಲೀಲಾ ಪಾಲಾಗಿತ್ತು. 'ರಾಬಿನ್ ಹುಡ್' ಸಿನಿಮಾ ಹೀನಾಯವಾಗಿ ಸೋತಿತ್ತು. ಈ ವಿಚಾರ ಪಕ್ಕಕ್ಕಿಟ್ಟರೆ ಶ್ರೀಲೀಲಾ ಇದೀಗ 'ಲೆನಿನ್' ಚಿತ್ರದಿಂದ ಹೊರ ಬರುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ.

'ಆಶಿಕಿ- 3' ಚಿತ್ರೀಕರಣ ಮುಗಿಯುವ ಮುನ್ನ ಶ್ರೀಲೀಲಾ ಮತ್ತೊಂದು ಚಿತ್ರಕ್ಕೆ ಆಯ್ಕೆ ಆಗಿದ್ದಾರೆ ಎನ್ನಲಾಗಿತ್ತು. 'ಪತಿ ಪತ್ನಿ ಔರ್ ವೋ'-2 ಚಿತ್ರದಲ್ಲಿ ಕೂಡ ಕಾರ್ತಿಕ್ ಆರ್ಯನ್ ಜೊತೆ ಶ್ರೀಲೀಲಾ ನಟಿಸುತ್ತಾರೆ ಎಂದು ಬಾಲಿವುಡ್‌ನಲ್ಲಿ ಗುಲ್ಲಾಗಿತ್ತು. ಬಳಿಕ ರವೀನಾ ಟಂಡನ್ ಮಗಳು ರಶಾ ತಡಾನಿ ಆ ಪಾತ್ರ ಮಾಡುತ್ತಾರೆ. ಶ್ರೀಲೀಲಾಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗಿತ್ತು.

'ಪತಿ ಪತ್ನಿ ಔರ್ ವೋ'-2 ಚಿತ್ರದಲ್ಲಿ ಶ್ರೀಲೀಲಾ ನಟಿಸುತ್ತಾರೋ ಇಲ್ಲವೋ ಬೇರೆ ಕಥೆಗಳನ್ನು ಕೇಳುತ್ತಿದ್ದಾರೆ. 'ಪುಷ್ಪ'-2 ಚಿತ್ರದ 'ಕಿಸ್ಸಿಕ್' ಸಾಂಗ್‌ನಲ್ಲಿ ಕುಣಿದ ಬಳಿಕ ಬಾಲಿವುಡ್ ಅಂಗಳದಲ್ಲಿ ಆಕೆಯ ಕ್ರೇಜ್ ಶುರುವಾಗಿದೆ. ಮತ್ತಷ್ಟು ಅವಕಾಶಗಳು ಹುಡುಕಿ ಬರುತ್ತಿದೆ. ಅದೇ ಕಾರಣಕ್ಕೆ 'ಲೆನಿನ್' ಸಿನಿಮಾದಿಂದ ಹೊರ ನಡೆಯುತ್ತಾರೆ ಎನ್ನಲಾಗ್ತಿದೆ. ಕನ್ನಡದಲ್ಲಿ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀಲೀಲಾಗೆ ತೆಲುಗಿನಲ್ಲಿ ಒಳ್ಳೆ ಅವಕಾಶಗಳು ಸಿಕ್ಕಿತ್ತು. ಆದರೆ ಯಾವುದೇ ಸಿನಿಮಾ ಆಕೆಗೆ ಬ್ರೇಕ್ ಕೊಡಲಿಲ್ಲ.

ಬಾಲಕೃಷ್ಣ, ಮಹೇಶ್ ಬಾಬು, ರವಿತೇಜಾ ಜೊತೆ ನಟಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ನಿಧಾನವಾಗಿ ತಮಿಳು ಸಿನಿಮಾಗಳತ್ತ ಮುಖ ಮಾಡಿದ್ದರು. ಕೂಡಲೇ ಬಾಲಿವುಡ್ ಕೈ ಬೀಸಿ ಕರೆಯಿತು. 'ಮಾಸ್ ಜಾತರ' ಹಾಗೂ 'ಉಸ್ತಾದ್ ಭಗತ್ ಸಿಂಗ್' ಎಂಬ 2 ತೆಲುಗು ಸಿನಿಮಾಗಳ ಜೊತೆಗೆ 'ಲೆನಿನ್' ಒಪ್ಪಿಕೊಂಡಿದ್ದಾರೆ. ಆದರೆ ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಲ್ಲ. ಅಖಿಲ್ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಬಂದಿರುವ ಟೀಸರ್ ಕೂಡ ಟ್ರೋಲ್ ಆಗಿತತ್ತು. ಹಾಗಾಗಿ ಶ್ರೀಲೀಲಾ ಈ ಸಿನಿಮಾ ಕೈ ಬಿಟ್ಟು ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಶ್ರೀಲೀಲಾಗೆ ಹೆಚ್ಚು ಅವಕಾಶ ಕೊಟ್ಟು ಮೆರೆಸಿದ್ದು ತೆಲುಗು ಚಿತ್ರರಂಗ. ಈಗ ಬಾಲಿವುಡ್ ಅವಕಾಶ ಸಿಕ್ತು ಅಂತ ತೆಲುಗು ಸಿನಿಮಾ ಬಿಡುವುದು ಎಷ್ಟು ಸರಿ? ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ದಕ್ಷಿಣದಿಂದ ಬಾಲಿವುಡ್‌ಗೆ ಹೋಗುವ ಎಲ್ಲರೂ ಗೆಲ್ಲುವುದಿಲ್ಲ. ಹಾಗಾಗಿ ಸದ್ಯ ಕೈಯಲ್ಲಿರುವ ತೆಲುಗು ಸಿನಿಮಾ ಬಿಡುವುದು ಸರಿಯಲ್ಲ ಎಂದು ಕೆಲವರು ಕಿವಿಮಾತು ಹೇಳುತ್ತಿದ್ದಾರೆ.

More from Filmibeat

Read more about: sreeleela bollywood tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X