ರಿಷಬ್ ಶೆಟ್ಟಿ - ವಿಜಯ್ ದೇವರಕೊಂಡ ಕಾಂಬಿನೇಷನ್‌ನಲ್ಲಿ ಭಾರೀ ಬಜೆಟ್ ಪ್ರಾಜೆಕ್ಟ್? ಕ್ರೇಜಿ ನ್ಯೂಸ್ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಭಾರತೀಯ ಚಿತ್ರರಂಗದಲ್ಲೀಗ ಸೌತ್- ಬಾಲಿವುಡ್ ಎನ್ನುವ ಭೇದಭಾವ ಇಲ್ಲ. ಇಂಡಿಯನ್ ಸಿನಿಮಾ ಎಂದು ಎಲ್ಲರೂ ಮಾತನಾಡುತ್ತಿದ್ದಾರೆ. ಯಾವುದೇ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆದರೂ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ನಡೀತಿದೆ. ಹಾಗಾಗಿ ಒಂದು ಇಂಡಸ್ಟ್ರಿ ಕಲಾವಿದರು, ತಂತ್ರಜ್ಞರು ಬೇರೆ ಇಂಡಸ್ಟ್ರಿಯಲ್ಲಿ ಕೆಲಸ ಮಾಡೋದು ಸರ್ವೇ ಸಾಧಾರಣ ಆಗೋಗಿದೆ.

ಬಾಲಿವುಡ್ ಸ್ಟಾರ್‌ಗಳೇ ಈಗ ಸೌತ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ಕನ್ನಡ ಫಿಲ್ಮ್ ಮೇಕರ್ಸ್ ಬಾಲಿವುಡ್‌, ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಅಂತೂ ಎಲ್ಲಾ ಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಮಾಡುತ್ತಿದೆ. ಈಗ ರಿಷಬ್ ಶೆಟ್ಟಿ ಜೊತೆ ತೆಲುಗು ನಟ ವಿಜಯ್ ದೇವರಕೊಂಡ ಕೈ ಜೋಡಿಸುತ್ತಾರೆ ಎನ್ನುವ ಸುದ್ದಿ ಕೇಳಿಬರ್ತಿದೆ. ಇಬ್ಬರು ಸೆನ್ಸೇಷನ್ ಸ್ಟಾರ್‌ಗಳೇ. ಇಬ್ಬರು ಒಟ್ಟಿಗೆ ಸೇರಿದರೆ ಆ ಸಿನಿಮಾ ದೊಡ್ಡಮಟ್ಟದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುವುದು ಗ್ಯಾರೆಂಟಿ. ಸದ್ಯ ಇಬ್ಬರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮುಂದೆ ಒಟ್ಟಿಗೆ ಕೆಲಸ ಮಾಡ್ತಾರೆ ಎನ್ನಲಾಗ್ತಿದೆ.

Rishab setty and Vijay devarakonada to join hands for a Big-budget project soon

'ಕಾಂತಾರ' ಸಿನಿಮಾ ಮಾಡಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಸದ್ಯ ಸಿನಿಮಾ ಪ್ರೀಕ್ವೆಲ್‌ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 'ಅರ್ಜುನ್ ರೆಡ್ಡಿ' ಆಗಿ ಅಬ್ಬರಿಸಿದ ವಿಜಯ್ ದೇವರಕೊಂಡ 'ಲೈಗರ್' ಆಗಿ ಸೋಲುಂಡರು. ಮತ್ತೆ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ. ಇಬ್ಬರಿಬ್ಬರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಎನ್ನುವ ಸ್ವೀಟ್ ಗಾಸಿಪ್‌ವೊಂದು ವೈರಲ್ ಆಗ್ತಿದೆ. ಆದರೆ ರಿಷಬ್ ಶೆಟ್ಟಿ ಈ ಸಿನಿಮಾ ನಿರ್ದೇಶನ ಮಾಡ್ತಾರಾ? ಇಲ್ಲ ಇಬ್ಬರು ಒಟ್ಟಿಗೆ ಸೇರಿ ಮಲ್ಟಿಸ್ಟಾರರ್‌ ಸಿನಿಮಾ ಮಾಡ್ತಾರಾ? ಎನ್ನುವುದು ಮಾತ್ರ ಗೊತ್ತಿಲ್ಲ. ಈ ಸಿನಿಮಾ ಬಗ್ಗೆ ಅಫೀಷಿಯಲ್ ಅಪ್‌ಡೇಟ್ ಸಿಕ್ಕಿಲ್ಲ.

'ಲೈಗರ್' ಸಿನಿಮಾ ಸೋಲಿನ ನಂತರ ವಿಜಯ್ ದೇವರಕೊಂಡ ಗೌತಮ್ ತಿನ್ನನೂರು ನಿರ್ದೇಶನದ ಚಿತ್ರದಲ್ಲಿ ನಟಿಸ್ತಿದ್ದಾರೆ. ಸಮಂತಾ ರುತ್‌ಪ್ರಭ್ ಅನಾರೋಗ್ಯದ ಕಾರಣ ನಿಂತು ಹೋಗಿದ್ದ 'ಖುಷಿ' ಸಿನಿಮಾ ಚಿತ್ರೀಕರಣ ಕೂಡ ಶುರುವಾಗುತ್ತಿದೆ. ಈ ಸಿನಿಮಾ ನಂತರ ರಿಷಬ್ ಶೆಟ್ಟಿ ಜೊತೆ ವಿಜಯ್ ದೇವರಕೊಂಡ ಕೈ ಜೋಡಿಸುತ್ತಾರೆ ಎನ್ನುವ ಟಾಕ್ ಇದೆ. ಈ ಹಿಂದೆ ಅಲ್ಲು ಅರವಿಂದ್ ನಿರ್ಮಾಣದ ಚಿತ್ರವನ್ನು ಮಾಡುವ ಬಗ್ಗೆ ರಿಷಬ್ ಶೆಟ್ಟಿ ನೋಡೋಣ ಎಂದು ಹೇಳಿದ್ದರು. ಹಾಗಾಗಿ ಇದೇ ಚಿತ್ರದಲ್ಲಿ ವಿಜಯ್ ದೇವರಕೊಂಡ- ರಿಷಬ್ ಶೆಟ್ಟಿ ಒಟ್ಟಿಗೆ ಕೆಲಸ ಮಾಡಬಹುದು ಎನ್ನುವ ಗುಸುಗುಸು ಕೇಳಿಬರ್ತಿದೆ. ಆದರೆ ಇದರಲ್ಲಿ ಎಷ್ಟು ನಿಜ ಇದೆ ಅನ್ನೋದು ಗೊತ್ತಿಲ್ಲ.

Rishab setty and Vijay devarakonada to join hands for a Big-budget project soon

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಸಿನಿಮಾ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೆದಿತ್ತು. ತೆಲುಗಿಗೂ ಡಬ್ ಆಗಿ 50 ಕೋಟಿ ರೂ.ಗೂ ಹೆಚ್ಚು ಗಳಿಕೆ ಕಂಡಿತ್ತು. ತೆಲುಗು ಪ್ರೇಕ್ಷಕರು ಕೂಡ 'ಕಾಂತಾರ' ಸಿನಿಮಾ ನೋಡಿ ಫಿದಾ ಆಗೋಗಿದ್ದರು. ತೆಲುಗು ಮಾಧ್ಯಮಗಳಲ್ಲಿ ರಿಷಬ್- ದೇವರಕೊಂಡ ಕಾಂಬಿನೇಷನ್‌ ಸಿನಿಮಾ ಬಗ್ಗೆ ಸುದ್ದಿ ಆಗುತ್ತಿದೆ. ಆದರೆ ಸ್ಯಾಂಡಲ್‌ವುಡ್‌ನಲ್ಲಿ ಅಂತಹ ಬಝ್ ಕಾಣುತ್ತಿಲ್ಲ. ಇನ್ನು ರಿಷಬ್ ಶೆಟ್ಟಿ ತಾವು ಕಥೆ ಬರೆಯುವವರೆಗೂ ಯಾವ ಪಾತ್ರಕ್ಕೆ ಯಾರೂ ಎಂದು ನಿರ್ಧರಿಸುವುದಿಲ್ಲ. ಕಲಾವಿದರಿಗಾಗಿ ಕಥೆ ಬರೆಯೋದಿಲ್ಲ ಎನ್ನುತ್ತಾರೆ. ಹಾಗಾಗಿ ನಿಜಕ್ಕೂ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡ್ತಾರಾ? ಅಂತ ಕಾದು ನೋಡಬೇಕು. ಸದ್ಯ ಅಭಿಮಾನಿಗಳ 'ಕಾಂತಾರ' ಪ್ರೀಕ್ವೆಲ್‌ಗಾಗಿ ಕಾಯ್ತಿದ್ದಾರೆ.

More from Filmibeat

English summary
Rishab setty and Vijay Devarakonada to join hands for a Big-budget project soon. Rishab shetty is currently busy with the Kantara prequel pre production work. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X