'ಕಾಂತಾರ-1' ಸಿನಿಮಾ ತೆಲುಗು ರೈಟ್ಸ್; ಹೊಂಬಾಳೆ ಡಿಮ್ಯಾಂಡ್ ನೋಡಿ ಟಾಲಿವುಡ್ ಮಂದಿ ಶಾಕ್!

ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ 'ಕಾಂತಾರ'- ಚಾಪ್ಟರ್‌-1 ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 2ರಂದು ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇತ್ತೀಚೆಗೆ ಶೂಟಿಂಗ್ ಮುಗಿಸಿ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿತ್ತು ಚಿತ್ರತಂಡ. ಇದೀಗ ಚಿತ್ರದ ಪ್ರೀ-ರಿಲೀಸ್ ಬ್ಯುಸಿನೆಸ್ ಶುರುವಾಗ್ತಿದೆ.

ಹೊಂಬಾಳೆ ಫಿಲ್ಮ್ಸ್ ಮಹತ್ವಾಕಾಂಕ್ಷೆಯ ಸಿನಿಮಾ 'ಕಾಂತಾರ'- ಚಾಪ್ಟರ್‌-1. ಈಗಾಗಲೇ 'ಕಾಂತಾರ' ಸಿನಿಮಾ ಬಂದು ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಪ್ರೀಕ್ವೆಲ್ ನಿರೀಕ್ಷೆ ಹುಟ್ಟಾಕ್ಕಿದೆ. ಕರ್ನಾಟಕ ಮಾತ್ರವಲ್ಲ ದೇಶ ವಿದೇಶಗಳಲ್ಲಿರುವ ಪ್ರೇಕ್ಷಕರು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಕನ್ನಡ ಬಿಟ್ಟರೆ ತೆಲುಗು ಪ್ರೇಕ್ಷಕರು ಸಿನಿಮಾ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಹಾಗಾಗಿ ಆಂಧ್ರ, ತೆಲಂಗಾಣದ ವಿತರಣೆ ಹಕ್ಕು ಮಾರಾಟದ ಬಗ್ಗೆ ಗುಸುಗುಸು ಶುರುವಾಗಿದೆ.

Rishab Shetty s Kantara Chapter-1 Pre-Release Buzz Grows as Telugu Rights Talks Heat Up

ಸಿನಿಮಾ ಬಿಡುಗಡೆ ದಿನಾಂಕ ಹತ್ತಿರವಾಗುತ್ತಿದ್ದಂತೆ ವಿತರಣೆ ಹಕ್ಕು ಮಾರಾಟ ಮಾಡಲು ಹೊಂಬಾಳೆ ಫಿಲ್ಮ್ಸ್ ಮುಂದಾಗಿದ್ದಾರೆ. ಎಲ್ಲಾ ಭಾಗಗಳಲ್ಲಿ ಭಾರೀ ಮೊತ್ತವನ್ನು ಸಂಸ್ಥೆ ಡಿಮ್ಯಾಂಡ್ ಮಾಡ್ತಿದೆ ಎನ್ನುವ ಊಹಾಪೋಹ ಶುರುವಾಗಿದೆ. ಕ್ರೇಜ್‌ಗೆ ತಕ್ಕಂತೆ ರೈಟ್ಸ್ ಸೇಲ್ ಮಾಡುವ ಲೆಕ್ಕಾಚಾರ ನಡೀತಿದೆಯಂತೆ. ತೆಲುಗು ರೈಟ್ಸ್‌ಗೆ ಮೇಕರ್ಸ್ 100 ಕೋಟಿ ರೂ. ಡಿಮ್ಯಾಂಡ್ ಮಾಡ್ತಿದ್ದಾರೆ ಎಂದು ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

ತೆಲುಗಿನ ಸ್ಟಾರ್ ನಟರ ಸಿನಿಮಾಗಳ ರೇಂಜ್‌ಗೆ ಅಲ್ಲಿ 'ಕಾಂತಾರ-1' ಸಿನಿಮಾ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಅದಕ್ಕೆ ತಕ್ಕಂತೆ ಚಿತ್ರವನ್ನು ರಿಷಬ್ ಶೆಟ್ಟಿ ಅಂಡ್ ಟೀಂ ಸಿದ್ಧಪಡಿಸುತ್ತಿದೆ. 'KGF'-1 ಬಳಿಕ ಚಾಪ್ಟರ್‌-2 ಕೂಡ ತೆಲುಗು ರಾಜ್ಯಗಳಲ್ಲಿ ದೊಡ್ಡಮಟ್ಟಕ್ಕೆ ತೆರೆಗಪ್ಪಳಿಸಿತ್ತು, ಭರ್ಜರಿ ಕಲೆಕ್ಷನ್ ಕೂಡ ಮಾಡಿತ್ತು. ಇನ್ನು 'ಕಾಂತಾರ' ತೆಲುಗು ವರ್ಷನ್ ಕರ್ನಾಟಕ ಮಾತ್ರವಲ್ಲ ವಿದೇಶಗಳಲ್ಲಿ ಕೂಡ ಸಖತ್ ಸದ್ದು ಮಾಡಿದ್ದನ್ನು ಮರೆಯುವಂತಿಲ್ಲ.

Rishab Shetty s Kantara Chapter-1 Pre-Release Buzz Grows as Telugu Rights Talks Heat Up

ಅಲ್ಲು ಅರವಿಂದ್ 'ಕಾಂತಾರ' ಚಿತ್ರದ ತೆಲುಗು ಡಬ್ಬಿಂಗ್ ರೈಟ್ಸ್ ಪಡೆದಿದ್ದರು. ಭರ್ಜರಿ ಲಾಭ ಮಾಡಿದ್ದರು. ಆದರೆ ಈಗ ಪ್ರೀಕ್ವೆಲ್ ಅನ್ನು ಏಕಕಾಲಕ್ಕೆ ತೆಲುಗಿನಲ್ಲಿ ಬಿಡುಗಡೆ ಮಾಡುವ ಪ್ರಯತ್ನ ನಡೀತಿದೆ. ಹಾಗಾಗಿ ತೆಲುಗು ರೈಟ್ಸ್ 100 ಕೋಟಿ ರೂ.ಗೆ ಮಾರಾಟ ಮಾಡುವ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಅಂದಾಜು 100 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ತೆಲುಗು ರೈಟ್ಸ್‌ನಿಂದಲೇ ಆ ಬಂಡವಾಳ ವಾಪಸ್ ಬರುತ್ತಾ ಕಾದು ನೋಡಬೇಕಿದೆ.

ಭಾರೀ ನಿರೀಕ್ಷೆ ಮೂಡಿಸುವ ಸಿನಿಮಾಗಳು ಇತ್ತೀಚೆಗೆ ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತವೆ. ಹೃತಿಕ್ ರೋಷನ್ ಜೊತೆ ಜ್ಯೂ. ಎನ್‌ಟಿಆರ್ ನಟಿಸಿದ್ದ 'ವಾರ್- 2' ಸಿನಿಮಾ ಕಳೆದ ವಾರ ತೆರೆಕಂಡು ಸೋಲಿನ ಸುಳಿಗೆ ಸಿಲುಕಿದೆ. ತೆಲುಗು ನಟ ಇದ್ದರೂ ಆಂಧ್ರ, ತೆಲಂಗಾಣದಲ್ಲಿ ಸಿನಿಮಾ ಕಲೆಕ್ಷನ್ ಡಲ್ ಆಗಿದೆ. 88 ಕೋಟಿ ರೂ.ಗೆ ತೆಲುಗು ರೈಟ್ಸ್ ಬಿಕರಿಯಾಗಿತ್ತು ಎಂದು ವರದಿ ಆಗಿತ್ತು. ಆದರೆ ಸಿನಿಮಾ ಸೋತು ವಿತರಕರು, ಪ್ರದರ್ಶಕರು ನಷ್ಟಕ್ಕೆ ಸಿಲುಕಿದ್ದಾರೆ ಎನ್ನಲಾಗ್ತಿದೆ. 'ಕೂಲಿ' ಸಿನಿಮಾ ಪರಿಸ್ಥಿತಿ ಕೂಡ ಹೀಗೆ ಇದೆ. ಹಾಗಾಗಿ 'ಕಾಂತಾರ'-1 ಚಿತ್ರವನ್ನು 100 ಕೋಟಿ ರೂ.ಗೆ ಯಾರು ಕೊಂಡುಕೊಳ್ಳಲ್ಲ ಎನ್ನುವ ಮಾತುಗಳು ಕೇಳಿಬರ್ತಿದೆ.

'ಕಾಂತಾರ- 1' ಚಿತ್ರದಲ್ಲಿ ರಿಷಬ್ ಶೆಟ್ಟಿ ಜೊತೆ ರುಕ್ಮಿಣಿ ವಸಂತ್, ದುಲ್ಷನ್ ದೇವಯ್ಯ ಸೇರಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರದ ಪ್ರಮೋಷನ್ ಇನ್ನಷ್ಟೇ ಶುರುವಾಗಬೇಕಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ಅಥವಾ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ಅಜನೀಶ್ ಲೋಕನಾಥ್ ಸೇರಿ 'ಕಾಂತಾರ' ಚಿತ್ರಕ್ಕೆ ಕೆಲಸ ಮಾಡಿದ್ದ ತಂಡವೇ ಪ್ರೀಕ್ವೆಲ್‌ ಚಿತ್ರಕ್ಕೂ ಜೊತೆಯಾಗಿದೆ.

More from Filmibeat

English summary
Rishab Shetty’s Kantara Chapter-1 is set for a grand release on October 2. With huge demand in Andhra and Telangana, the pre-release business has sparked major buzz in Tollywood.
Read more about: kantara rishab shetty tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X