»   » ಪುನೀತ್, ದರ್ಶನ್, ಸುದೀಪ್ ಸಾಲಿಗೆ ಸೇರಿದ ರಾಕಿಂಗ್ ಸ್ಟಾರ್ ಯಶ್.!

ಪುನೀತ್, ದರ್ಶನ್, ಸುದೀಪ್ ಸಾಲಿಗೆ ಸೇರಿದ ರಾಕಿಂಗ್ ಸ್ಟಾರ್ ಯಶ್.!

Posted By:
Subscribe to Filmibeat Kannada

ಕಿಚ್ಚ ಸುದೀಪ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್.....ಸ್ಯಾಂಡಲ್ ವುಡ್ ನ ತ್ರಿವಳಿ ರತ್ನಗಳು. ಇವರ ಸಾಲಿಗೆ ಈಗ ರಾಕಿಂಗ್ ಸ್ಟಾರ್ ಯಶ್ ಸೇರಿಕೊಂಡಿದ್ದಾರೆ.

ಈ ಸ್ಟಾರ್ ನಟರ ಸಿನಿಮಾಗಳು ಅಂದ್ರೆ ಇಂಡಸ್ಟ್ರಿಯಲ್ಲಿ ಒಂಥಾರ ಕ್ರೇಜ್, ಸೌಂಡ್, ಅಬ್ಬರ ಎಲ್ಲವೂ ಹೆಚ್ಚಾಗಿರುತ್ತೆ.

ಈಗ ವಿಷ್ಯ ಏನಪ್ಪಾ ಅಂದ್ರೆ, ದರ್ಶನ್, ಸುದೀಪ್, ಪುನೀತ್ ಹಲವು ಸಿನಿಮಾಗಳಲ್ಲಿ ಪೊಲೀಸ್ ಪಾತ್ರವನ್ನ ನಿರ್ವಹಿಸಿದ್ದಾರೆ. ಆದ್ರೆ, ಯಶ್ ಇದುವರೆಗೂ ಪೊಲೀಸ್ ಆಗಿ ಕಾಣಿಸಿಕೊಂಡಿಲ್ಲ. ಇದೀಗ, ತಮ್ಮ ಮುಂದಿನ ಚಿತ್ರದಲ್ಲಿ ಯಶ್ ಪೊಲೀಸ್ ಕಾಪ್ ಆಗಿ ಮಿಂಚಲಿದ್ದಾರಂತೆ. ಮುಂದೆ ಓದಿ......

ಪೊಲೀಸ್ ಆಫೀಸರ್ ಆಗಿ ಯಶ್

ಸದ್ಯ, 'ಕೆ.ಜಿ.ಎಫ್' ಚಿತ್ರದಲ್ಲಿ ಬಿಜಿಯಾಗಿರುವ ರಾಕಿಂಗ್ ಸ್ಟಾರ್ ತಮ್ಮ ಮುಂದಿನ ಚಿತ್ರದಲ್ಲಿ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಲಿದ್ದಾರೆ.

ಯಶ್ ಮುಂದೆ ಮತ್ತದೇ ಪ್ರಶ್ನೆ, ಯಶ್ ಕೊಟ್ಟಿದ್ದು ಮತ್ತದೇ ಉತ್ತರ.!

'ರಾಣಾ' ಚಿತ್ರದಲ್ಲಿ ಖಾಕಿ ತೊಡಲಿದ್ದಾರೆ

ನೃತ್ಯ ಸಂಯೋಜಕ ಕಮ್ ನಿರ್ದೇಶಕ ಹರ್ಷ ನಿರ್ದೇಶನದಲ್ಲಿ ಮೂಡಿ ಬರಲಿರುವ 'ರಾಣಾ' ಚಿತ್ರದಲ್ಲಿ ಯಶ್ ಖಾಕಿ ತೊಡಲಿದ್ದಾರಂತೆ.

'ಕೌಂಟರ್ ಡೈಲಾಗ್'ಗಳ ಸಮರಕ್ಕೆ ಚಾಲೆಂಜಿಂಗ್ ಸ್ಟಾರ್ ಬ್ರೇಕ್.!

'ಗೂಗ್ಲಿ'ಯಲ್ಲಿ ಹೀಗೆ ಕಾಣಿಸಿದ್ರು

ಪವನ್ ಒಡೆಯರ್ ನಿರ್ದೇಶನದ 'ಗೂಗ್ಲಿ' ಚಿತ್ರದಲ್ಲಿ ಯಶ್ ಪೊಲೀಸ್ ಡ್ರೆಸ್ ತೊಟ್ಟು ಸರ್ಪ್ರೈಸ್ ಕೊಟ್ಟಿದ್ದರು. ಆದ್ರೆ, ಚಿತ್ರದ ಸನ್ನಿವೇಶವೊಂದಕ್ಕೆ ಮಾತ್ರ ಸೀಮಿತವಾಗಿತ್ತು. ಆದ್ರೀಗ, ಇಡೀ ಸಿನಿಮಾದಲ್ಲಿ ನೋಡುವ ಅವಕಾಶ ಸಿಗುತ್ತಿದೆ.

ಕಥೆ ಕೇಳದೆ ಸಿನಿಮಾ ಒಪ್ಪಿಕೊಂಡಿದ್ದಾರಂತೆ.!

ಅಂದ್ಹಾಗೆ, ನಟ ಯಶ್ 'ರಾಣಾ' ಚಿತ್ರದ ಕಥೆಯ ಬಗ್ಗೆ ಪೂರ್ತಿ ವಿವರ ಕೇಳದೆ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರಂತೆ. ವಿಶೇಷ ಅಂದ್ರೆ, ಯಶ್ ಅವರನ್ನ ಈ ಪಾತ್ರದಲ್ಲಿ ನೋಡಲು ಹೊಸದಾಗಿದ್ದು, ಹೀಗಾಗಿ, ಈ ಸಿನಿಮಾ ಮತ್ತಷ್ಟು ನಿರೀಕ್ಷೆ ಹೆಚ್ಚಿಸಲಿದೆ.

'ಅರ್ಜುನ್ ರೆಡ್ಡಿ' ರೀಮೇಕ್ ಬಗ್ಗೆ ಯಶ್ ಹೇಳೋದೇ ಬೇರೆ.!

'ಕೆ.ಜಿ.ಎಫ್' ನಂತರ 'ರಾಣಾ'

ಸದ್ಯ, 'ಉಗ್ರಂ' ಖ್ಯಾತಿಯ ಪ್ರಶಾಂತ್ ನೀಲ್ ಅವರ 'ಕೆ.ಜಿ.ಎಫ್' ಚಿತ್ರದಲ್ಲಿ ಯಶ್ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೋಲಾರ, ಮೈಸೂರು, ಬೆಂಗಳೂರು ಸುತ್ತಾಮುತ್ತಾ ಚಿತ್ತೀಕರಣ ನಡೆಯುತ್ತಿದ್ದು, ಕಂಪ್ಲೀಟ್ ಆಗಿ ಸಿನಿಮಾ ಮುಗಿದ ಮೇಲೆ 'ರಾಣಾ' ಸೆಟ್ಟೇರಲಿದೆ.

English summary
Rocking Star Yash to play Police Role in Harsha Directional Movie Raana.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada