ಮದುವೆಗೆ ಮೊದಲು ರೋಹಿತ್ ಶರ್ಮಾ ಲವ್ ಸ್ಟೋರಿ: ಆ ಬೋಲ್ಡ್ ಬಾಲಿವುಡ್ ನಟಿ ಯಾರು?

ಭಾರತ ಕ್ರಿಕೆಟ್ ಆಟಗಾರರಿಗೂ ಬಾಲಿವುಡ್ ಇದರ ಮಧ್ಯೆ ಒಂದು ಬಿಡಿಸಲಾಗದ ನಂಟಿದೆ. ಸಾಕಷ್ಟು ಕ್ರಿಕೆಟ್ ಆಟಗಾರರ ಜೊತೆಯಲ್ಲಿ ಬಾಲಿವುಡ್ ನಟಿಯರು ಡೇಟಿಂಗ್ ಅಥವಾ ಮದುವೆಯಾದದ್ದು ಇದೆ. ಬಹಳ ಹಿಂದೆಯೇ ಅಂದಿನ ಭಾರತ ಕ್ರಿಕೆಟ್ ತಂಡದ ನಾಯಕನಾಗಿದ್ದ ಮನ್ಸೂರ್ ಅಲಿ ಖಾನ್ ಪಟೌಡಿ ಅವರನ್ನು ಬಾಲಿವುಡ್ ನಟಿ ಶರ್ಮಿಳಾ ಟಾಗೋರ್ ಪ್ರೀತಿಸಿ ಮದುವೆಯಾಗಿದ್ದರು. ಮತ್ತೊಬ್ಬ ಮಾಜಿ ನಾಯಕ ಅಜರುದ್ದೀನ್ ಸಂಗೀತಾ ಬಿಜಲಾನಿ ಅವರನ್ನು ಮದುವೆಯಾಗಿದ್ದು ಗೊತ್ತಿರುವುದೇ. ಇನ್ನು ವಿರಾಟ್ ಕೊಹ್ಲಿ ಅವರು ಅನುಷ್ಕಾ ಶರ್ಮಾ ಅವರನ್ನುಮದುವೆಯಾಗಿದ್ದಾರೆ.

ವೆಸ್ಟ್ ಇಂಡೀಸ್ನ ಮಾಜಿ ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಜೊತೆ ನಟಿ ನೀನಾ ಗುಪ್ತಾ ಲಿವಿಂಗ್ ಟುಗೆದರ್ ನಡೆಸಿದ್ದು ಇದೆ, ಜೊತೆಗೆ ಅವರಿಗೆ ಒಂದು ಮಗಳು ಕೂಡ ಇದ್ದಾಳೆ. ಒಂದು ಕಾಲದ ಖ್ಯಾತ ಆಟಗಾರ ರವಿ ಶಾಸ್ತ್ರಿ ಅವರು ನಟಿ ಅಮೃತಾ ಸಿಂಗ್ ಜೊತೆ ( ಸೈಫ್ ಆಲಿ ಖಾನ್ ಮಾಜಿ ಹೆಂಡತಿ) ಪ್ರೀತಿಸಿ ವಿವಾಹವಾಗುವ ಹಂತಕ್ಕೆ ಬಂದು ನಿಂತು ಹೋಯಿತು. ಅದೇ ರೀತಿಯಲ್ಲಿ ಕಪಿಲ್ ದೇವ್- ಸಾರಿಕಾ ಅವರ ಪ್ರೀತಿ ವ್ಯವಹಾರ ಕೂಡ, ಸೌರವ್ ಗಂಗೂಲಿ- ನಗ್ಮಾ ಪ್ರೀತಿ ಕೂಡ ಯಾವುದೋ ಒಂದು ಹಂತದಲ್ಲಿ ಮುರಿದುಬಿದ್ದಿದೆ. ಇನ್ನು ಇತ್ತೀಚಿನ ಆಟಗಾರರ ವಿಷಯಕ್ಕೆ ಬಂದರೆ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ಕರ್ನಾಟಕದ ಕೆ ಎಲ್ ರಾಹುಲ್ ಅವರು ಹಿಂದಿ ಚಿತ್ರನಟಿ ಅಥಿಯಾ ಶೆಟ್ಟಿ ಶೆಟ್ಟಿ ಅವರನ್ನು ಪ್ರೀತಿಸುತ್ತಿದ್ದಾರೆ.

ಹಾಗಂತ ಎಲ್ಲಾ ಕ್ರಿಕೆಟ್ ಆಟಗಾರರು ಬಾಲಿವುಡ್ ನಟಿಯರ ಹಿಂದೆ ಬಿದ್ದಿದ್ದರು ಅಂತಲ್ಲ. ಆದರೆ ಬಿದ್ದವರು ಸುದ್ದಿಯಾಗಿದ್ದು ಮಾತ್ರ ನಿಜ. ಕೆಲವು ಆಟಗಾರರು ಪ್ರೀತಿಸಿ ಮದುವೆಯಾಗಿರುವುದು ಇದೆ ಆದರೆ ಅವರು ಯಾರು ಸಿನಿಮಾ ನಟಿಯರು ಅಲ್ಲ. ಸಚಿನ್ ತೆಂಡೂಲ್ಕರ್ ತನಗಿಂತ ವಯಸ್ಸಿನಲ್ಲಿ ಹಿರಿಯಳಾದ ಉದ್ದಿಮಿ ಅಂಜಲಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಅವರಿಗೆ ಇಂದು ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸೌರವ್ ಗಂಗೂಲಿ ಕೂಡ ತನ್ನ ಬಾಲ್ಯದ ಗೆಳತಿ, ನೃತ್ಯಗಾತಿ ಡೋನಾ ಅವರನ್ನು ಮದುವೆಯಾಗಿದ್ದಾರೆ ಅವರಿಗೆ ಒಂದು ಹೆಣ್ಣು ಮಗಳಿದ್ದಾಳೆ. ಗೌತಮ್ ಗಂಭೀರ್, ಅಜಿತ್ ಅಗರ್ಕರ್ ಮುಂತಾದ ಆಟಗಾರರು ತಮ್ಮ ಬಾಲ್ಯದ ಗೆಳತಿಯನ್ನು ವಿವಾಹವಾಗಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ.

ರಾಹುಲ್ ದ್ರಾವಿಡ್ ವಿವಾಹ

ರಾಹುಲ್ ದ್ರಾವಿಡ್ ವಿವಾಹ

ಅದೇ ಮಿಸ್ಟರ್ ಪರ್ಫೆಕ್ಟ್ ರಾಹುಲ್ ದ್ರಾವಿಡ್ ಅವರ ವಿಚಾರಕ್ಕೆ ಬಂದರೆ ಅವರ ವಿವಾಹ ನಾಗಪುರಕ್ಕೆ ಸೇರಿದ ಡಾಕ್ಟರ್ ವಿಜೇತ ಅವರ ಜೊತೆಯಲ್ಲಿ ನಡೆದಿದೆ. ಆದರೆ ಇದು ಪ್ರೀತಿ-ಪ್ರೇಮದ ಕಥೆಯಲ್ಲ ಬದಲಾಗಿ ತಂದೆತಾಯಿಗಳು ನೋಡಿದ ಹುಡುಗಿಯನ್ನು ಮೆಚ್ಚಿ ರಾಹುಲ್ ದ್ರಾವಿಡ್ ಮದುವೆಯಾಗಿರುವುದು,ಈಗ ಈ ದಂಪತಿಗಳಿಗೆ ಎರಡು ಮುದ್ದಾದ ಗಂಡು ಮಕ್ಕಳಿದ್ದಾರೆ. ಅದೇ ರೀತಿಯಲ್ಲಿ ತಂದೆ-ತಾಯಿ ತೋರಿಸಿದ ಹುಡುಗಿಯನ್ನೇ ಮದುವೆಯಾಗಿರುವ ಮತ್ತೊಬ್ಬ ಕ್ರಿಕೆಟ್ ಆಟಗಾರ ವಿವಿಎಸ್ ಲಕ್ಷ್ಮಣ್. ಗುಂಟೂರಿಗೆ ಸೇರಿದ ಶೈಲಜಾ ಅವರನ್ನು ಮದುವೆಯಾಗಿರುವ ಲಕ್ಷ್ಮಣ್ ದಂಪತಿಗಳಿಗೆ ಕೂಡ ಎರಡು ಮುದ್ದಾದ ಗಂಡು ಮಕ್ಕಳಿದ್ದಾರೆ.

ದಾಖಲೆಗಳ ಆಟಗಾರ ರೋಹಿತ್

ದಾಖಲೆಗಳ ಆಟಗಾರ ರೋಹಿತ್

ವಿರಾಟ್ ಕೊಹ್ಲಿ ಬಿಟ್ಟರೆ ಪ್ರಸ್ತುತ ಇರುವ ಭಾರತದ ಕ್ರಿಕೆಟ್ ಆಟಗಾರರ ಪೈಕಿ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಹೊಂದಿರುವುದು ರೋಹಿತ್ ಶರ್ಮಾ. ಹಾಗೆ ನೋಡಿದರೆ ರೋಹಿತ್ ಶರ್ಮ ಯಾವುದೇ ವಿವಾದಗಳಿಗೆ ಸಿಲುಕದ ಆಟಗಾರ. ರೋಹಿತ್ ಆಟ ನೋಡುವುದೇ ಒಂದು ಚಂದ. ಈ ಮುಂಬೈಕರ್ ಆಟವನ್ನು ನೋಡಲು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಇಷ್ಟಪಡುತ್ತಾರೆ. ಒಂಡೇ ಕ್ರಿಕೆಟಿನಲ್ಲಿ ಮೂರು ದ್ವಿಶತಕ ಮಾಡಿದ ದಾಖಲೆ ಮತ್ತು ಅತಿ ಹೆಚ್ಚು ರನ್ (264) ಹೊಡೆದ ದಾಖಲೆ ಕೂಡ ರೋಹಿತ್ ಹೆಸರಿನಲ್ಲಿದೆ. ದಾಖಲೆಯ ಐಪಿಎಲ್ ಚಾಂಪಿಯನ್ ಶಿಪ್ ಮುಂಬೈ ತಂಡಕ್ಕೆ ಗೆದ್ದುಕೊಟ್ಟ ಕೀರ್ತಿ ಕೂಡ ರೋಹಿತ್ ಶರ್ಮಾಗೆ ಸಲ್ಲುತ್ತದೆ.

ಮೂರು ದ್ವಿಶತಕ ಬಾರಿಸಿದವನ ಜೀವನದಲ್ಲಿ ಮೂರು ಹುಡುಗಿಯರು

ಮೂರು ದ್ವಿಶತಕ ಬಾರಿಸಿದವನ ಜೀವನದಲ್ಲಿ ಮೂರು ಹುಡುಗಿಯರು

ಒಂಡೇ ಕ್ರಿಕೆಟ್ ಇತಿಹಾಸದಲ್ಲಿ ಮೂರು ದ್ವಿಶತಕ ಏಕೈಕ ಆಟಗಾರ ರೋಹಿತ್ ಶರ್ಮಾ. ಇಂತಹ ರೋಹಿತ್ ಶರ್ಮಾ ಜೀವನದಲ್ಲಿ ಮದುವೆಗೆ ಮೊದಲು ಮೂವರು ಹುಡುಗಿಯರು ಬಂದು ಹೋಗಿದ್ದಾರೆ. ಹೈಸ್ಕೂಲ್ ಜೀವನದಲ್ಲಿ ಮೊದಲ ಬಾರಿಗೆ ಒಂದು ಹುಡುಗಿಯ ಜೊತೆಯಲ್ಲಿ ರೋಹಿತ್ ಪ್ರೀತಿಯಲ್ಲಿ ಬೀಳುತ್ತಾರೆ. 'ಮೈ ಆಟೋಗ್ರಾಫ್' ಕಥೆಯಂತೆ ಹೈಸ್ಕೂಲ್‌ನಲ್ಲಿ ಹುಟ್ಟಿದ ಪ್ರೀತಿ ಕಾಲೇಜು ಮೆಟ್ಟಿಲು ಹತ್ತುವ ಒಳಗೆ ಮುಗಿದುಹೋಗುತ್ತದೆ. ಕ್ರಿಕೆಟರ್ ಆಗಿ ನೆಲೆ ಕಾಣುವ ಸಮಯದಲ್ಲೇ ಹೈದರಾಬಾದಿಗೆ ಸೇರಿದ ಯುವತಿಯೊಬ್ಬಳನ್ನು ರೋಹಿತ್ ಶರ್ಮಾ ಪ್ರೀತಿಸಿದ್ದರು. ಒಂದಷ್ಟು ಸಮಯ ಇವರಿಬ್ಬರ ಪ್ರೀತಿ ಗುಟ್ಟು ಗುಟ್ಟಾಗಿ ನಡೆದಿದೆ, ಅದು ಸಾರ್ವಜನಿಕಕೊಳ್ಳುವ ಹೊತ್ತಿಗೆ ಇಬ್ಬರ ಮಧ್ಯೆ ಬ್ರೇಕಪ್ ಆಗಿದೆ.

ಮಾಡೆಲ್ ಕಮ್ ಬಾಲಿವುಡ್ ನಟಿ ಜೊತೆ ರೋಹಿತ್ ರೋಮ್ಯಾನ್ಸ್

ಮಾಡೆಲ್ ಕಮ್ ಬಾಲಿವುಡ್ ನಟಿ ಜೊತೆ ರೋಹಿತ್ ರೋಮ್ಯಾನ್ಸ್

'ಆಟಗಾರನಾಗಿ ಪ್ರಬುದ್ಧಮಾನಕ್ಕೆ ಬರುವ ಸಮಯದಲ್ಲಿ ನೋಡಲು ಅತ್ಯಂತ ಸಭ್ಯನಾಗಿ ಕಾಣುವ ರೋಹಿತ್ ಶರ್ಮ ಹೇಗೆ ಸೋಫಿಯಾ ಹಯಾತ್ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದಾನೆ?' ಅಂತಹ ಆ ಸಮಯದಲ್ಲಿ ದೊಡ್ಡ ಚರ್ಚೆಯಾಗಿತ್ತು. ಹೀಗೆ ಚರ್ಚೆಯಾಗಲು ಕಾರಣವೂ ಇದೆ ಸೋಫಿಯಾ ಹಯಾತ್ ಬಾಲಿವುಡ್ ರಂಗಿನ ರಂಗು ಪ್ರಪಂಚದಲ್ಲಿ, ಪೇಜ್ ತ್ರೀ ಪಾರ್ಟಿಗಳಲ್ಲಿ ದೊಡ್ಡ ಪಬ್ಲಿಸಿಟಿ ಮಾಡುವ ನಟಿಯಾಗಿ ಖ್ಯಾತಿ ಪಡೆದವಳು. ತನ್ನ ಚೆಲ್ಲು ಚೆಲ್ಲು ಆಟಗಳಿಂದಲೇ ಖ್ಯಾತಿ ಪಡೆದವಳು, ಈಕೆಯ ಹೆಸರು ಅನೇಕರ ಜೊತೆ ಈಗಾಗಲೇ ತಳುಕು ಹಾಕಿಕೊಂಡಿದೆ.

ಯಾರು ಈ ಸೋಫಿಯಾ ಹಯಾತ್?

ಯಾರು ಈ ಸೋಫಿಯಾ ಹಯಾತ್?

Aksar 2, Six X, ನಾಚ್ಲೆ ಲಂಡನ್, ಡೈರಿ ಆಫ್ ಬಟರ್ಫ್ಲೈ ಮುಂತಾದ ಎರಡನೇ ದರ್ಜೆಯ ಚಿತ್ರಗಳಲ್ಲಿ ಬೋಲ್ಡಾಗಿ ಅಭಿನಯಿಸಿದ ನಟಿ. ಆದರೆ ಸೋಫಿಯಾ ಸದಾ ಸುದ್ದಿಯಲ್ಲಿರುವುದು ಸಿನಿಮಾಗಳಿಂದ ಅಲ್ಲ, ಬದಲಾಗಿ ಈ ಎಕ್ಸ್ ಬಿಗ್ ಬಾಸ್ ಕಂಟೆಸ್ಟೆಂಟ್ (big boss season 7) ವಿವಾದಗಳಿಂದ ಮತ್ತು ತನ್ನ ವಿವಾದಾತ್ಮಕವಾದ ಹೇಳಿಕೆ ಮತ್ತು ಜೀವನಶೈಲಿಯಿಂದ. ರೋಹಿತ್ ಶರ್ಮಾ ಇಂದ ದೂರವಾದ ಮೇಲೆ ಲಂಡನ್ ಗೆ ಸೇರಿದ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದಾಳೆ, ಆದರೆ ಈ ವಿವಾಹ ಹೆಚ್ಚು ಕಾಲ ಬಾಳಲಿಲ್ಲ. ಕೇವಲ ಒಂದೇ ವರ್ಷದಲ್ಲಿ ಡಿವೋರ್ಸ್ ಪಡೆದಿರುವ ಈಕೆ ಪ್ರಸ್ತುತ ಅಥ್ಲೀಟ್ ಒಬ್ಬರ ಜತೆ ಡೇಟಿಂಗ್ ನಲ್ಲಿ ಇದ್ದಾಳೆ.

''ಕೊಯ್ಲಿಗಾಗಿ ರೋಹಿತ್‌ನ ಬಿಟ್ಟೆ''

''ಕೊಯ್ಲಿಗಾಗಿ ರೋಹಿತ್‌ನ ಬಿಟ್ಟೆ''

ಸೋಫಿಯಾ ಹಯಾತ್ -ರೋಹಿತ್ ಶರ್ಮ ಡೇಟಿಂಗ್ ಮತ್ತು ರೋಮ್ಯಾನ್ಸ್ ವರ್ಷಗಳ ಹಿಂದೆ ಸಾಕಷ್ಟು ಹಸಿಬಿಸಿ ಚರ್ಚೆಯ ವಸ್ತುವಾಗಿತ್ತು. ಇಬ್ಬರು ಜೊತೆಯಲ್ಲಿ ಓಡಾಡುವ ಅನೇಕ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೆಂಡ್ ಆಗಿತ್ತು. 'ನಾವಿಬ್ಬರೂ ಒಟ್ಟಿಗೆ ಹೋಟೆಲ್ ಗಳಲ್ಲಿ ಬೀಚ್ ಗಳಲ್ಲಿ ಕಾಲ ಕಳೆದಿದ್ದೇವೆ' ಅಂತ ಹೇಳಿದ್ದ ಸೋಫಿಯಾ ತನ್ನ ರಿಲೇಷನ್ಶಿಪ್ ರೋಹಿತ್ ಜೊತೆ ಬ್ರೇಕಪ್ ಮಾಡಿಕೊಂಡಮೇಲೆ ಕೊಹ್ಲಿ ಜೊತೆಗೆ ಇರುವ ಅವಳ ಫೋಟೋ ಹಾಕಿ ಸೋಶಿಯಲ್ ಮೀಡಿಯಾದಲ್ಲಿ 'ಕೊಯ್ಲಿಗಾಗಿ ನಾನು ರೋಹಿತ್ ಜೊತೆ ರಿಲೇಷನ್ಶಿಪ್ ಬ್ರೇಕಪ್ ಮಾಡಿಕೊಂಡೆ' ಅಂತ ಸ್ಟೇಟ್ಮೆಂಟ್ ಕೊಟ್ಟಿದ್ದಳು. ಆದರೆ ಅದನ್ನು ಯಾರೂ ಹೆಚ್ಚಿಗೆ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಏಕೆಂದರೆ ಸೋಫಿಯಾ ಜೀವನಶೈಲಿ ತಿಳಿದಿರುವ ಎಲ್ಲರೂ ಅದನ್ನು ಲಘುವಾಗಿ ತೆಗೆದುಕೊಂಡರು.

ಮದುವೆ, ಸುಖೀ ಕುಟುಂಬದಲ್ಲಿ ರೋಹಿತ್

ಮದುವೆ, ಸುಖೀ ಕುಟುಂಬದಲ್ಲಿ ರೋಹಿತ್

ಸೋಫಿಯಾ ಹಯಾತ್ ಎಪಿಸೋಡ್ ಮುಗಿದ ನಂತರ ರೋಹಿತ್ ಶರ್ಮಾ ಸ್ಪೋರ್ಟ್ಸ್ ಕಂಪನಿಗಳಿಗೆ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ರಿತಿಕಾ ಅವರ ಪರಿಚಯವಾಗುತ್ತದೆ, ಪರಿಚಯ ಪ್ರೀತಿಯಾಗಿ ಪರಿವರ್ತನೆಯಾಗಲು ತುಂಬಾ ಸಮಯ ಹಿಡಿಸುವುದಿಲ್ಲ ಇಬ್ಬರು ಒಂದಷ್ಟು ಕಾಲ ಪ್ರೀತಿಸಿದ ಮೇಲೆ ಕೊನೆಗೆ 2015ರಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರು. ರೋಹಿತ್- ರಿತಿಕಾ ದಂಪತಿಗಳಿಗೆ ಮೂರುವರ್ಷದ ಸಮೀರ್ ಶರ್ಮಾ ಎಂಬ ಮುದ್ದಾದ ಮಗುವಿದೆ.

More from Filmibeat

English summary
Who are those Rohit sharma's ex girl friends and who is that Bollywood page 3 model he romanced before his marriage. He was in love with two girls and he was in relationship with big boss season 7 contestant and page 3 model Sofia Hayat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X