For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಟಿ

  |

  ಟಾಲಿವುಡ್ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ "ಪುಷ್ಪ" ಸಿನಿಮಾದ ಬಗ್ಗೆ ಮತ್ತೊಂದು ಇಂಟ್ರಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಪೋಸ್ಟರ್ ಮೂಲಕವೇ ನಿರೀಕ್ಷೆ ಹೆಚ್ಚಿಸಿರುವ ಪುಷ್ಪ ಸಿನಿಮಾ ದಿನದಿಂದನಕ್ಕೆ ಕೂತೂಹಲ ಕೆರಳಿಸುತ್ತಿದೆ. ಇತ್ತೀಚಿಗಷ್ಟೆ ಚಿತ್ರದಲ್ಲಿ ಖ್ಯಾತ ನಿರೂಪಕಿ ಸುಮಾ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು.

  Hardik Pandya soon to be father , trolls and wishes rain over him | Hardik Pandya &Natasha Stankovic

  ಇದರ ಬೆನ್ನೆಲ್ಲೆ ಈಗ ಮತ್ತೋರ್ವ ಖ್ಯಾತ ನಟಿಯ ಹೆಸರು ಕೇಳಿ ಬರುತ್ತಿದೆ. ಅದು ಮತ್ಯಾರು ಅಲ್ಲ, ನಟಿ ಮತ್ತು ಶಾಸಕಿ ರೋಜ. ಹೌದು, ಅಲ್ಲು ಅರ್ಜುನ್ ಸಿನಿಮಾ ಮೂಲಕ ರೋಜ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಎಲ್ಲಾ ಭಾಷೆಯಲ್ಲಿಯೂ ಅಭಿನಯಿಸಿರುವ ರೋಜ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಮುಂದೆ ಓದಿ..

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಿರೂಪಕಿ?ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾದಲ್ಲಿ ದಕ್ಷಿಣ ಭಾರತದ ಖ್ಯಾತ ನಿರೂಪಕಿ?

  ರಾಜಕೀಯದಲ್ಲಿ ರೋಜ ಬ್ಯುಸಿ

  ರಾಜಕೀಯದಲ್ಲಿ ರೋಜ ಬ್ಯುಸಿ

  ಕಳೆದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಗನ್ಮೋಹನ್ ರೆಡ್ಡಿ ನೇತೃತ್ವದ ವೈ ಎಸ್ ಆರ್ ಕಾಂಗ್ರೇಸ್ ಪಕ್ಷದಿಂದ ಸ್ಪರ್ಧಿಸಿ ಗೆಲವು ದಾಖಲಿಸಿರುವ ರೋಜ ಚಿತ್ರರಂಗದಿಂದ ದೂರ ಸರಿದ್ದಾರೆ. 2015ರಲ್ಲಿ ಕೊನೆಯದಾಗಿ ತಮಿಳು ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರೋಜ ಆನಂತರ ಮತ್ತೆ ಬಣ್ಣಹಚ್ಚಿಲ್ಲ.

  ಪುಷ್ಪ ಸಿನಿಮಾ ಮೂಲಕ ಮತ್ತೆ ವಾಪಸ್?

  ಪುಷ್ಪ ಸಿನಿಮಾ ಮೂಲಕ ಮತ್ತೆ ವಾಪಸ್?

  ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷೆಯ ಪುಷ್ಪ ಸಿನಿಮಾ ಮೂಲಕ ಮತ್ತೆ ಬಣ್ಣಹಚ್ಚಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ರೋಜ ಆಗಲಿ ಅಥವಾ ಸಿನಿಮಾ ತಂಡವಾಗಲಿ ಯಾವುದೆ ಮಾಹಿತಿ ಬಹಿರಂಗ ಪಡಿಸಿಲ್ಲ. ಆದರೆ ರೋಜ ಹೆಸರು ವೈರಲ್ ಆಗಿದೆ.

  ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?ಅಲ್ಲು ಅರ್ಜುನ್ 'ಪುಷ್ಪ' ಸಿನಿಮಾಗೆ ಬಾಲಿವುಡ್ ಸ್ಟಾರ್ ನಟಿಯ ಎಂಟ್ರಿ?

  ವಿಲನ್ ಆಗ್ತಾರಾ ರೋಜಾ?

  ವಿಲನ್ ಆಗ್ತಾರಾ ರೋಜಾ?

  ಮೂಲಗಳ ಪ್ರಕಾರ ರೋಜ ಚಿತ್ರದಲ್ಲಿ ವಿಲನ್ ಆಗಿ ನಟಿಸಲಿದ್ದಾರಂತೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಚಿತ್ರತಂಡವೇ ಬಹಿರಂಗಪಡಿಸಬೇಕು. ಸದ್ಯ ರಾಜಕೀಯದ ಜೊತೆಗೆ ಕೊರೊನಾ ವಿರುದ್ಧ ಹೋರಾಡುವ ದೊಡ್ಡ ಸವಾಲು ಎದುರಾಗಿದೆ. ಈ ಸಮಯದಲ್ಲಿ ಸಖತ್ ಬ್ಯುಸಿ ಇರುವ ರೋಜ ಮತ್ತೆ ಬಣ್ಣಹಚ್ಚುವುದು ನಿಜನಾ ಎನ್ನುವ ಅನುಮಾನ ಸಹ ವ್ಯಕ್ತವಾಗುತ್ತಿದೆ.

  ಅಲ್ಲು ಅರ್ಜುನ್ ಸಹೋದರಿಯಾಗಿ ಸುಮಾ ಅಭಿನಯ?

  ಅಲ್ಲು ಅರ್ಜುನ್ ಸಹೋದರಿಯಾಗಿ ಸುಮಾ ಅಭಿನಯ?

  ಪುಷ್ಪ ಸಿನಿಮಾದಲ್ಲಿ ಖ್ಯಾತ ನಿರೂಪಕಿ ಸುಮಾ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಚಿತ್ರದಲ್ಲಿ ಸುಮಾ, ಅಲ್ಲು ಅರ್ಜುನ್ ಸಹೋದರಿಯ ಪಾತ್ರ ಮಾಡಲಿದ್ದಾರಂತೆ. ಸದ್ಯ ಯಾವುದೇ ಈವೆಂಟ್ ಗಳು ಇಲ್ಲದ ಕಾರಣ ಸುಮಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆಯೂ ಸಹ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

  ಅಲ್ಲು ಜೊತೆ ಬಾಲಿವುಡ್ ಬೋಲ್ಡ್ ನಟಿ ಡ್ಯಾನ್ಸ್?

  ಅಲ್ಲು ಜೊತೆ ಬಾಲಿವುಡ್ ಬೋಲ್ಡ್ ನಟಿ ಡ್ಯಾನ್ಸ್?

  ನಟ ಅಲ್ಲು ಅರ್ಜುನ್ ಜೊತೆ ಬಾಲಿವುಡ್ ನ ಬೋಲ್ಡ್ ನಟಿ ದಿಶಾ ಪಟಾನಿ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರದ ಐಟಂ ಹಾಡಿಗಾಗಿ ದಿಶಾ ಪಟಾನಿಗೆ ಸಿನಿಮಾತಂಡ ಆಫರ್ ನೀಡಿದೆಯಂತೆ. ಆದರೆ ದಿಶಾ ಕಡೆಯಿಂದ ಇನ್ನೂ ಗ್ರೀನ್ ಸಿಕ್ಕಿಲ್ಲ. ಅಲ್ಲು ಡ್ಯಾನ್ಸ್ ಅಂದರೆ ತುಂಬ ಇಷ್ಟ ಹಾಗಾಗಿ ಅಲ್ಲು ಜೊತೆ ನಟಿಸಿದರು ಅಚ್ಚರಿ ಇಲ್ಲ ಎಂದು ಹೇಳಳಾಗುತ್ತಿದೆ. ಪುಷ್ಪ ಸಿನಿಮಾಗೆ ಸಾಕಷ್ಟು ಮಂದಿಯ ಹೆಸರುಗಳು ಕೇಳಿ ಬರುತ್ತಿವೆ ಆದರೆ ಇದ್ಯಾವುದನ್ನು ಚಿತ್ರತಂಡ ಇನ್ನೂ ಅಧಿಕೃತ ಗೊಳಿಸಿಲ್ಲ. ಹಾಗಾಗಿ ಇದೆಲ್ಲ ರೂಮರ್ಸ್ ಅಷ್ಟೆನಾ ಅಥವಾ ನಿಜನಾ ಎನ್ನುವುದನ್ನು ಕಾದುನೋಡಬೇಕು.

  English summary
  Actress and Politician Roja will play villain role in Allu Arjun's Pushpa movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X