For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್ ಚಿತ್ರಕ್ಕೆ 350 ಕೋಟಿಯ ಭರ್ಜರಿ ಆಫರ್: ಡೀಲ್ ಓಕೆ ಮಾಡ್ತಾರಾ ರಾಜಮೌಳಿ?

  |

  ಬಾಹುಬಲಿ ಸರಣಿ ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಚಿತ್ರ ಆರ್‌ಆರ್‌ಆರ್‌. ತೆಲುಗು ಇಂಡಸ್ಟ್ರಿಯ ಇಬ್ಬರು ಸೂಪರ್ ಸ್ಟಾರ್ ನಟರಾದ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ್ ಒಟ್ಟಿಗೆ ನಟಿಸಿರುವ ಚಿತ್ರ. 2021 ಅಕ್ಟೋಬರ್ 13 ರಂದು ಆರ್‌ಆರ್‌ಆರ್ ಸಿನಿಮಾ ತೆರೆಗೆ ಬರಲಿದೆ ಎಂದು ಈಗಾಗಲೇ ಘೋಷಣೆಯಾಗಿದೆ.

  ಗಳಿಕೆಯಲ್ಲಿ ಬಾಹುಬಲಿ ಚಿತ್ರಗಳನ್ನು ಮೀರಿಸಲಿದೆ ಎಂದು ಅಂದಾಜಿಸಲಾಗುತ್ತಿದೆ. ಬಾಹುಬಲಿ ಎರಡನೇ ಭಾಗ 1800 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿತ್ತು. ಈಗ ನಿರ್ಮಾಣವಾಗುತ್ತಿರುವ ಆರ್ ಆರ್ ಆರ್ ಚಿತ್ರ ಈ ಗಳಿಕೆಯನ್ನು ಹಿಂದಿಕ್ಕಲಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಇಂತಹ ಚರ್ಚೆಯ ಮಧ್ಯೆ ಆರ್‌ಆರ್‌ಆರ್ ಚಿತ್ರಕ್ಕೆ ಭರ್ಜರಿ ಆಫರ್ ಬಂದಿರುವ ವಿಚಾರ ಹೊರಬಿದ್ದಿದೆ. ಮುಂದೆ ಓದಿ...

  ರಾಜಮೌಳಿ ಚಿತ್ರಕ್ಕೆ 350 ಕೋಟಿ ಆಫರ್!

  ರಾಜಮೌಳಿ ಚಿತ್ರಕ್ಕೆ 350 ಕೋಟಿ ಆಫರ್!

  ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಐತಿಹಾಸಿಕ ಕಥೆ ಹೊಂದಿರುವ ಚಿತ್ರಕ್ಕೆ ಬಿಡುಗಡೆ ಮುಂಚೆಯೇ 350 ಕೋಟಿ ಆಫರ್ ಬಂದಿದೆ ಎನ್ನಲಾಗಿದೆ. ರಾಜಮೌಳಿ ಸಿನಿಮಾಗೆ ದಕ್ಷಿಣ ಭಾರತದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಮುಂದಾಗಿದ್ದು, 350 ಕೋಟಿ ನೀಡುವುದಾಗಿ ಹೇಳಿದ್ದಾರಂತೆ. ಹೀಗಂತ ಬಾಲಿವುಡ್ ವೆಬ್‌ಸೈಟ್‌ ಪಿಂಕ್‌ವಿಲ್ಲ ವರದಿ ಮಾಡಿದೆ.

  ಎಸ್‌ಎಸ್‌ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್ಎಸ್‌ಎಸ್‌ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್

  ಬಾಲಿವುಡ್‌ನಲ್ಲಿ 100 ಕೋಟಿ?

  ಬಾಲಿವುಡ್‌ನಲ್ಲಿ 100 ಕೋಟಿ?

  ಬಾಹುಬಲಿ ಸರಣಿ ಬಳಿಕ ರಾಜಮೌಳಿಗೆ ಬಾಲಿವುಡ್‌ನಲ್ಲಿ ಮಾರ್ಕೆಟ್ ಹೆಚ್ಚಾಗಿದೆ. ನೇರವಾಗಿ ಸಿನಿಮಾ ಮಾಡದೇ ಹೋದರೂ ರಾಜಮೌಳಿ ನಿರ್ದೇಶಿಸುವ ಚಿತ್ರದ ಹಿಂದಿ ಡಬ್‌ಗೆ ಬೇಡಿಕೆ ಹೆಚ್ಚಿದೆಯಂತೆ. ವರದಿಗಳ ಪ್ರಕಾರ, ಆರ್‌ಆರ್‌ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆಯಂತೆ. ಅನಿಲ್ ತಡಾನಿ (ಎಎ ಫಿಲಂಸ್) ಈಗಾಗಲೇ ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆಯಂತೆ.

  ವಿದೇಶದಲ್ಲಿ 70 ಕೋಟಿ!

  ವಿದೇಶದಲ್ಲಿ 70 ಕೋಟಿ!

  ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಬಾಲಿವುಡ್‌ನಲ್ಲಿ ಅನಿಲ್ ತಡಾನಿ ವಿತರಿಸುವ ಸಾಧ್ಯತೆ ಹೆಚ್ಚಿದೆ. ಹೊರದೇಶಗಳಿಂದಲೂ ಆರ್‌ಆರ್‌ಆರ್ ಚಿತ್ರಕ್ಕೆ ಭಾರಿ ಬೇಡಿಕೆಯಿದ್ದು, ಸುಮಾರು 70 ಕೋಟಿ ಡೀಲ್ ಆಗಿದೆಯಂತೆ.

  RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿRRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

  English summary
  SS Rajamouli directorial RRR movie get 350 crore offer from south Distributor reports Bollywood website.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X