ಬೆರಗಾಗಿಸುತ್ತೆ RRR ಚಿತ್ರದ ಪ್ರೀ ಕಲೆಕ್ಷನ್ ರಿಪೋರ್ಟ್
ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಭಾರಿ ಸದ್ದು ಮಾಡ್ತಿದೆ. ಜೂನಿಯರ್ ಎನ್ ಟಿ ಆರ್ ಮತ್ತು ರಾಮ್ ಚರಣ್ ತೇಜ ಒಟ್ಟಿಗೆ ನಟಿಸುತ್ತಿರುವ ಕಾರಣ ಸೌತ್ ಇಂಡಸ್ಟ್ರಿಯಲ್ಲಿ ಇತಿಹಾಸ ಸೃಷ್ಟಿಸಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಬಹುದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಈ ಚಿತ್ರ ಈ ವರ್ಷದ ಅಂತ್ಯಕ್ಕೆ ತೆರೆಗೆ ಬರಲಿದೆ. ಅಷ್ಟರಲ್ಲೇ ಪ್ರೀ-ಕಲೆಕ್ಷನ್ ರಿಪೋರ್ಟ್ ಮೇಲೆ ಭಾರಿ ಚರ್ಚೆಯಾಗುತ್ತಿದೆ.
ಟಾಲಿವುಡ್ ಮಾಯನಗರಿಯಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ ಪ್ರಕಾರ, ಆರ್ ಆರ್ ಆರ್ ಸಿನಿಮಾ ಬಿಡುಗಡೆಗೂ ಮುಂಚೆಯೇ ಸುಮಾರು 200 ಕೋಟಿ ಗಳಿಸಲಿದೆಯಂತೆ. ಇದು ಕೇವಲ ಆಂಧ್ರ ಮತ್ತು ತೆಲಂಗಾಣ ರಾಜ್ಯದಲ್ಲಿ ಮಾತ್ರ ಎನ್ನಲಾಗಿದೆ. ಈ ಮೂಲಕ ರಾಜಮೌಳಿಯ ಬಾಹುಬಲಿ ಚಿತ್ರದ ಕಲೆಕ್ಷನ್ ಗೆ ಫೈಟ್ ನೀಡಲಿದೆ ಎಂಬ ಮಾತಿದೆ.

ಒಂದು ವೇಳೆ ಆಂಧ್ರ ರಾಜ್ಯದಲ್ಲಿ ಮಾತ್ರ 200 ಕೋಟಿ ಪ್ರೀ-ಕಲೆಕ್ಷನ್ ಮಾಡಿದ್ದೇ ಆದರೆ, ಇದು ತೆಲುಗು ಇಂಡಸ್ಟ್ರಿಯಲ್ಲಿ ದಾಖಲೆಯಾಗಲಿದೆ. ಇನ್ನು ಆರ್ ಆರ್ ಆರ್ ಚಿತ್ರವನ್ನು ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದು ಸುಮಾರು 350 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದೆ.
RRR: ನಿಮ್ಮ ಊಹೆಗೂ ಮೀರಿದೆ ಜೂ.ಎನ್.ಟಿ.ಆರ್ ಇಂಟ್ರೊಡಕ್ಷನ್ ಸೀನ್.!
ರಾಮ್ ಚರಣ್, ಎನ್ ಟಿ ಆರ್ ಜೊತೆ ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಸರಣ್, ಸಮುದ್ರಕಣಿ ಹಾಗೂ ಹಾಲಿವುಡ್ ಪ್ರಮುಖ ಕಲಾವಿದರು ನಟಿಸುತ್ತಿದ್ದಾರೆ. ಎಂಎಂ ಕೀರವಾಣಿ ಸಂಗೀತ ಒಳಗೊಂಡಿದೆ.


Click it and Unblock the Notifications











