twitter
    For Quick Alerts
    ALLOW NOTIFICATIONS  
    For Daily Alerts

    RRR ಬಿಡುಗಡೆ ಮುಂದಕ್ಕೆ, ಹೊಸ ದಿನಾಂಕ ಲಾಕ್ ಮಾಡಿದ ರಾಜಮೌಳಿ?

    |

    ದೇಶದಲ್ಲಿ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿಲ್ಲ. ನಿಧಾನವಾಗಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದ್ದರೂ ಸಹಜ ಸ್ಥಿತಿಗೆ ಬರಲು ಹೆಚ್ಚು ಸಮಯಬೇಕು. ಈ ನಡುವೆ ಚಿತ್ರರಂಗಕ್ಕೆ ರಿಲೀಫ್ ಕೊಟ್ಟರೂ 100 ಪರ್ಸೆಂಟ್ ಕೆಲಸ ಮಾಡಲು ಅವಕಾಶ ಕೊಡುವುದು ಬಹುತೇಕ ಅನುಮಾನ. ಚಿತ್ರೀಕರಣಕ್ಕೆ ಷರತ್ತು ವಿಧಿಸಿ ಅನುಮತಿ ಕೊಡಲಾಗುತ್ತದೆ. ಹಾಗೆಯೇ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ನೀತಿ ಜಾರಿ ಮಾಡಬಹುದು ಎಂಬ ನಿರೀಕ್ಷೆ ಇದೆ.

    ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಪ್ರಕಟಿಸಿರುವ ದಿನಕ್ಕೆ ಚಿತ್ರಮಂದಿರಕ್ಕೆ ಬರಲು ಹಿಂದೇಟು ಹಾಕುತ್ತಿರುವ ಸ್ಟಾರ್ ನಟರ ಚಿತ್ರಗಳ ಹೊಸ ದಿನಾಂಕಗಳನ್ನು ಹುಡುಕುತ್ತಿದೆ. ಸದ್ಯ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್ ಚಿತ್ರದ ರಿಲೀಸ್ ದಿನಾಂಕ ಮತ್ತೆ ಮುಂದಕ್ಕೆ ಹಾಕಿಕೊಂಡಿದೆ ಎಂಬ ವಿಚಾರ ಹೊರಬಿದ್ದಿದೆ. ಹೊಸ ದಿನಾಂಕ ಯಾವುದು? ಮುಂದೆ ಓದಿ...

    325 ಕೋಟಿಗೆ RRR ಚಿತ್ರದ ಡಿಜಿಟಲ್ ಹಕ್ಕು ಮಾರಾಟ, ಫ್ಯಾನ್ಸ್‌ಗೆ ನಿರಾಸೆ 325 ಕೋಟಿಗೆ RRR ಚಿತ್ರದ ಡಿಜಿಟಲ್ ಹಕ್ಕು ಮಾರಾಟ, ಫ್ಯಾನ್ಸ್‌ಗೆ ನಿರಾಸೆ

    ಆರ್‌ಆರ್‌ಆರ್ ರಿಲೀಸ್ ದಿನಾಂಕ ಮುಂದಕ್ಕೆ

    ಆರ್‌ಆರ್‌ಆರ್ ರಿಲೀಸ್ ದಿನಾಂಕ ಮುಂದಕ್ಕೆ

    ಈ ಹಿಂದೆ ಪ್ರಕಟಿಸಿರುವಂತೆ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಅಕ್ಟೋಬರ್ 13, 2021ಕ್ಕೆ ಚಿತ್ರಮಂದಿರಕ್ಕೆ ಬರಬೇಕಿದೆ. ಆದರೆ ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣವಾಗದಿರುವ ಕಾರಣ ಆ ದಿನಕ್ಕೆ ಅದ್ಧುರಿ ಓಪನಿಂಗ್ ಸಾಧ್ಯವಿಲ್ಲ ಎಂದು ಅರಿತುಕೊಂಡ ಚಿತ್ರತಂಡ ಈಗ ಮುಂದಕ್ಕೆ ಹೋಗಲು ತೀರ್ಮಾನಿಸಿದೆ.

    ಹೊಸ ದಿನಾಂಕ ಯಾವುದು?

    ಹೊಸ ದಿನಾಂಕ ಯಾವುದು?

    ದಸರಾ ಹಬ್ಬದ ವಿಶೇಷವಾಗಿ ಆರ್‌ಆರ್‌ಆರ್ ಬರಲು ನಿರ್ಧರಿಸಿತ್ತು. ಈಗ ಆ ದಿನಕ್ಕೆ ಬಿಡುಗಡೆ ಕಷ್ಟಸಾಧ್ಯ. ಹೊಸ ದಿನಾಂಕ ಗುರುತು ಮಾಡಿರುವ ಚಿತ್ರತಂಡ 2022ರ ಏಪ್ರಿಲ್ ತಿಂಗಳಲ್ಲಿ ಪ್ರೇಕ್ಷಕರೆದುರು ಬರಲು ತಯಾರಿ ನಡೆಸಿದೆ ಎಂಬ ಮಾಹಿತಿ ಹೊರಬಿದ್ದಿದೆ.

    ಬಿಡುಗಡೆಗೂ ಮುಂಚೆ 900 ಕೋಟಿ ಗಳಿಸಿದ ಆರ್‌ಆರ್‌ಆರ್‌: 'ಬಾಹುಬಲಿ' ದಾಖಲೆ ಉಡೀಸ್ಬಿಡುಗಡೆಗೂ ಮುಂಚೆ 900 ಕೋಟಿ ಗಳಿಸಿದ ಆರ್‌ಆರ್‌ಆರ್‌: 'ಬಾಹುಬಲಿ' ದಾಖಲೆ ಉಡೀಸ್

    ಪೋಸ್ಟ್ ಪ್ರೊಡಕ್ಷನ್‌ಗೆ ಹೆಚ್ಚು ಸಮಯ

    ಪೋಸ್ಟ್ ಪ್ರೊಡಕ್ಷನ್‌ಗೆ ಹೆಚ್ಚು ಸಮಯ

    ಆರ್‌ಆರ್‌ಆರ್ ಶೂಟಿಂಗ್ ಸಂಪೂರ್ಣವಾಗಿ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಕೈಗೆತ್ತಿಕೊಂಡಿರುವ ಚಿತ್ರತಂಡಕ್ಕೆ ಲಾಕ್‌ಡೌನ್ ಸಮಸ್ಯೆಯಾಗಿದೆ. ಈ ವರ್ಷ ಬಿಡುಗಡೆಯಿಂದ ಹಿಂದೆ ಸರಿದರೆ, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಹಾಗೂ ರಿಲೀಸ್‌ಗೆ ಹೆಚ್ಚು ಸಮಯ ಸಿಗುತ್ತದೆ ಎಂಬ ಕಾರಣದಿಂದ ಏಪ್ರಿಲ್ ಆಯ್ಕೆ ಮಾಡಿಕೊಂಡಿದೆಯಂತೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇಲ್ಲ.

    ಒಟಿಟಿಗೆ ಭರ್ಜರಿ ಆಫರ್

    ಒಟಿಟಿಗೆ ಭರ್ಜರಿ ಆಫರ್

    ಆರ್‌ಆರ್‌ಆರ್ ಚಿತ್ರ ಸಿನಿಮಾ ಮಂದಿರಗಳಲ್ಲಿಯೇ ತೆರೆಕಾಣಲಿದೆ. ರಾಜಮೌಳಿ ಚಿತ್ರದ ಡಿಜಿಟಲ್ ಹಕ್ಕು, ವಿತರಣೆ ಹಕ್ಕು, ಸ್ಯಾಟ್‌ಲೈಟ್ ಹಕ್ಕು ಭರ್ಜರಿ ಬೆಲೆಗೆ ಮಾರಾಟವಾಗಿದೆ ಎಂಬ ಮಾಹಿತಿ ಇದೆ. ರಿಲೀಸ್‌ಗೂ ಮುಂಚೆಯೇ 900 ಕೋಟಿಗೂ ಅಧಿಕ ಬಿಸಿನೆಸ್ ಮಾಡಿದೆ ಎಂದು ವರದಿಯಾಗಿದೆ.

    ಆರ್‌ಆರ್‌ಆರ್ ಸಿನಿಮಾ ಕುರಿತು

    ಆರ್‌ಆರ್‌ಆರ್ ಸಿನಿಮಾ ಕುರಿತು

    ಬಾಹುಬಲಿ ಸರಣಿ ಬಳಿಕ ರಾಜಮೌಳಿ ನಿರ್ದೇಶನದ ಚಿತ್ರ. ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ನಾಯಕರಾಗಿ ನಟಿಸಿದ್ದಾರೆ. ಅಜಯ್ ದೇವಗನ್, ಆಲಿಯಾ ಭಟ್ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕಥೆ ಹೊಂದಿರುವ ಈ ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ. ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಂಎಂ ಕೀರವಾಣಿ ಸಂಗೀತ ಒದಗಿಸಿದ್ದಾರೆ.

    English summary
    SS Rajamouli directorial RRR Movie Release To Get Postponed due to Covid 19 crisis.
    Tuesday, June 8, 2021, 13:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X