twitter
    For Quick Alerts
    ALLOW NOTIFICATIONS  
    For Daily Alerts

    RRR ಸಿನಿಮಾ ಬಿಡುಗಡೆ ಮುಂದೂಡಿಕೆ ಸಾಧ್ಯತೆ

    |

    ದೇಶದ ಅತಿ ನಿರೀಕ್ಷೆಯ ಸಿನಿಮಾಗಳಲ್ಲಿ ಒಂದು 'ಆರ್ಆರ್ಆರ್'. ಸ್ಟಾರ್ ನಟರಾದ ಜೂ ಎನ್‌ಟಿಆರ್, ರಾಮ್ ಚರಣ್ ತೇಜ ಒಟ್ಟಿಗೆ ನಟಿಸಿರುವುದು ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗಲು ಒಂದು ಕಾರಣವಾದರೆ, ಮತ್ತೊಂದು ಕಾರಣ ಈ ಸಿನಿಮಾವನ್ನು ನಿರ್ದೇಶಿಸಿರುವುದು ರಾಜಮೌಳಿ ಎಂಬುದು.

    ರಾಜಮೌಳಿ ನಿರ್ದೇಶಿಸಿರುವ 'ಆರ್ಆರ್ಆರ್' ಸಿನಿಮಾ ಘೋಷಣೆ ಮಾಡಿದ್ದು 2017, ಅಧಿಕೃತ ಘೋಷಣೆಯಾಗಿದ್ದು 2018ರ ಮಾರ್ಚ್ ತಿಂಗಳಲ್ಲಿ. ಸಿನಿಮಾ ಘೋಷಣೆಯಾಗಿ ಈಗಾಗಲೇ ಮೂರು ವರ್ಷಗಳಾಗಿವೆ, ಇನ್ನು ಮೂರು ತಿಂಗಳು ಕಳೆದರೆ ನಾಲ್ಕು ವರ್ಷವಾಗುತ್ತದೆ. ಆದರೆ ಸಿನಿಮಾಕ್ಕೆ ಬಿಡುಗಡೆ ಭಾಗ್ಯ ಇನ್ನೂ ದೊರೆತಿಲ್ಲ.

    ಸಿನಿಮಾವನ್ನು ಜನವರಿ 07ಕ್ಕೆ ಬಿಡುಗಡೆ ಮಾಡುವುದಾಗಿ ರಾಜಮೌಳಿ ಮತ್ತು ತಂಡ ಈಗಾಗಲೇ ಘೋಷಿಸಿದೆ. ಆದರೆ ಈಗ ನಡೆಯುತ್ತಿರುವ ಹೊಸ ಬೆಳವಣಿಗೆಗಳನ್ನು ಗಮನಿಸಿದರೆ ಸಿನಿಮಾದ ಬಿಡುಗಡೆ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವೆಂಬಂತೆ ಸಿನಿಮಾದ ಟ್ರೇಲರ್ ಬಿಡುಗಡೆಯನ್ನು ಚಿತ್ರತಂಡ ಮುಂದೂಡಿದೆ.

    ಮೂರನೇ ಅಲೆಯ ಆತಂಕ ಪ್ರಾರಂಭವಾಗಿದೆ

    ಮೂರನೇ ಅಲೆಯ ಆತಂಕ ಪ್ರಾರಂಭವಾಗಿದೆ

    ದೇಶದೆಲ್ಲೆಡೆ ಈಗ ಕೊರೊನಾ ಮೂರನೇ ಅಲೆಯ ಆತಂಕ ಪ್ರಾರಂಭವಾಗಿದೆ. ಕೊರೊನಾ ವೇರಿಯೆಂಟ್ ಓಮಿಕ್ರಾನ್ ಈಗಾಗಲೇ ಭಾರತ ಪ್ರವೇಶಿಸಿದ್ದಾಗಿದೆ. ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹಠಾತ್ತನೆ ಹೆಚ್ಚಳವಾಗುತ್ತಿದೆ. ಕೇರಳದಲ್ಲಿ ಚಿತ್ರಮಂದಿರಗಳ ಮೇಲೆ ನಿರ್ಬಂಧ ಮುಂದುವರೆಸಲಾಗಿದೆ. ಮಹಾರಾಷ್ಟ್ರದಲ್ಲಿಯೂ ಚಿತ್ರಮಂದಿರಗಳ ಮೇಲೆ ನಿರ್ಬಂಧ ಹೇರಲಾಗುತ್ತಿದೆ ಇದು ಸಹಜವಾಗಿಯೇ ಚಿತ್ರರಂಗವನ್ನು ಆತಂಕಕ್ಕೆ ತಳ್ಳಿದೆ.

    ಸಚಿವರನ್ನು ಭೇಟಿಯಾದ ರಾಜಮೌಳಿ ಮತ್ತು 'ಆರ್ಆರ್ಆರ್' ನಿರ್ಮಾಪಕ

    ಸಚಿವರನ್ನು ಭೇಟಿಯಾದ ರಾಜಮೌಳಿ ಮತ್ತು 'ಆರ್ಆರ್ಆರ್' ನಿರ್ಮಾಪಕ

    ಈ ಹೊಸ ಬೆಳವಣಿಗೆಯಿಂದ ರಾಜಮೌಳಿ ಹಾಗೂ 'ಆರ್ಆರ್ಆರ್' ಚಿತ್ರತಂಡ ಚಿಂತೆಗೀಡಾಗಿದ್ದು ಸಿನಿಮಾವನ್ನು ಈಗ ಬಿಡುಗಡೆ ಮಾಡಬೇಕೋ ಬೇಡವೋ ಎಂಬ ಗೊಂದಲಕ್ಕೆ ಬಿದ್ದಿದೆ. ಇದೇ ಕಾರಣದಿಂದಾಗಿ ನಿನ್ನೆಯಷ್ಟೆ ನಿರ್ದೇಶಕ ರಾಜಮೌಳಿ, ನಿಯೋಗವೊಂದನ್ನು ಕರೆದುಕೊಂಡು ಹೋಗಿ ತೆಲಂಗಾಣದ ಸಿನಿಮಾಟೊಗ್ರಾಫಿ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚಿತ್ರರಂಗದ ಮೇಲೆ ನಿರ್ಬಂಧ ಹೇರುವ ಬಗ್ಗೆ ಸ್ಪಷ್ಟನೆ ಬಯಸಿಯೇ ರಾಜಮೌಳಿ ಹಾಗೂ ನಿಯೋಗ ಸಚಿವರನ್ನು ಭೇಟಿಯಾಗಿತ್ತು. ಈ ನಿಯೋಗದಲ್ಲಿ ರಾಜಮೌಳಿ ಜೊತೆಗೆ 'ಆರ್ಆರ್ಆರ್' ನಿರ್ಮಾಪಕ ಡಿವಿವಿ ದಯಾನಂದ್ ಸಹ ಇದ್ದರು.

    ಬಿಡುಗಡೆ ಮುಂದೂಡಲು ಇವೆ ಹಲವು ಕಾರಣ

    ಬಿಡುಗಡೆ ಮುಂದೂಡಲು ಇವೆ ಹಲವು ಕಾರಣ

    ಕೊರೊನಾ ಸಮಸ್ಯೆ ಜೊತೆಗೆ ಚಿತ್ರಮಂದಿರಗಳ ಟಿಕೆಟ್ ದರ ಏರಿಕೆ ವಿಷಯದ ಗೊಂದಲ ಸಹ ಇನ್ನೂ ನಿವಾರಣೆ ಆಗಿಲ್ಲ. ತೆಲಂಗಾಣದಲ್ಲಿ ಟಿಕೆಟ್ ದರ ಏರಿಕೆಗೆ ಅವಕಾಶ ಸಿಕ್ಕಿದೆಯಾದರೂ ಆಂಧ್ರ ಪ್ರದೇಶದಲ್ಲಿ ಅವಕಾಶ ಸಿಕ್ಕಿಲ್ಲ. ಅಲ್ಲಿ ಸರ್ಕಾರದ ಜೊತೆಗೆ ಚಿತ್ರರಂಗ ಮಾತುಕತೆ ನಡೆಸುತ್ತಿದೆ. ಜೊತೆಗೆ ನ್ಯಾಯಾಲಯದ ಮೂಲಕವೂ ಹೋರಾಟಕ್ಕೆ ಅಣಿಯಾಗಿದೆ. ನ್ಯಾಯಾಲಯದ ಮೂಲಕ ಸ್ಪಷ್ಟ ಚಿತ್ರಣ ಸಿಗಲು ಇನ್ನಷ್ಟು ಸಮಯವಾಗಬಹುದು ಹಾಗಾಗಿ ಆ ವರೆಗೆ ಸಿನಿಮಾವನ್ನು ಬಿಡುಗಡೆ ಮಾಡದೆ ಇರುವುದು ಕ್ಷೇಮ ಎಂಬ ನಿರ್ಧಾರ ಚಿತ್ರತಂಡಕ್ಕೆ ಬಂದಿರುವ ಸಾಧ್ಯತೆ ಇದೆ. ಇದರ ಜೊತೆಗೆ ಡಿಸೆಂಬರ್ ಅಂತ್ಯ ಹಾಗೂ ಜನವರಿ ತಿಂಗಳಲ್ಲಿ ತೆಲುಗು ಚಿತ್ರರಂಗದ ಅನೇಕ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಹಾಗಾಗಿ ಜನವರಿ ತಿಂಗಳಲ್ಲಿ ಸಿನಿಮಾ ಬಿಡುಗಡೆ ಬೇಡವೆಂಬ ಬಗ್ಗೆ ಚಿತ್ರತಂಡ ಚರ್ಚಿಸುತ್ತಿದೆ.

    ಎರಡು ಬಾರಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ

    ಎರಡು ಬಾರಿ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದೆ

    'ಆರ್ಆರ್ಆರ್' ಸಿನಿಮಾ ಬಿಡುಗಡೆ ಈಗಾಗಲೇ ಎರಡು ಬಾರಿ ಮುಂದಕ್ಕೆ ಹೋಗಿದೆ. ಸಿನಿಮಾದ ಚಿತ್ರೀಕರಣ ಪ್ರಾರಂಭ ಮಾಡಿದಾಗ 'ಆರ್ಆರ್ಆರ್' ಸಿನಿಮಾವನ್ನು 2021ರ ಜನವರಿ 25ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿತ್ತು. ಆ ನಂತರ 2021ರ ಅಕ್ಟೋಬರ್ 13ಕ್ಕೆ ಬಿಡುಗಡೆ ಮಾಡುತ್ತೇವೆ ಎಂದರು ನಂತರ ಈಗ ಜನವರಿ 07ಕ್ಕೆ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಆದರೆ ಈ ದಿನಾಂಕ ಸಹ ಮುಂದೂಡಲ್ಪಡುವ ಅನುಮಾನ ಕಾಡುತ್ತಿದೆ. ಬಹು ತಾರಾಗಣದ 'ಆರ್ಆರ್ಆರ್' ನಲ್ಲಿ ಜೂ ಎನ್‌ಟಿಆರ್, ರಾಮ್ ಚರಣ್ ತೇಜ, ಬಾಲಿವುಡ್ ನಟಿ ಆಲಿಯಾ ಭಟ್, ನಟ ಅಜಯ್ ದೇವಗನ್, ಶ್ರಿಯಾ ಶರಣ್, ಬ್ರಿಟೀಷ್ ನಟಿ ಒಲಿವಿಯಾ ಮೋರಿಸ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ಎಂಎಂ ಕೀರವಾಣಿ.

    English summary
    Telugu's most anticipated movie RRR release date may get postponed again. Now announced release date is January 07.
    Saturday, December 4, 2021, 14:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X