For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್ ಚಿತ್ರೀಕರಣ ವಿಳಂಬ: ರಾಜಮೌಳಿ-ಜೂ.ಎನ್‌ಟಿಆರ್ ನಡುವೆ ಕಿರಿಕ್!?

  |

  'ಬಾಹುಬಲಿ; ದಿ ಬಿಗಿನಿಂಗ್' ಸಿನಿಮಾದ ಚಿತ್ರೀಕರಣವನ್ನು 2013 ಜುಲೈ ನಲ್ಲಿ ಪ್ರಾರಂಭಿಸಿದ್ದ ರಾಜಮೌಳಿ, ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿಸಿದ್ದು 2015 ಮಾರ್ಚ್‌ನಲ್ಲಿ! ರಾಜಮೌಳಿ ಚಿತ್ರೀಕರಣದ ಶೆಡ್ಯೂಲ್ ಯಾವಾಗಲೂ ಸುಧೀರ್ಘವಾಗಿರುತ್ತದೆ.

  ಆರ್‌ಆರ್‌ಆರ್ ಸಿನಿಮಾದ ಸಂದರ್ಭದಲ್ಲಿಯೂ ಹೀಗೆಯೇ ಆಗಿದೆ. ನಿರ್ದೇಶಕ ರಾಜಮೌಳಿ ಆರ್‌ಆರ್‌ಆರ್(ಆಗಿನ್ನೂ ಸಿನಿಮಾಕ್ಕೆ ಹೆಸರಿಟ್ಟಿರಲಿಲ್ಲ) ಸಿನಿಮಾ ಘೋಷಣೆ ಮಾಡಿದ್ದು 2017 ರಲ್ಲಿ. ಜೂ.ಎನ್‌ಟಿಆರ್ ಮತ್ತು ರಾಮ್‌ಚರಣ್ ತೇಜ ಅವರು ಸಿನಿಮಾದ ನಾಯಕರಾಗಿರುತ್ತಾರೆ ಎಂದು ಹೇಳಿದ್ದು ಮಾರ್ಚ್‌ 2018 ರಲ್ಲಿ. ಸಿನಿಮಾದ ಮುಹೂರ್ತ ನಡೆದಿದ್ದು 2018 ನವೆಂಬರ್ 11 ರಂದು ಆದರೆ ಸಿನಿಮಾ ಚಿತ್ರೀಕರಣ ಮಾತ್ರ ಇನ್ನೂ ಮುಗಿದಿಲ್ಲ.

  ಮಧ್ಯದಲ್ಲಿ ಕೊರೊನಾ ಲಾಕ್‌ಡೌನ್ ಆದ ಕಾರಣ ಚಿತ್ರೀಕರಣ ತಡವಾಗಿದೆ. ಆದರೆ ಕೊರೊನಾ ಲಾಕ್‌ಡೌನ್ ಅವಧಿಯನ್ನು ತೆಗೆದರೂ ಈ ಮುಂಚೆ ಯೋಜನೆ ಹಾಕಿದಷ್ಟು ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಂಡಿಲ್ಲ ಎಂದು ಸಿನಿಮಾದಲ್ಲಿ ನಾಯಕರಲ್ಲಿ ಒಬ್ಬರಾದ ಜೂ.ಎನ್‌ಟಿಆರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಯೋಜನೆ ಪ್ರಕಾರ ನಡೆದಿಲ್ಲ ಚಿತ್ರೀಕರಣ

  ಯೋಜನೆ ಪ್ರಕಾರ ನಡೆದಿಲ್ಲ ಚಿತ್ರೀಕರಣ

  ತೆಲುಗು ಮಾಧ್ಯಮಗಳು ಕೆಲವು ಈ ಬಗ್ಗೆ ವರದಿ ಮಾಡಿದ್ದು, ಕೊರೊನಾ ನಂತರ ಸಿನಿಮಾದ ಚಿತ್ರೀಕರಣ ಶೆಡ್ಯೂಲ್ ಅನ್ನು ಬದಲಾಯಿಸಿ ಹೊಸದಾಗಿ ಯೋಜನೆ ಹಾಕಿ ಚಿತ್ರೀಕರಣ ಪ್ರಾರಂಭಿಸಲಾಗಿದೆ. ಆದರೂ ಯೋಜನೆ ಪ್ರಕಾರ ಚಿತ್ರೀಕರಣ ನಡೆದಿಲ್ಲ. ಬದಲಿಗೆ ಇನ್ನಷ್ಟು ತಡವಾಗಿದೆ! ಕೊರೊನಾ ಲಾಕ್‌ಡೌನ್ ಆಗುವ ಒಂದು ವರ್ಷ ಐದು ತಿಂಗಳ ಮುಂಚೆ ಸಿನಿಮಾದ ಮುಹೂರ್ತ ಮಾಡಲಾಗಿತ್ತು ಎಂಬುದನ್ನು ಸಹ ಇಲ್ಲಿ ಗಮನಿಸಬೇಕು.

  ಎರಡು ಸಿನಿಮಾಗಳು ಜೂ.ಎನ್‌ಟಿಆರ್‌ಗಾಗಿ ಕಾಯುತ್ತಿವೆ

  ಎರಡು ಸಿನಿಮಾಗಳು ಜೂ.ಎನ್‌ಟಿಆರ್‌ಗಾಗಿ ಕಾಯುತ್ತಿವೆ

  ಜೂ.ಎನ್‌ಟಿಆರ್ ಅವರು ಎರಡು ಸಿನಿಮಾಗಳಲ್ಲಿ ನಟಿಸಲು ತಯಾರಾಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ಹಾಗೂ ಪ್ರಶಾಂತ್ ನೀಲ್ ನಿರ್ದೇಶಿಸಲಿರುವ ಸಿನಿಮಾಗಳಿಗೆ ಜೂ.ಎನ್‌ಟಿಆರ್ ಈಗಾಗಲೇ ಡೇಟ್ಸ್ ನೀಡಿದ್ದಾರೆ. ಆದರೆ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣವೇ ಇನ್ನೂ ಮುಗಿದಿಲ್ಲ. ಇದು ಜೂ.ಎನ್‌ಟಿಆರ್ ಅವರಿಗೆ ಬೇಸರ ತಂದಿದೆ. ಚಿತ್ರೀಕರಣ ತಡವಾಗುತ್ತಿರುವುದಕ್ಕೆ ರಾಜಮೌಳಿ ಹಾಗೂ ನಿರ್ಮಾಪಕ ದಾನಯ್ಯ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಜೂ.ಎನ್‌ಟಿಆರ್.

  ಕೆಲವು ನಟರ ದೃಶ್ಯಗಳನ್ನು ಬೇಗನೆ ಚಿತ್ರೀಕರಣ ಮಾಡಲಾಗಿದೆ

  ಕೆಲವು ನಟರ ದೃಶ್ಯಗಳನ್ನು ಬೇಗನೆ ಚಿತ್ರೀಕರಣ ಮಾಡಲಾಗಿದೆ

  ಕೊರೊನಾ ಕಾರಣದಿಂದ ಆಲಿಯಾ ಭಟ್, ವಿದೇಶಿ ನಟಿ ಒಲಿವಿಯಾ ಮೋರಿಸ್ ಹಾಗೂ ಇನ್ನೂ ಕೆಲವು ವಿದೇಶಿ ನಟರು ಕೊಟ್ಟಿದ್ದ ಡೇಟ್‌ಗಳಲ್ಲಿ ವ್ಯತ್ಯಾಸವಾಗಿದೆ. ಆಲಿಯಾ ಹಾಗೂ ಇನ್ನಿತರ ಪ್ರಮುಖ ನಟರ ಭಾಗಗಳನ್ನು ಬೇಗನೆ ಚಿತ್ರೀಕರಿಸಿ ಮುಗಿಸಿದ್ದಾರೆ ರಾಜಮೌಳಿ. ಇದರಿಂದ ಜೂ.ಎನ್‌ಟಿಆರ್ ದೃಶ್ಯ ಭಾಗಗಳ ಚಿತ್ರೀಕರಣ ತಡವಾಗಿದೆ. ಆಲಿಯಾ ಭಟ್ ಅವರು ಮತ್ತೆ ಏಪ್ರಿಲ್‌ನಲ್ಲಿ ಆರ್‌ಆರ್‌ಆರ್ ತಂಡವನ್ನು ಮತ್ತೆ ಸೇರಿಕೊಳ್ಳಲಿದ್ದಾರೆ.

  'ಆಚಾರ್ಯ' ಸಿನಿಮಾದಲ್ಲಿ ನಟಿಸುತ್ತಿರುವ ರಾಮ್ ಚರಣ್

  'ಆಚಾರ್ಯ' ಸಿನಿಮಾದಲ್ಲಿ ನಟಿಸುತ್ತಿರುವ ರಾಮ್ ಚರಣ್

  ನಟ ರಾಮ್ ಚರಣ್ ತೇಜ ಅವರು ಆರ್‌ಆರ್‌ಆರ್ ಚಿತ್ರೀಕರಣದ ನಡುವೆಯೇ ಆಚಾರ್ಯ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಮುಗಿಸಿದ್ದಾರೆ. ಆದರೆ ಜೂ.ಎನ್‌ಟಿಆರ್ ಒಂದು ಬಾರಿ ಒಂದೇ ಸಿನಿಮಾದಲ್ಲಿ ನಟಿಸುವ ನಿಯಮ ಪಾಲಿಸುತ್ತಾರೆ. ಹಾಗಾಗಿ ಚಿತ್ರೀಕರಣ ತಡಮಾಡುತ್ತಿರುವ ರಾಜಮೌಳಿ ಮೇಲೆ ಸಿಟ್ಟಾಗಿದ್ದಾರೆ.

  English summary
  RRR Telugu movie shooting delayed so actor Jr NTR is unhappy with Rajamouli. Two directors waiting for Jr NTR to make movies with him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X