For Quick Alerts
  ALLOW NOTIFICATIONS  
  For Daily Alerts

  12 ವರ್ಷಗಳ ಬಳಿಕ ನಿರ್ದೇಶನಕ್ಕೆ ಇಳಿಯಲಿರೋ ಗೋಲ್ಡನ್ ಸ್ಟಾರ್ ಗಣೇಶ್: ಇಲ್ಲಿದೆ ಡಿಟೈಲ್ಸ್!

  |

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯಕೀಗ ಯಶಸ್ಸಿನ ಗುಂಗಿನಲ್ಲಿದ್ದಾರೆ. ಭಟ್ಟರೊಂದಿಗೆ ಸೇರಿ ಗಾಳಿಪಟ ಹಾರಿಸಿದ್ದ ಗಣೇಶ್‌ ಬಾಕ್ಸಾಫೀಸ್‌ನಲ್ಲಿ ಮತ್ತೆ ಗೆಲುವಿನ ನಗೆ ಬೀರಿದ್ದರು. ಇಬ್ಬರ ಕಾಂಬಿನೇಷನ್‌ಗೆ ಹಾಗೂ ಗಾಳಿಪಟ ಬ್ರ್ಯಾಂಡ್‌ಗೆ ಇನ್ನೂ ಬೆಲೆ ಇದೆ ಅನ್ನೋ ಪ್ರೂವ್ ಆಗಿತ್ತು.

  'ಗಾಳಿಪಟ 2' ಬಾಕ್ಸಾಫೀಸ್‌ ಗೆದ್ದಿದ್ದೇ ಗೆದ್ದಿದ್ದು ಗೋಲ್ಡನ್ ಗಣೇಶ್ ಫುಲ್ ಆಕ್ಟಿವ್ ಆಗಿದ್ದಾರೆ. ಗಣೇಶ್ ಈಗಾಗಲೇ ಒಪ್ಪಿಕೊಂಡ ಸಿನಿಮಾಗಳು ಕೂಡ ಚುರುಕಾಗಿ ಶೂಟಿಂಗ್ ಶುರು ಮಾಡಿವೆ. ಒಂದರ ಹಿಂದೊಂದು ಸಿನಿಮಾಗಳು ಶೂಟಿಂಗ್‌ನಲ್ಲಿ ಬ್ಯುಸಿಯಾಗಿವೆ. ಈ ಮಧ್ಯೆ ಗಣೇಶ್ ಮತ್ತೊಂದು ಸಾಹಸಕ್ಕೆ ಕೈ ಹಾಕಲು ಮನಸ್ಸು ಮಾಡಿದ್ದಾರೆ.

  'ಬಾನ ದಾರಿಯಲ್ಲಿ' ಮಂಗಳೂರಿನಿಂದ ಕೀನ್ಯಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್!'ಬಾನ ದಾರಿಯಲ್ಲಿ' ಮಂಗಳೂರಿನಿಂದ ಕೀನ್ಯಾಗೆ ಹೊರಟು ನಿಂತ ಗೋಲ್ಡನ್ ಸ್ಟಾರ್!

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ 'ಗಾಳಿಪಟ 2' ಯಶಸ್ಸಿನ ಬಳಿಕ ನಿರ್ದೇಶನದ ಕಡೆ ಮುಖ ಮಾಡಲು ನಿರ್ಧರಿಸಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅಸಲಿಗೆ ಗಣೇಶ್ ಯಾವಾಗ ನಿರ್ದೇಶನ ಮಾಡುತ್ತಾರೆ? ನಿರ್ಮಾಪಕರು ಯಾರು? ಈಗೇನು ಮಾಡುತ್ತಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನ?

  ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನ?

  ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನಕ್ಕೆ ಇಳಿಯಲು ಬೇಕಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಗಣೇಶ್ ಆಪ್ತರೊಂದಿಗೆ ಸ್ವತ: ಈ ಮಾತನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. 'ಗಾಳಿಪಟ 2' ಯಶಸ್ಸಿನ ಬಳಿಕ ಸಿನಿಮಾ ಬಗ್ಗೆ ಮತ್ತಷ್ಟು ಹುಮ್ಮಸ್ಸು ಹೆಚ್ಚಾಗಿದೆ. ಹೀಗಾಗಿ ನಟನೆ ಜೊತೆಗೆ ಮತ್ತೆ ಪೂರ್ಣ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಲು ಮುಂದಾಗಲಿದ್ದಾರಂತೆ. ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

  'ಗಾಳಿಪಟ 2' ಚಿತ್ರದ ಪಾತ್ರ ಮಾಡಲು ಕಷ್ಟ ಆಯ್ತು: ವೈಭವಿ ಶಾಂಡಿಲ್ಯ ಮನದಾಳ'ಗಾಳಿಪಟ 2' ಚಿತ್ರದ ಪಾತ್ರ ಮಾಡಲು ಕಷ್ಟ ಆಯ್ತು: ವೈಭವಿ ಶಾಂಡಿಲ್ಯ ಮನದಾಳ

  ನಿರ್ದೇಶನಕ್ಕೆ ಇಳಿಯೋದು ಯಾವಾಗ?

  ನಿರ್ದೇಶನಕ್ಕೆ ಇಳಿಯೋದು ಯಾವಾಗ?

  ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ ಒಪ್ಪಿಕೊಂಡಿರೋ ಸಿನಿಮಾಗಳನ್ನು ಬೇಗನೇ ಪೂರ್ಣಗೊಳಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆದರೆ, ಗಣೇಶ್ ಮುಂದಿನ ವರ್ಷ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಕಥೆ ರೆಡಿ ಇದ್ದು, ಪ್ರೀ ಪ್ರೊಡಕ್ಷನ್ ಕೆಲಸ ಆರಂಭ ಆಗಬೇಕಿದೆ ಅನ್ನೋ ಮಾತು ಕೇಳಿ ಬರುತ್ತಿದೆ. ಆದರೆ, ಇವರದ್ದೇ ಹೋಮ್ ಪ್ರೊಡಕ್ಷನ್‌ನಲ್ಲಿ ನಿರ್ಮಾಣ ಆಗುತ್ತಾ? ಇಲ್ಲಾ ಬೇರೆ ನಿರ್ಮಾಪಕರು ಇದ್ದಾರಾ? ಅನ್ನೋ ಗುಟ್ಟು ಮಾತ್ರ ರಟ್ಟಾಗಿಲ್ಲ.

  ನಿರ್ದೇಶನ ಮಾಡುತ್ತಿರೋದು ಮೊದಲೇನಲ್ಲ!

  ನಿರ್ದೇಶನ ಮಾಡುತ್ತಿರೋದು ಮೊದಲೇನಲ್ಲ!

  ಗೋಲ್ಡನ್ ಸ್ಟಾರ್ ಗಣೇಶ್ ನಿರ್ದೇಶನ ಮಾಡೋಕೆ ಮುಂದಾಗಿರೋದು ಇದೇ ಮೊದಲೇನಲ್ಲ. 11 ವರ್ಷಗಳ ಹಿಂದೆ ಗಣೇಶ್ ಅನಿವಾರ್ಯ ಕಾರಣಗಳಿಂದ ನಿರ್ದೇಶಕನಕ್ಕೆ ಇಳಿಯಬೇಕಾಗಿತ್ತು. 2011ರಲ್ಲಿ ಗಣೇಶ್ ಹೋಮ್ ಪ್ರೊಡಕ್ಷನ್ ನಿರ್ಮಿಸಿದ್ದ 'ಕೂಲ್ ಸಖತ್ ಹಾಟ್ ಮಗಾ' ಸಿನಿಮಾ ರಿಲೀಸ್ ಆಗಿತ್ತು. ಮೊದಲು ಈ ಸಿನಿಮಾವನ್ನು ಮುಸ್ಸಂಜೆ ಮಹೇಶ್ ನಿರ್ದೇಶನ ಮಾಡುತ್ತಾರೆ ಎನ್ನಲಾಗಿತ್ತು. ಆದರೆ, ಈ ಸಿನಿಮಾದಿಂದ ಮುಸ್ಸಂಜೆ ಮಹೇಶ್ ಹೊರನಡೆದಿದ್ದರು. ಆಗ ಗಣೇಶ್ ಅವರೇ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.

  ವಿದೇಶದಲ್ಲಿ 250 ಶೋ ಕಂಡ 'ಗಾಳಿಪಟ 2': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?ವಿದೇಶದಲ್ಲಿ 250 ಶೋ ಕಂಡ 'ಗಾಳಿಪಟ 2': ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

  ಗಣೇಶ್ ಕೈಯಲ್ಲಿ ಮೂರು ಸಿನಿಮಾ

  ಗಣೇಶ್ ಕೈಯಲ್ಲಿ ಮೂರು ಸಿನಿಮಾ

  ಗಣೇಶ್ ಕೈಯಲ್ಲಿ ಮೂರು ಸಿನಿಮಾಗಳಿವೆ. 'ತ್ರಿಬಲ್ ರೈಡಿಂಗ್' ಸಿನಿಮಾ ಮುಗಿದಿದ್ದು ಬಿಡುಗಡೆ ರೆಡಿಯಾಗಿದೆ. ಮೂಲಗಳ ಪ್ರಕಾರ, ಡಿಸೆಂಬರ್‌ಗೆ ಸಿನಿಮಾ ರಿಲೀಸ್ ಆಗ್ಬಹುದು. ಇದರೊಂದಿಗೆ ದಿ ಸ್ಟೋರಿ ಆಫ್ ರಾಯಘಡ ಹಾಗೂ ಪ್ರೀತಂ ಗುಬ್ಬಿ ನಿರ್ದೇಶಿಸುತ್ತಿರುವ 'ಬಾನದಾರಿಯಲ್ಲಿ..' ಸಿನಿಮಾ ಶೂಟಿಂಗ್‌ ನಡೆಯುತ್ತಿದೆ. ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಸಿನಿಮಾ ಶೂಟಿಂಗ್ ಮುಗಿಸಿ, ಕೀನ್ಯಾ ಕಡೆಗೆ ಪಯಣ ಬೆಳೆಸಿದೆ. ಈ ಮೂರು ಸಿನಿಮಾಗಳ ಬಳಿಕ ಗಣೇಶ್ ನಿರ್ದೇಶನ ಮಾಡುತ್ತಾರೆ ಅನ್ನೋದು ಸುದ್ದಿ. ಇನ್ನೇನಿದ್ದರೂ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

  English summary
  Rumor is that Golden Star Ganesh Will Direct For The First Time, Know More.
  Wednesday, September 14, 2022, 10:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X