For Quick Alerts
  ALLOW NOTIFICATIONS  
  For Daily Alerts

  ಮೆಗಾಸ್ಟಾರ್ ಕುಟುಂಬದ ಅಳಿಯ ಆಗುತ್ತಾರಾ ಪ್ರಭಾಸ್: ನಿಹಾರಿಕಾ ಹೇಳಿದ್ದೇನು?

  |

  ಪ್ರಭಾಸ್ ಸಿನಿಮಾಗಳಷ್ಟೆ ಅವರ ಮದುವೆಯೂ ಕುತೂಹಲ ಕೆರಳಿಸಿದೆ. ಎರಡು-ಮೂರು ತಿಂಗಳಿಗೊಮ್ಮೆ ಪ್ರಭಾಸ್ ಮದುವೆಯ ಮಾತು ಸುದ್ದಿ ಮಾಡುತ್ತಲೇ ಇರುತ್ತದೆ. ಈಗಲೂ ಹಾಗೆಯೇ ಆಗಿದೆ.

  ನಾನು ಪ್ರಭಾಸ್ ರನ್ನು ಬಿಡಲ್ಲ ಎಂದ ಅನುಷ್ಕಾ ಶೆಟ್ಟಿ | Anushka Shetty & Prabhas | Filmibeat Kannada

  ಪ್ರಭಾಸ್ ಮದುವೆ ವಿಷಯ ಮತ್ತೊಮ್ಮೆ ಸುದ್ದಿಗೆ ಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬದ ಯುವತಿಯೊಂದಿಗೆ ಪ್ರಭಾಸ್ ಮದುವೆ ಮಾತುಕತೆ ನಡೆದಿದೆ ಎಂಬುದೇ ಹೊಸ ಸುದ್ದಿ.

  ಚಿರಂಜೀವಿ ಸೋದರ ನಾಗಬಾಬು ಮಗಳು ನಿಹಾರಿಕಾ ಕೋಡಿನೇಲ ಜೊತೆಗೆ ಪ್ರಭಾಸ್ ಮದುವೆ ಮಾತುಕತೆ ನಡೆದಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಿಜವಾದ ಕತೆ ಏನು ತಿಳಿಯಲು ಮುಂದೆ ಓದಿ..

  ನಿಹಾರಿಕಾ ಕೋಡಿನೇಲ ಕೊಟ್ಟಿದ್ದಾರೆ ಸ್ಪಷ್ಟನೆ

  ನಿಹಾರಿಕಾ ಕೋಡಿನೇಲ ಕೊಟ್ಟಿದ್ದಾರೆ ಸ್ಪಷ್ಟನೆ

  ಪ್ರಭಾಸ್ ಹಾಗೂ ನಿಹಾರಿಕ ಮದುವೆ ಸುದ್ದಿ ತುಸು ದಟ್ಟವಾಗಿಯೇ ಹರಿದಾಡಿದ್ದು, ನಿಜವೇ ಆಗಿದ್ದರು. ಇದು ನಡೆಯದ ಕತೆ ಎಂದೇ ಹೇಳಲಾಗುತ್ತಿದೆ. ಪ್ರಭಾಸ್ ಹಾಗೂ ತನ್ನ ಮದುವೆಯ ಸುದ್ದಿಗಳ ಬಗ್ಗೆ ಸ್ವತಃ ನಿಹಾರಿಕ ಕೋಡಿನೇಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

  ಪ್ರಭಾಸ್ ಜೊತೆ ಮದುವೆ ದೂರದ ಮಾತು: ನಿಹಾರಿಕಾ

  ಪ್ರಭಾಸ್ ಜೊತೆ ಮದುವೆ ದೂರದ ಮಾತು: ನಿಹಾರಿಕಾ

  ಪ್ರಭಾಸ್ ಜೊತೆಗಿನ ಮದುವೆ ಬಗ್ಗೆ ಮಾತನಾಡಿರುವ ನಿಹಾರಿಕಾ, ನಾನು ಅವರನ್ನು ಭೇಟಿಯಾಗಿಲ್ಲ, ಮದುವೆಯಂತೂ ದೂರದ ಮಾತು ಎಂದು ಸ್ಪಷ್ಟಪಾಡಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ನಿಹಾರಿಕಾ

  ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ನಿಹಾರಿಕಾ

  ಕೆಲವೇ ಸಿನಿಮಾಗಳಲ್ಲಿ ನಟಿಸಿರುವ ನಿಹಾರಿಕಾ ಕೋಡಿನೇಲ, ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ. ಅಭಿಮಾನಿಗಳೊಂದಿಗೆ ನಡೆಸಿದ ಮಾತುಕತೆಯಲ್ಲಿ ಇದನ್ನು ಸ್ಪಷ್ಟಪಡಿಸಿರುವ ಅವರು, ಪ್ರಭಾಸ್ ಜೊತೆಗೆ ಮದುವೆ ಆಗಲಿದೆ ಎಂಬ ಗಾಳಿ ಸುದ್ದಿ ಹೇಗೆ ಹರಡಿತೊ ಗೊತ್ತಿಲ್ಲ ಎಂದಿದ್ದಾರೆ.

  ಪ್ರಭಾಸ್ ನನ್ನ ಗೆಳೆಯ ಎಂದ ಅನುಷ್ಕಾ

  ಪ್ರಭಾಸ್ ನನ್ನ ಗೆಳೆಯ ಎಂದ ಅನುಷ್ಕಾ

  ಪ್ರಭಾಸ್-ಅನುಷ್ಕಾ ಮದುವೆಯಾಗುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಈ ಇಬ್ಬರೂ ನಟರು ನಿರಾಕರಿಸಿದ್ದಾರೆ. ಅನುಷ್ಕಾ ಅಂತೂ ನಾನು-ಪ್ರಭಾಸ್ ಉತ್ತಮ ಗೆಳೆಯರು ಎಂದು ಹೇಳಿದ್ದಾರೆ.

  English summary
  A rumor spreading that Prabhas and Niharika Kodinela going to marry. But Niharika said its just a rumor.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X