For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ 'ಜೈಲರ್' ಸಿನಿಮಾದಿಂದ ಐಶ್ವರ್ಯಾ ರೈ ಔಟ್: ತಮನ್ನಾ ಇನ್?

  |

  ಸೂಪರ್‌ಸ್ಟಾರ್ ರಜನಿಕಾಂತ್ ಹೊಸ ಸಿನಿಮಾ ಸೆಟ್ಟೇರಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ 'ಜೈಲರ್' ಸಿನಿಮಾ ಶೂಟಿಂಗ್ ಶುರುವಾಗಿದೆ. ಆಗಸ್ಟ್ 15ರ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.

  ರಜನಿಕಾಂತ್ ಹೊಸ ಸಿನಿಮಾದಲ್ಲಿ ದಿಗ್ಗಜರೇ ನಟಿಸುತ್ತಿದ್ದಾರೆ. ರಜನಿ ಜೊತೆ ಐಶ್ವರ್ಯಾ ರೈ ನಾಯಕಿ ನಟಿಸಲಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಸೂಪರ್‌ಸ್ಟಾರ್ ಫ್ಯಾನ್ಸ್ ಕೂಡ ಮತ್ತೆ ರಜನಿಕಾಂತ್ ಜೊತೆ ಐಶ್ವರ್ಯಾ ರೈ ಬಚ್ಚನ್ ನೋಡಲು ಕಾತುರರಾಗಿದ್ದರು. ಈಗ ಅವರ ಆಸೆಗಳ್ಯಾಕೋ ನಿರಾಸೆ ಆಗೋ ಹಾಗೆ ಕಾಣಿಸುತ್ತಿದೆ.

  ಐಶ್ವರ್ಯಾ ರೈ ಬಚ್ಚನ್ ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು ಅನ್ನೋ ಮಾತು ಕೇಳಿ ಬಂದಿತ್ತು. ಆದ್ರೀಗ ನೆಲ್ಸನ್ ದಿಲೀಪ್ ಕುಮಾರ್ ಶೂಟಿಂಗ್ ಆರಂಭ ಮಾಡುತ್ತಿದ್ದಂತೆ ಐಶ್ವರ್ಯಾ ಸಿನಿಮಾದಿಂದ ಹೊರಬಿದ್ದಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಅಸಲಿಗೆ 'ಜೈಲರ್' ಸಿನಿಮಾದಲ್ಲಿ ರಜನಿಗೆ ನಾಯಕಿ ಯಾರು? ಅನ್ನೋ ಪ್ರಶ್ನೆಗೆ ತಮನ್ನಾ ಹೆಸರು ಕೇಳಿಬರುತ್ತಿದೆ.

  'ಜೈಲರ್‌'ನಿಂದ ಐಶ್ವರ್ಯಾ ರೈ ಔಟ್?

  'ಜೈಲರ್‌'ನಿಂದ ಐಶ್ವರ್ಯಾ ರೈ ಔಟ್?

  ಶಂಕರ್ ನಿರ್ದೇಶಿಸಿದ 'ರೋಬೊ' ಸಿನಿಮಾದಲ್ಲಿ ರಜನಿ ಹಾಗೂ ಐಶ್ವರ್ಯಾ ರೈ ಜೋಡಿಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು. ರಜನಿ ಹಾಗೂ ಐಶ್ವರ್ಯಾ ನಡುವೆ ವಯಸ್ಸಿನ ಅಂತರವಿದ್ದರೂ, ಫ್ಯಾನ್ಸ್ ಅದ್ಯಾವುದನ್ನೂ ತಲೆಕೆಡಿಸಿಕೊಂಡಿರಲಿಲ್ಲ. ಇಬ್ಬರ ಕಾಂಬಿನೇಷನ್ ನೋಡಿ ಶಿಳ್ಳೆ ಹೊಡೆದು ಸಂಭ್ರಮಿಸಿದ್ದರು. ಈ ಮತ್ತೆ 'ಜೈಲರ್' ಸಿನಿಮಾದಲ್ಲಿ ಮತ್ತೆ ಒಂದಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಐಶ್ವರ್ಯಾ ರೈ ಈ ಸಿನಿಮಾದಿಂದ ಹೊರಬಿದ್ದಿದ್ದಾರೆ ಅನ್ನೋ ಮಾತು ಕೇಳಿಬರುತ್ತಿದೆ.

  ಐಶ್ ಔಟ್ ತಮನ್ನಾ ಇನ್?

  ಐಶ್ ಔಟ್ ತಮನ್ನಾ ಇನ್?

  ಇನ್ನೇನು ಶೂಟಿಂಗ್ ಶುರುವಾಗಬೇಕು ಅನ್ನುವಾಗಲೇ ಐಶ್ವರ್ಯಾ ರೈ ಹೊರ ಹೋಗಿದ್ದು ಚಿತ್ರತಂಡಕ್ಕೆ ದೊಡ್ಡ ತಲೆ ನೋವಾಗಿತ್ತು. ತಕ್ಷಣವೇ ಐಶ್ವರ್ಯಾ ರೈ ಬದಲಿಗೆ ಮಿಲ್ಕಿ ಬ್ಯೂಟಿ ತಮನ್ನಾರನ್ನು ಚಿತ್ರತಂಡ ಅಪ್ರೋಚ್ ಮಾಡಲಾಗಿತ್ತು. ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾಗೆ ಆಫರ್ ಸಿಗುತ್ತಲೇ ತಮನ್ನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶ್ರೀಘ್ರದಲ್ಲಿಯೇ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ.

  ತಮನ್ನಾಗೆ ಬಂಪರ್ ಆಫರ್

  ತಮನ್ನಾಗೆ ಬಂಪರ್ ಆಫರ್

  ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಬಿಡುವಿಲ್ಲದೆ ನಟಿಸುತ್ತಿದ್ದ ತಮನ್ನಾ ಇತ್ತೀಚೆಗೆ ಸೈಲೆಂಟ್ ಆಗಿದ್ದರು. ಇನ್ನೇನು ಇವರ ಕರಿಯರ್ ಮುಗಿದೇ ಹೋಯ್ತು ಅನ್ನುವಾಗಲೇ ರಾಜಮೌಳಿ ನಿರ್ದೇಶಿಸಿದ 'ಬಾಹುಬಲಿ'ಯಲ್ಲಿ ನಟಿಸೋ ಅವಕಾಶ ಸಿಕ್ಕಿತ್ತು. ಇಲ್ಲಿಂದ ಮತ್ತೆ ತಮನ್ನಾ ಚಾಲ್ತಿಗೆ ಬಂದರು. ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈಗ ಮತ್ತೆ ಅಂತಹದ್ದೇ ಒಂದು ಅವಕಾಶ ಸಿಕ್ಕಿದ್ದು, 'ಜೈಲರ್' ಮೂಲಕ ಮತ್ತೆ ಇಂಡಸ್ಟ್ರಿಯಲ್ಲಿ ರೂಲ್ ಮಾಡಲು ರೆಡಿಯಾಗಿದ್ದಾರೆ.

  ತಮನ್ನಾಗೆ ಕಾಂಪಿಟೇಷನ್

  ತಮನ್ನಾಗೆ ಕಾಂಪಿಟೇಷನ್

  ತಮನ್ನಾಗೆ ದಕ್ಷಿಣ ಭಾರತದಲ್ಲಿ ಸಿಕ್ಕಾಪಟ್ಟೆ ಕಾಂಪಿಟೇಷನ್ ಇದೆ. ರಶ್ಮಿಕಾ, ಸಮಂತಾ, ಪೂಜಾ ಹೆಗ್ಡೆ, ಕಿಯಾರಾ ಅಡ್ವಾಣಿ ಸೇರಿದಂತೆ ನಟಿಯರು ಕಾಂಪಿಟೇಟರ್ಸ್. ಇವರಿಂದಲೇ ತಮನ್ನಾಗೆ ಅವಕಾಶಗಳು ಕಡಿಮೆಯಾಗುತ್ತಿವೆ. ಈಗ 'ಜೈಲರ್' ಸಿನಿಮಾದಿಂದ ಮತ್ತೆ ಸೂಪರ್‌ಸ್ಟಾರ್‌ಗಳ ಜೊತೆ ನಟಿಸೋ ಅವಕಾಶ ಗಿಟ್ಟಿಸಿಕೊಳ್ಳಬಹುದು. ಸದ್ಯಕ್ಕೆ ತ್ರಿಶಾ ಹಾಗೂ ಶ್ರೀಯಾ ಸರಣ್ ಬಹುತೇಕ ಚಿತ್ರರಂಗದಿಂದ ಹೊರಬಿದ್ದಂತಾಗಿದೆ. ಹೀಗಾಗಿ ಮತ್ತೆ ತಮನ್ನಾ ಜೈಲರ್ ಮೂಲಕ ಕಂಬ್ಯಾಕ್ ಮಾಡುತ್ತಾರಾ? ಅನ್ನೋ ಕುತೂಹಲ ಎಲ್ಲರಲ್ಲೂ ಇದೆ.

  English summary
  Rumour Is That Aishwarya Rai Replaced Tamannaah For Rajinikanth Jailer Movie, Know More.
  Sunday, August 14, 2022, 19:24
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X