For Quick Alerts
  ALLOW NOTIFICATIONS  
  For Daily Alerts

  ಯಶ್ ಮುಂದಿನ ಸಿನಿಮಾಗೆ ಮುಹೂರ್ತ ಫಿಕ್ಸ್ ಆಯ್ತಾ? ಕೆವಿಎನ್ ಸಂಸ್ಥೆ ಹೇಳಿದ್ದೇನು?

  |

  ಎಲ್ಲಾ ಕಡೆ ರಾಕಿ ಭಾಯ್ ಹವಾ ಇನ್ನೂ ಮುಗಿದಿಲ್ಲ. ಭಾರತದಾದ್ಯಂತ ಇನ್ನೂ ಸಿನಿಪ್ರೇಮಿಗಳು 'ಕೆಜಿಎಫ್ 2' ಹ್ಯಾಂಗೋವರ್‌ನಲ್ಲೇ ಇದ್ದಾರೆ. ಇನ್ನೊಂದು ಕಡೆ 'ಕೆಜಿಎಫ್ 2' ಮಾಡಿದ ಮೋಡಿಗೆ ಸಿನಿಮಾ ಮಂದಿನೇ ಫಿದಾ ಆಗಿದ್ದಾರೆ. ಈ ಮಧ್ಯೆ ಅಭಿಮಾನಿಗಳಿಗೆ ಮಾತ್ರ ಇನ್ನೂ ಒಂದು ಪ್ರಶ್ನೆಗೆ ಉತ್ತರವೇ ಸಿಕ್ಕಿಲ್ಲ.

  'ಕೆಜಿಎಫ್ 2' ವಿಶ್ವದ ಬಾಕ್ಸಾಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆಗಳನ್ನು ಮಾಡುತ್ತಿದೆ. ಡಬ್ಬಿಂಗ್ ಸಿನಿಮಾವೊಂದು ಬಾಲಿವುಡ್‌ ದಾಖಲೆಗಳನ್ನು ಮುಲಾಜಿಲ್ಲದೆ ಉಡೀಸ್ ಮಾಡಿದೆ. ಕನ್ನಡದ ಸಿನಿಮಾ ಇಷ್ಟೊಂದು ಸದ್ದು ಮಾಡುತ್ತಿರುವುದು ಯಶ್ ಅಭಿಮಾನಿಗಳಿಗಂತೂ ಹಿಡಿದಿಟ್ಟುಕೊಳ್ಳಲಾರದ್ದಷ್ಟು ಖುಷಿ. ಆದರೆ, ಇದೇ ವೇಳೆ ಯಶ್ ಮುಂದಿನ ಸಿನಿಮಾವನ್ನು ಅನೌನ್ಸ್ ಮಾಡುತ್ತಿಲ್ಲವೆಂಬ ಬೇಸರ ಕೂಡ ಇದೆ.

  'ಕೆಜಿಎಫ್ 3' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ? ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು? 'ಕೆಜಿಎಫ್ 3' ಸಿನಿಮಾಗೆ ಹೃತಿಕ್ ರೋಷನ್ ಎಂಟ್ರಿ? ವಿಜಯ್ ಕಿರಗಂದೂರು ಪ್ರತಿಕ್ರಿಯೆ ಏನು?

  ಈ ಬೇಸರದ ನಡುವೆಯೇ ಸೋಶಿಯಲ್ ಮೀಡಿಯಾದಲ್ಲಿ ಯಶ್ ಮುಂದಿನ ಸಿನಿಮಾ ಘೋಷಣೆ ಮಾಡುವ ಹೊಸ ಡೇಟ್‌ ಬಗ್ಗೆನೂ ಚರ್ಚೆಯಾಗುತ್ತಿದೆ. ಹಾಗಿದ್ದರೆ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿರುವ ಹೊಸ ಡೇಟ್ ಯಾವುದು? ಯಾವ ಪ್ರೊಡಕ್ಷನ್ ಹೌಸ್ ಯಶ್ ಸಿನಿಮಾವನ್ನು ನಿರ್ಮಾಣ ಮಾಡಬಹುದು ಅನ್ನುವುದರ ಡಿಟೈಲ್ಸ್ ಇಲ್ಲಿದೆ ನೋಡಿ.

  41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?41 ದಿನದಲ್ಲಿ ಇಷ್ಟೊಂದು ಇಳಿಕೆ ಕಂಡೇ ಇಲ್ಲ: 'ಕೆಜಿಎಫ್ 2' ಕಲೆಕ್ಷನ್ ಡ್ರಾಪ್ ಆಗಿದ್ದೇಕೆ?

  ಯಶ್ ಹೊಸ ಸಿನಿಮಾಗೆ ಮುಹೂರ್ತ!

  ಯಶ್ ಹೊಸ ಸಿನಿಮಾಗೆ ಮುಹೂರ್ತ!

  ರಾಕಿ ಭಾಯ್ ಹೊಸ ಸಿನಿಮಾ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಷ್ಟೇ ಅಲ್ಲ. ಇಡೀ ದೇಶದಲ್ಲೇ ಕುತೂಹಲವಿದೆ. ಯಾಕಂದ್ರೆ, ಯಶ್ ಇನ್ನೂ ಹೊಸ ಸಿನಿಮಾ ಬಗ್ಗೆ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಆದರೂ, ಅವರ ಹೊಸ ಚಿತ್ರದ ಬಗ್ಗೆ ಹಲವು ಊಹಾ-ಪೋಹಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇವೆ. ಇಂತಹ ಸುದ್ದಿಗಳಲ್ಲೊಂದು ಯಶ್ ಹೊಸ ಸಿನಿಮಾದ ಲಾಂಚಿಂಗ್ ಡೇಟ್. ಮುಂಬರುವ ಜೂನ್ 03ರಂದು ಯಶ್ ಹೊಸ ಸಿನಿಮಾದ ಡೇಟ್ ಆನೌನ್ಸ್ ಆಗುತ್ತೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ.

  ಜೂನ್ 03ಕ್ಕೆ ಅನೌನ್ಸ್ ಆಗುವುದೇಕೆ?

  ಯಶ್ ಹೊಸ ಸಿನಿಮಾ ಜೂನ್ 03ರಂದು ಅನೌನ್ಸ್ ಆಗುತ್ತೆ ಎಂದು ಗುಲ್ಲೆದ್ದಿದೆ. ಆದರೆ, ಈ ಬಗ್ಗೆ ಕೂಡ ಯಶ್ ಆಗಲಿ ಅಥವಾ ಪ್ರೊಡಕ್ಷನ್ ಹೌಸ್ ಆಗಲಿ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಕಳೆದ ಕೆಲವು ದಿನಗಳಿಂದ 'ಕೆಜಿಎಫ್ 2' 50 ಪೂರೈಸಿದ ಬಳಿಕ ಯಶ್ ಹೊಸ ಸಿನಿಮಾ ಅನೌನ್ಸ್ ಆಗುತ್ತೆ ಎನ್ನುವ ಮಾಹಿತಿ ಹೊರಬಿದ್ದಿತ್ತು. ಈ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 14ರಂದು ರಿಲೀಸ್ ಆಗಿದ್ದ ಸಿನಿಮಾ ಜೂನ್ 02ರಂದು 50 ದಿನಗಳನ್ನು ಪೂರೈಸಲಿದೆ. ಈ ಕಾರಣಕ್ಕೆ 50 ದಿನದ ಸಂಭ್ರಮದ ಬಳಿಕ ಹೊಸ ಸಿನಿಮಾ ಅನೌನ್ಸ್ ಆಗಲಿದೆ ಎಂದು ಹೇಳಲಾಗುತ್ತಿದೆ.

  ಕೆವಿಎನ್ ಪ್ರೊಡಕ್ಷನ್ ಹೇಳಿದ್ದೇನು?

  ಕೆವಿಎನ್ ಪ್ರೊಡಕ್ಷನ್ ಹೇಳಿದ್ದೇನು?

  ಯಶ್ ಮುಂದಿನ ಸಿನಿಮಾವನ್ನು ನಿರ್ಮಾಣ ಮಾಡುವವರು ಯಾರು? ಎಂಬ ಪ್ರಶ್ನೆ ಕೂಡ ಅಷ್ಟೇ ಚರ್ಚೆಯಲ್ಲಿದೆ. ಈಗಾಗಲೇ ಎರಡು ಪ್ರೊಡಕ್ಷನ್ ಹೌಸ್‌ಗಳ ಹೆಸರು ರೇಸ್‌ನಲ್ಲಿದೆ. ಅದರಲ್ಲೊಂದು ಕೆವಿಎನ್‌ ಪ್ರೊಡಕ್ಷನ್ಸ್‌. ಇನ್ನೊಂದು ಹೊಂಬಾಳೆ ಫಿಲ್ಮ್ಸ್. ಅಸಲಿಗೆ ಈ ಎರಡೂ ಸಂಸ್ಥೆಗಳು ಕೂಡ ಇನ್ನೂ ಸೈಲೆಂಟಾಗಿಯೇ ಇದೆ. ಈ ವಿಚಾರವಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯನ್ನು ಸಂಪರ್ಕಿಸಿದಾಗ, " ಇನ್ನೂ ಅಂತಹ ಯಾವುದೇ ಆಲೋಚನೆ ಇಲ್ಲ. ಅಂತಹ ಬೆಳವಣಿಗೆ ಏನಾದರೂ ಇದ್ದಲ್ಲಿ ಎಲ್ಲರಿಗೂ ಮಾಹಿತಿ ನೀಡಲಾಗುತ್ತೆ." ಎಂದು ಫಿಲ್ಮಿ ಬೀಟ್‌ಗೆ ಕಾರ್ಯಕಾರಿ ನಿರ್ಮಾಪಕ ಸುಪ್ರಿತ್ ಮಾಹಿತಿ ನೀಡಿದ್ದಾರೆ.

  'ಕೆಜಿಎಫ್ 2' ಗಳಿಕೆ ಎಷ್ಟು?

  'ಕೆಜಿಎಫ್ 2' ಗಳಿಕೆ ಎಷ್ಟು?

  ಏಪ್ರಿಲ್ 14ರಂದು ಬಿಡುಗಡೆಯಾಗಿದ್ದ 'ಕೆಜಿಎಫ್ 2' ಸಿನಿಮಾ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸದ್ಯ 43ನೇ ದಿನದಂದು ₹1230 ಕೋಟಿ ದಾಟಿದೆ. ಸಿನಿಮಾ ಬಿಡುಗಡೆಯಾಗಿ ಆರು ವಾರಗಳ ಬಳಿಕ 'ಕೆಜಿಎಫ್ 2' ಕಲೆಕ್ಷನ್ ಇನ್ನೂ ಸ್ಟಡಿಯಾಗಿಯೇ ಇದೆ. ಏನೇ ಇದ್ದರೂ, ಯಶ್ ಮುಂದಿನ ನಡೆಯೇನು? ಅನ್ನೋದು ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರಕ್ಕೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಲೇ ಇದೆ.

  English summary
  Rumour Is That KGF 2 Yash Next Movie Will Launch On June 3rd, Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X