For Quick Alerts
  ALLOW NOTIFICATIONS  
  For Daily Alerts

  ಆಂಧ್ರದ ಐಟಿ ಮಂತ್ರಿ ಆಗುತ್ತಾರಾ ಸೂಪರ್‌ಸ್ಟಾರ್ ಮಹೇಶ್ ಬಾಬು?

  |

  ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್ ಬಾಬು ಬ್ಯಾಕ್‌ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತ್ರಿವಿಕ್ರಮ್ ಹಾಗೂ ರಾಜಮೌಳಿ ಇಬ್ಬರು ದಿಗ್ಗಜರೊಂದಿಗೆ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎರಡೂ ಸಿನಿಮಾಗಳ ಪ್ರೀ ಪ್ರೊಡಕ್ಷನ್ ಕೆಲಸ ಈಗಾಗಲೇ ಶುರುವಾಗಿದೆ. ಇತ್ತ ಅಭಿಮಾನಿಗಳು ಕೂಡ ಈ ಎರಡೂ ಸಿನಿಮಾಗಳನ್ನು ನೋಡಲು ಪ್ರಿನ್ಸ್ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

  ರಾಜಮೌಳಿ ಸಿನಿಮಾಗಿಂತ ಮುನ್ನ ನಿರ್ದೇಶಕ ತ್ರಿವಿಕ್ರಮ್ ಸಿನಿಮಾದಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಮಹೇಶ್ ಬಾಬು ಕುಟುಂಬದೊಂದಿಗೆ ಹಾಲಿ ಡೇಗೆ ತೆರಳಲಿದ್ದಾರೆ. ಅಲ್ಲಿಂದ ಮರಳಿದ ಬಳಿಕ ಮಹೇಶ್ ಬಾಬು ನೇರವಾಗಿ ತ್ರಿವಿಕ್ರಮ್ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

  ತ್ರಿವಿಕ್ರಮ್ ಸಿನಿಮಾಗೆ ಡಬಲ್ ಸಂಭಾವನೆಗೆ ಬೇಡಿಕೆ ಇಟ್ಟ ಮಹೇಶ್ ಬಾಬು: 100 % ಏರಿಕೆ!ತ್ರಿವಿಕ್ರಮ್ ಸಿನಿಮಾಗೆ ಡಬಲ್ ಸಂಭಾವನೆಗೆ ಬೇಡಿಕೆ ಇಟ್ಟ ಮಹೇಶ್ ಬಾಬು: 100 % ಏರಿಕೆ!

  ಈ ಮಧ್ಯೆ ಟಾಲಿವುಡ್‌ನಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದೆ. ಮಹೇಶ್ ಬಾಬು ಆಂಧ್ರದ ಮಾಹಿತಿ ತಂತ್ರಜ್ಞಾನ ಮಂತ್ರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅಸಲಿಗೆ ಟಾಲಿವುಡ್‌ ಸೂಪರ್‌ಸ್ಟಾರ್ ಮಹೇಶ್‌ ಬಾಬು ವಿಚಾರದಲ್ಲಿ ಹರಿದಾಡುತ್ತಿರುವ ಸುದ್ದಿಯೇನು? ಅಂತ ತಿಳಿಯಲು ಮುಂದೆ ಓದಿ.

  ಮಹೇಶ್ ಬಾಬು ಆಂಧ್ರದ ಐಟಿ ಮಿನಿಸ್ಟರ್!

  ಮಹೇಶ್ ಬಾಬು ಆಂಧ್ರದ ಐಟಿ ಮಿನಿಸ್ಟರ್!

  ಮಹೇಶ್ ಬಾಬು ಆಂಧ್ರದ ಐಟಿ ಮಿನಿಸ್ಟರ್ ಆಗುತ್ತಾರೆ ಅನ್ನೋ ವಿಷಯ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ನೀವು ಗೆಸ್ ಮಾಡಿದ ಹಾಗೇ ತ್ರಿವಿಕ್ರಮ್ ನಿರ್ದೇಶನದ ಸಿನಿಮಾದಲ್ಲಿ ಮಹೇಶ್ ಬಾಬು ಐಟಿ ಮಿನಿಸ್ಟರ್ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ಇಂತಹದ್ದೊಂದು ಸುದ್ದಿ ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ತ್ರಿವಿಕ್ರಮ್ ಕೂಡ ರಾಜಕೀಯ ಹಿನ್ನೆಲೆಯುಳ್ಳ ಕಥೆಯನ್ನು ಹೆಣೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

  14 ದೇಶಗಳಲ್ಲಿ 'ಮೇಜರ್' ನಂ 1: ನೆಟ್‌ಫ್ಲಿಕ್ಸ್‌ ಕೊಟ್ಟ ವರದಿಯಲ್ಲೇನಿದೆ?14 ದೇಶಗಳಲ್ಲಿ 'ಮೇಜರ್' ನಂ 1: ನೆಟ್‌ಫ್ಲಿಕ್ಸ್‌ ಕೊಟ್ಟ ವರದಿಯಲ್ಲೇನಿದೆ?

  ಪ್ರಿನ್ಸ್ 28ನೇ ಸಿನಿಮಾದ ಕಥೆಯೇನು?

  ಪ್ರಿನ್ಸ್ 28ನೇ ಸಿನಿಮಾದ ಕಥೆಯೇನು?

  ಟಾಲಿವುಡ್ ಮೂಲಗಳ ಪ್ರಕಾರ, ತ್ರಿವಿಕ್ರಮ್ ರಾಜಕೀಯ ಕುಟುಂಬದ ಹಿನ್ನೆಲೆಯುಳ್ಳ ಕಥೆಯನ್ನು ಹೆಣೆದಿದ್ದಾರಂತೆ. ಈ ಮೂಲಕ ಸೂಪರ್‌ಸ್ಟಾರ್ ಮಹೇಶ್ ಬಾಬು ರಾಜಕೀಯ ಕುಟುಂಬದ ಸಮಸ್ಯೆಯನ್ನು ಡೀಲ್ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಈ ಸಿನಿಮಾದಲ್ಲಿ ಪ್ರಿನ್ಸ್ ಮಹೇಶ್ ಬಾಬು ರಾಜಕೀಯ ಮುಖಂಡನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆದರೆ, ತ್ರಿವಿಕ್ರಮ್ ರಾಜಕೀಯ ಪ್ರೇರಿತ ಸಿನಿಮಾ ನಿರ್ದೇಶನ ಮಾಡುತ್ತಿಲ್ಲ. ಬದಲಾಗಿ ರಾಜಕೀಯ ಹಿನ್ನೆಲೆಯುಳ್ಳ ವ್ಯಕ್ತಿಯ ವೈಯಕ್ತಿಕ ಬದುಕನ್ನು ತೆರೆಮೇಲೆ ತರಲಾಗುತ್ತೆ ಎನ್ನಲಾಗಿದೆ.

  'ಭರತ್ ಅನೆ ನೇನು' ಚಿತ್ರದಲ್ಲಿ ಸಿಎಂ

  'ಭರತ್ ಅನೆ ನೇನು' ಚಿತ್ರದಲ್ಲಿ ಸಿಎಂ

  ಕೊರಟಾಲ ಶಿವ ನಿರ್ದೇಶನ ಮಾಡಿದ್ದ 'ಭರತ್ ಅನೆ ನೇನು' ಸಿನಿಮಾ ಮಹೇಶ್ ಬಾಬು ಅಭಿಮಾನಿಗಳಿಗೆ ಕಿಕ್ ಕೊಟ್ಟಿತ್ತು. ಮಹೇಶ್ ಬಾಬು ಸಿ ಎಂ ಆಗಿ ಕಾಣಿಸಿಕೊಂಡಿದ್ದು ಇಷ್ಟ ಆಗಿತ್ತು. ಪೊಲಿಟಿಕಲ್ ಟಚ್ ಇರುವ ಸ್ಟೋರಿ ಜೊತೆ ಮಹೇಶ್ ಬಾಬು ಮುಖ್ಯಮಂತ್ರಿಯಾಗಿ ಕಂಡಿದ್ದು ಸಿನಿಪ್ರಿಯರಿಗೆ ಇಷ್ಟ ಆಗಿತ್ತು. ಈಗ ಮತ್ತೆ ಐಟಿ ಮಿನಿಸ್ಟರ್ ಆಗಿ ಮಹೇಶ್ ಬಾಬು ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.

  ಮಹೇಶ್ ಬಾಬು ರಾಜಕೀಯ ತಯಾರಿನಾ?

  ಮಹೇಶ್ ಬಾಬು ರಾಜಕೀಯ ತಯಾರಿನಾ?

  ಇನ್ನು ಮಹೇಶ್ ಬಾಬು ಮುಂದಿನ ದಿನಗಳಲ್ಲಿ ರಾಜಕೀಯಕ್ಕೆ ಬರುವ ಸಾಧ್ಯತೆಯಿದೆ ಎಂದು ಟಾಲಿವುಡ್ ಮಾತಾಡಿಕೊಳ್ಳುತ್ತಿದೆ. ಅದಕ್ಕೆ ಈಗಿನಿಂದಲೇ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ರಾಜಕೀಯ ಪ್ರೇರಿತ ಸಿನಿಮಾಗಳಲ್ಲಿ ಮಹೇಶ್ ಬಾಬು ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೊಂದು ಕಡೆ ಮಹೇಶ್ ಬಾಬು ವೈಎಸ್‌ಆರ್ ಕಾಂಗ್ರೆಸ್ ಮುಖಂಡ ಹಾಗೂ ಸಿಎಂ ಜಗನ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಈ ಕಾರಣಕ್ಕೆ ಮುಂದೆ ರಾಜಕೀಯಕ್ಕೆ ಎಂಟ್ರಿ ಕೊಟ್ಟರೂ ಅಶ್ಚರ್ಯವಿಲ್ಲ ಎಂದು ಹೇಳಲಾಗುತ್ತಿದೆ.

  English summary
  Rumour Is That Mahesh Babu Will Play IT Minister Of The State In Trivikram Movie, Know More,
  Saturday, July 16, 2022, 18:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X