For Quick Alerts
  ALLOW NOTIFICATIONS  
  For Daily Alerts

  ಗೋಲ್ಡ್ ಮಾಫಿಯಾ ಸ್ಟೋರಿ ಹೇಳಿದ್ದ 'ಕೆಜಿಎಫ್ 2': 'ಸಲಾರ್' ಕಥೆಯೇನು?

  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಡೆವೆಲಪ್‌ಮೆಂಟ್ ಆಗುತ್ತಿದೆ. ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್‌ನಲ್ಲಿ ಸಿನಿಮಾರಂಗ ಸಿಕ್ಕಾ ಪಟ್ಟೆ ಆಕ್ಟಿವ್ ಆಗಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೆಟ್ಟೇರುತ್ತಿದೆ. ಕೊರೊನಾದಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಸಿನಿಮಾ ಸ್ಪೀಡ್ ಆಗಿ ಕೆಲಸ ಮುಗಿಸುತ್ತಿವೆ. ಇಂತಹ ಸಿನಿಮಾಗಳಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು 'ಸಲಾರ್'.

  'ಕೆಜಿಎಫ್ 2' ಸಿನಿಮಾ ಬಳಿಕ ಎಲ್ಲರ ಕಣ್ಣು 'ಸಲಾರ್' ಮೇಲೆ ನಿಂತಿದೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಮೊದಲ ಕಾಂಬಿನೇಷನ್‌ ಮೇಲೆ ಎಲ್ಲಾ ಚಿತ್ರರಂಗವೂ ಕಣ್ಣಿಟ್ಟಿದೆ. ಈಗಾಗಲೇ ಸಿನಿಮಾ ಶೇ. 30 ರಿಂದ 35ರಷ್ಟು ಮುಗಿದಿದೆ ಎಂದು ಈ ಹಿಂದೆಯೇ ವಿಜಯ್ ಕಿರಗಂದೂರು ಹೇಳಿದ್ದಾರೆ.

  'ಕೆಜಿಎಫ್ 2' ಬಳಿಕ ಪ್ರಭಾಸ್‌ ಮೇಲೆ ಹೆಚ್ಚಿದ ಒತ್ತಡ: ಪ್ರಶಾಂತ್‌ ನೀಲ್‌ಗೆ ಸ್ಪೆಷಲ್ ಕಾಲ್‌ಶೀಟ್!'ಕೆಜಿಎಫ್ 2' ಬಳಿಕ ಪ್ರಭಾಸ್‌ ಮೇಲೆ ಹೆಚ್ಚಿದ ಒತ್ತಡ: ಪ್ರಶಾಂತ್‌ ನೀಲ್‌ಗೆ ಸ್ಪೆಷಲ್ ಕಾಲ್‌ಶೀಟ್!

  ಸಿನಿಮಾ ಅಂದ್ಮೇಲೆ ಗಾಸಿಪ್ ಇರಲೇಬೇಕು. ಅದರಲ್ಲೂ 'ಸಲಾರ್‌' ಅಂತಹ ಸಿನಿಮಾ ಶೂಟಿಂಗ್ ಆಗುತ್ತಿದೆ ಅಂದ್ಮೇಲೆ ದಿನಕ್ಕೊಂದು ಗಾಳಿ ಬಂದರೂ ಅಚ್ಚರಿ ಪಡಬೇಕಿಲ್ಲ. ಸದ್ಯ ಟಾಲಿವುಡ್ ಅಂಗಳದಲ್ಲಿ 'ಸಲಾರ್' ಸಿನಿಮಾ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದು 'ಸಲಾರ್' ಸಿನಿಮಾದ ಕಥೆಯ ಬಗ್ಗೆ. ಇದೂವರೆಗೂ ಈ ಸಿನಿಮಾ ಸ್ಟೋರಿ ಬಗ್ಗೆ ಒಂದಲ್ಲಾ ಒಂದು ಗಾಳಿ ಸುದ್ದಿಗಳು ಹರಿದು ಬರುತ್ತಲೇ ಇವೆ. ಈ ಬಾರಿ ಕೂಡ ಇಂತಹದ್ದೊಂದು ಸುದ್ದಿ ಬಂದಿದೆ.

  'ಸಲಾರ್' ಐರನ್ ಮಾಫಿಯಾ ಸ್ಟೋರಿ

  'ಸಲಾರ್' ಐರನ್ ಮಾಫಿಯಾ ಸ್ಟೋರಿ

  ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗುವುದಕ್ಕೆ ಹಲವು ಕಾರಣಗಳಿವೆ. ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಮೊದಲ ಕಾಂಬಿನೇಷನ್ ಅನ್ನುವುದು ಪ್ರಮುಖ ಕಾರಣ. ಇದರೊಂದಿಗೆ ಸಿನಿಮಾ ಕಥೆ ಎಲ್ಲರನ್ನೂ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಯಾಕಂದರೆ, 'ಕೆಜಿಎಫ್ 2' ಸಿನಿಮಾದಲ್ಲಿ ಪ್ರಶಾಂತ್ ನೀಲ್ ಗೋಲ್ಡ್ ಮಾಫಿಯಾ ಹಿನ್ನೆಲೆಯಲ್ಲಿ ಸಿನಿಮಾ ಮಾಡಿದ್ದರು. ಈ ಬಾರಿ 'ಐರನ್' ಮಾಫಿಯಾ ಇಟ್ಕೊಂಡು ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗಿದೆ.

  ಲೀಕ್ ಆಯ್ತು 'ಸಲಾರ್' ಸೆಟ್ಟಿನ ಫೋಟೊ: ಡಾರ್ಲಿಂಗ್ಸ್ ಖುಷ್ ಹುವಾ!ಲೀಕ್ ಆಯ್ತು 'ಸಲಾರ್' ಸೆಟ್ಟಿನ ಫೋಟೊ: ಡಾರ್ಲಿಂಗ್ಸ್ ಖುಷ್ ಹುವಾ!

  ಲೀಕ್ ಆದ ಫೋಟೊಗಳು ಹೇಳುವುದೇನು?

  ಲೀಕ್ ಆದ ಫೋಟೊಗಳು ಹೇಳುವುದೇನು?

  ಟಾಲಿವುಡ್‌ನಲ್ಲಿ 'ಸಲಾರ್' ಸ್ಟೋರಿ ಬಗ್ಗೆ ಸಿಕ್ಕಾ ಪಟ್ಟೆ ಚರ್ಚೆಯಾಗುತ್ತಿದೆ. ಪ್ರಶಾಂತ್ ನೀಲ್ 'ಕೆಜಿಎಫ್' ಸಿನಿಮಾವನ್ನು 'ಸಲಾರ್‌' ಸಿನಿಮಾಗೆ ಕನೆಕ್ಟ್ ಮಾಡುವುದಕ್ಕೆ ಹೊರಟಿದ್ದಾರೆ ಅಂತ ಗುಲ್ಲೆದ್ದಿದೆ. ಅಲ್ಲದೆ ಈಗಾಗಲೇ ಲೀಕ್ ಆಗಿರುವ ಪ್ರಭಾಸ್ ಫೋಟೊಗಳಲ್ಲಿ ಪ್ರಭಾಸ್ ಗಣಿಗಳ ಬ್ಯಾಕ್‌ ಡ್ರಾಫ್‌ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಪ್ರಭಾಸ್ ಮೆಕ್ಯಾನಿಕ್ ಪಾತ್ರದಲ್ಲಿ ನಟಿಸಿದ್ದರೂ, ಬ್ಯಾಕ್‌ಡ್ರಾಪ್ ಐರನ್ ಮಾಫಿಯಾ ಆಗಿರುತ್ತೆ ಎನ್ನುತ್ತಿದೆ ಟಾಲಿವುಡ್.

  ಹೊಂಬಾಳೆ ಫಿಲ್ಮ್ಸ್ ಪ್ಲ್ಯಾನ್ ಏನು?

  ಹೊಂಬಾಳೆ ಫಿಲ್ಮ್ಸ್ ಪ್ಲ್ಯಾನ್ ಏನು?

  'ಸಲಾರ್' ಸಿನಿಮಾ ಮೇಲೆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಈ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್ ಕೂಡ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ಮಾಡಲು ಮುಂದಾಗಿದೆ. ಒಂದ್ಕಡೆ ಭಾರತದ ನಂ 1 ಸಿನಿಮಾ 'ಬಾಹುಬಲಿ 2' ಹೀರೊ. ಇನ್ನೊಂದ್ಕಡೆ ಭಾರತದ ಎರಡನೇ ಅತೀ ದೊಡ್ಡ ಸಿನಿಮಾ 'ಕೆಜಿಎಫ್ 2' ನಿರ್ದೇಶಕ ಪ್ರಶಾಂತ್ ನೀಲ್. ಇವರಿಬ್ಬರ ಡೆಡ್ಲಿ ಕಾಂಬಿನೇಷನ್‌ಗೆ ತಕ್ಕಂತೆ ಸಿನಿಮಾ ಮಾಡುವುದೇ ದೊಡ್ಡ ಸವಾಲಾಗಿದೆ. ಹೀಗಾಗಿ ಜನರ ನಿರೀಕ್ಷೆಗಳನ್ನು ತಲುಪಲು ಇಡೀ ತಂಡ ಶತಪ್ರಯತ್ನ ನಡೆಸುತ್ತಿದೆ.

  'KGF 2', 'ಸಲಾರ್', 'NTR 31' ಈ 3 ಸಿನಿಮಾದ ಪೋಸ್ಟರ್ ಸ್ಟೈಲ್ ಒಂದೇ: 'ಬಘೀರ' ಬಿಟ್ಟಿದ್ಯಾಕೆ?'KGF 2', 'ಸಲಾರ್', 'NTR 31' ಈ 3 ಸಿನಿಮಾದ ಪೋಸ್ಟರ್ ಸ್ಟೈಲ್ ಒಂದೇ: 'ಬಘೀರ' ಬಿಟ್ಟಿದ್ಯಾಕೆ?

  'ಸಲಾರ್' ಸಿನಿಮಾದಲ್ಲಿ ಮಲಯಾಳಂ ನಟ

  'ಸಲಾರ್' ಸಿನಿಮಾದಲ್ಲಿ ಮಲಯಾಳಂ ನಟ

  'ಸಲಾರ್' ಸಿನಿಮಾದಲ್ಲಿ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ನಟಿಸುತ್ತಾರೆಂಬ ಸುದ್ದಿ ಹರಿದಾಡುತ್ತಿದೆ. ವಿಜಯ್ ಕಿರಗಂದೂರು ಈ ವಿಚಾರವಾಗಿ ಇತ್ತೀಚೆಗೆ ಮಧ್ಯಮವೊಂದಕ್ಕೆ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. "ಪೃಥ್ವಿರಾಜ್ ಸುಕುಮಾರನ್ ಜೊತೆ ಇನ್ನೂ ಮಾತುಕತೆ ನಡೆಸುತ್ತಿದ್ದೇವೆ. ಡೇಟ್ಸ್ ಎಲ್ಲಾ ಮ್ಯಾಚ್ ಆದರೆ, ನಮ್ಮ ತಂಡವನ್ನು ಸೇರಿಕೊಳ್ಳಬಹುದು" ಎಂದು ನಿರ್ಮಾಪಕರು ಪ್ರತಿಕ್ರಿಯಿಸಿದ್ದಾರೆ. ಹೀಗಾಗಿ 'ಸಲಾರ್' ಸ್ಟೋರಿ ಬಗ್ಗೆ ಕುತೂಹಲವೆದ್ದಿದ್ದು, ಐರನ್ ಮಾಫಿಯಾ ಹಿನ್ನೆಲೆ ಇದೆಯೋ ಇಲ್ಲವೋ ಎನ್ನುವುದು ಟೀಸರ್ ಅಥವಾ ಟೈಲರ್ ಬಿಡುಗಡೆಯಾದ ಬಳಿಕ ಗೊತ್ತಾಗಲಿದೆ.

  English summary
  Rumour Is That Prashanth Neel and Prabhas Movie Will Be Based On Iron Mafia, Know More.
  Wednesday, June 8, 2022, 17:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X