For Quick Alerts
  ALLOW NOTIFICATIONS  
  For Daily Alerts

  ವಿಚ್ಛೇದನದ ಬಳಿಕ 2ನೇ ಮದುವೆಗೆ ರೆಡಿ: ಹಲ್‌ಚಲ್ ಎಬ್ಬಿಸಿದ ಸಮಂತಾ ಮರು ಮದುವೆ!

  |

  ಸಮಂತಾ ಹಾಗೂ ನಾಗಚೈತನ್ಯ ವಿಚ್ಚೇದನ ಪಡೆದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿ ದಿನ ಒಂದಲ್ಲ ಒಂದು ಸುದ್ದಿ ಹಲ್‌ಚಲ್ ಎಬ್ಬಿಸುತ್ತಲೇ ಇರುತ್ತೆ. ಸಮಂತಾ ಸಿನಿಮಾ ಬಗ್ಗೆನೋ, ನಾಗಚೈತನ್ಯ ವಿರುದ್ಧ ಸಮರದ ಬಗ್ಗೆನೋ, ಏನಾದರೂ ಒಂದು ಸುದ್ದಿ ಹಬ್ಬುತ್ತಲೇ ಇರುತ್ತೆ.

  ಈಗ ಸಮಂತಾ 2ನೇ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಲೇ ಇದೆ. ವಿಚ್ಛೇದನದ ಬಳಿಕ ಸಮಂತಾ ಮತ್ತೊಂದು ಮದುವೆಗೆ ರೆಡಿಯಾಗಿದ್ದಾರೆನ್ನಲಾದ ಸುದ್ದಿಯೊಂದು ಹಲ್‌ಚಲ್ ಎಬ್ಬಿಸಿದೆ. ಅಷ್ಟಕ್ಕೂ ಸಮಂತಾ ಮದುವೆಯಾಗ್ತಿರೋ ಸುದ್ದಿ ನಿಜವೇ? ಯಾರೊಂದಿಗೆ ಹೆಸರು ತಳುಕು ಹಾಕಿಕೊಳ್ಳುತ್ತಿದೆ? ಇಂತಹದ್ದೇ ಒಂದಿಷ್ಟು ವದಂತಿಗಳು ಹಬ್ಬುತ್ತಿದೆ.

  ಇನ್ನೊಂದು ಕಡೆ ಸಮಂತಾ ಸರಣಿ ಆಫರ್‌ಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಈ ಬಗ್ಗೆನೂ ಚರ್ಚೆಯಾಗುತ್ತಿದೆ. ಸಾಲದ್ದಕ್ಕೆ ಸಮಂತಾ ಆರೋಗ್ಯ ಸರಿಯಿಲ್ಲ ಅಂತಾನೂ ವದಂತಿಗಳು ಹಬ್ಬಿವೆ. ಅಷ್ಟಕ್ಕೂ ಸಮಂತಾ ವಿಚಾರವಾಗಿ ಸೈಲೆಂಟ್‌ ಆಗಿದ್ದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈಲೆಂಟ್ ಆಗುತ್ತಿದ್ದಾರೆ.

  ಜುಬಿಲಿ ಹಿಲ್ಸ್‌ನಲ್ಲಿ ವಿಲ್ಲಾ

  ಜುಬಿಲಿ ಹಿಲ್ಸ್‌ನಲ್ಲಿ ವಿಲ್ಲಾ

  ಸಮಂತಾ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಹೊಸ ವಿಲ್ಲಾ ಖರೀದಿ ಮಾಡಿದ್ದಾರೆ. ಇಂಟೀರಿಯರ್ ನಿರ್ಮಾಣ ಸಂಸ್ಥೆಯೊಂದು ಆ ವಿಲ್ಲಾದ ಒಳ ವಿನ್ಯಾಸವನ್ನು ಮಾಡುತ್ತಿದೆ. ಇದೇ ಕಂಪನಿಯ ಮುಖ್ಯಸ್ಥ ಮುರಳಿ ಮೋಹನ್ ಎಂಬುವವರ ಬಂಗ್ಲೆ ಪಕ್ಕದಲ್ಲೇ ಸಮಂತಾ ಹೊಸ ವಿಲ್ಲಾವನ್ನು ಖರೀದಿ ಮಾಡಿದ್ದಾರೆ. ಇಲ್ಲೇ ಸಮಂತಾ ಬಾವಿ ಪತಿಯೊಂದಿಗೆ ವಾಸ ಮಾಡಲಿದ್ದಾರೆ ಅಂತ ಟಾಲಿವುಡ್‌ ಸುದ್ದಿ ಬಿತ್ತರಿಸುವ ಕೆಲವು ವೆಬ್‌ಸೈಟ್‌ಗಳು ವರದಿ ಮಾಡಿವೆ.

  ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಸಮಂತಾ ಕಾನೂನು ಸಮರ: ಅಂತಹದ್ದೇನಾಯ್ತು?

  ಎರಡನೇ ಮದುವೆಗೆ ಸಮಂತಾ ತಯಾರಿ!

  ಎರಡನೇ ಮದುವೆಗೆ ಸಮಂತಾ ತಯಾರಿ!

  ಸಮಂತಾ ಹೊಸ ಮನೆ ಖರೀದಿ ವಿಚಾರ ಹಲ್‌ಚಲ್ ಎಬ್ಬಿಸುತ್ತಿದ್ದಂತೆ. ಎರಡನೇ ಮದುವೆಗೆ ರೆಡಿಯಾಗುತ್ತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಸಮಂತಾ ಬಾಲಿವುಡ್‌ ನಟನೊಂದಿಗೆ ಎರಡನೇ ಮದುವೆ ಆಗಲಿದ್ದಾರೆ ಅನ್ನೋ ಮಾತು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಆ ಬಾಲಿವುಡ್ ನಟ ಹೈದರಾಬಾದ್‌ಗೆ ಬಂದರೆ, ಸಮಂತಾ ಖರೀದಿಸಿದ ಹೊಸ ವಿಲ್ಲಾದಲ್ಲಿಯೇ ಉಳಿದುಕೊಳ್ಳುತ್ತಾರೆ ಅನ್ನೋ ಗುಸುಗುಸು ಹಬ್ಬಿದೆ.

  ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!

  ಈ ಸುದ್ದಿ ಹಬ್ಬಿದ್ದು ಹೇಗೆ?

  ಈ ಸುದ್ದಿ ಹಬ್ಬಿದ್ದು ಹೇಗೆ?

  ಅಷ್ಟಕ್ಕೂ ಸಮಂತಾ ಬಗ್ಗೆ ಈ ಸದ್ದಿ ಹಬ್ಬಿದ್ದು ಹೇಗೆ ಅಂತಾನೂ ಕೆಲ ವೆಬ್‌ಸೈಟ್‌ಗಳು ವರದಿ ಮಾಡಿವೆ. ಬಾಲಿವುಡ್ ನಟ ಸಮಂತಾ ವಿಲ್ಲಾದಲ್ಲಿ ಕೆಲವು ದಿನಗಳಿಂದ ಉಳಿದು ಕೊಂಡಿದ್ದು, ಯುವ ನಿರ್ದೇಶಕನೊಬ್ಬನ ಕಣ್ಣಿಗೆ ಬಿದ್ದಿದೆ. ಈ ವಿಷಯವನ್ನು ಆತನೇ ಎಲ್ಲರಿಗೂ ಹಬ್ಬಿಸಿದ್ದಾನೆ ಎಂದು ವರದಿಯಾಗಿದೆ. ಸಮಂತಾ ಹಿಂದಿ ವೆಬ್ ಸೀರಿಸ್ ಮಾಡುವಾಗ ಆ ಬಾಲಿವುಡ್ ನಟನಿಗೆ ತೀರಾ ಹತ್ತಿರವಾಗಿದ್ದರು ಅಂತಾನೂ ಹೇಳಲಾಗುತ್ತಿದೆ.

  ಕೇಸ್ ಹಾಕಲು ನಿರ್ಧಾರ

  ಕೇಸ್ ಹಾಕಲು ನಿರ್ಧಾರ

  ನಾಗ ಚೈತನ್ಯರಿಂದ ಸಮಂತಾ ಬೇರೆಯಾದ ದಿನದಿಂದ ಈ ನಟಿಯ ಬಗ್ಗೆ ಗಾಳಿ ಸುದ್ದಿಗಳನ್ನು ಹಬ್ಬಿಸುತ್ತಲೇ ಇದ್ದಾರೆ. ಈ ಕಾರಣಕ್ಕೆ ಸಮಂತಾ ಬೇಸತ್ತು ಹೋಗಿದ್ದಾರೆ ಎನ್ನಲಾಗಿದೆ. ಹಾಗಾಗಿ ಸಮಂತಾ ತನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡುವ ಯೂಟ್ಯೂಬ್ ಚಾನೆಲ್ ಹಾಗೂ ವೆಬ್‌ಸೈಟ್‌ಗಳ ವಿರುದ್ಧ ದೂರು ದಾಖಲಿಸಲು ನಿರ್ಧಾರಿದ್ದಾರೆಂದೂ ವರದಿಯಾಗಿತ್ತು. ಆದರೂ, ಸಮಂತಾ ಬಗ್ಗೆ ರೂಮರ್‌ಗಳು ಹರಿದಾಡುತ್ತಲೇ ಇವೆ.

  "ಹೊಸ ಕಥೆ.. ಹೊಸ ಅಧ್ಯಾಯ ಆರಂಭಿಸೋಣ": ಸಮಂತಾ ತಂದೆ ಹಾಕಿದ ಪೋಸ್ಟ್ ಹಿನ್ನೆಲೆಯೇನು?

  English summary
  Rumour Is That Samantha Is Ready For Her Second Marriage With Bollywood Actor.
  Friday, September 9, 2022, 9:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X