Jr.NTRಗೆ ನಿರ್ದೇಶನ ಮಾಡಲು ಇಷ್ಟೊಂದು ಸಂಭಾವನೆ ಪಡೆಯುತ್ತಿದ್ದಾರಾ ಪ್ರಶಾಂತ್ ನೀಲ್?
ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಕೆಜಿಎಫ್-2ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಈಗ ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಭಾರತೀಯ ಚಿತ್ರರಂಗದ ಟ್ರೆಂಡಿಂಗ್ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಪ್ರಶಾಂತ್ ಜೊತೆ ಕೆಲಸ ಮಾಡಲು ಸ್ಟಾರ್ ಕಲಾವಿದರು ತುದಿಗಾಲಿನಲ್ಲಿ ನಿಂತಿದ್ದಾರೆ.
Recommended Video
ಸದ್ಯ ಪ್ರಶಾಂತ್ ಜೊತೆ ಕೆಲಸ ಮಾಡುವ ಅವಕಾಶ ಜೂ.ಎನ್ ಟಿ ಆರ್ ಗೆ ಸಿಕ್ಕಿದೆ. ಇಬ್ಬರ ಕಾಂಬಿನೇಷನ್ ಸಿನಿಮಾ ನೋಡಲು ಅಭಿಮಾನಿಗಳು ಈಗಾಗಲೆ ಕುತೂಹಲದಿಂದ ಕಾಯುತ್ತಿದ್ದಾರೆ. ಇಬ್ಬರ ಸಿನಿಮ ಫೈನಲ್ ಆಗುತ್ತಿದ್ದಂತೆ ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲಕಾರಿ ಸುದ್ದಿಗಳು ಹರಿದಾಡುತ್ತಿವೆ. ಸದ್ಯ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ನಿರ್ದೇಶಕ ಪ್ರಶಾಂತ್ ನೀಲ್, ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳಲು ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಮುಂದೆ ಓದಿ...

ಜೂ.ಎನ್ ಆರ್ ಟಿ ಆರ್ ಗೆ ಪ್ರಶಾಂತ್ ನೀಲ್ ಆಕ್ಷನ್ ಕಟ್
ಕೆಜಿಎಪ್-2 ನಂತರ ಪ್ರಶಾಂತ್ ನೀಲ್ ಯಾರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಆದರೀಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಪ್ರಶಾಂತ್ ನೀಲ್, ತೆಲುಗಿನ ಖ್ಯಾತ ನಟ ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳುವುದು ಖಚಿತವಾಗಿದೆ. ಜೂ.ಎನ್ ಟಿ ಆರ್ ಗೆ ಪ್ರಶಾಂತ್ ನೀಲ್ ಹುಟ್ಟುಹಬ್ಬದ ಶುಭಾಶಯ ಹೇಳುವ ಮೂಲಕ ಸಿನಿಮಾ ವಿಚಾರ ಬಹಿರಂಗ ಪಡಿಸಿದ್ದಾರೆ.

ಈಗಾಗಲೆ ಅಡ್ವಾನ್ಸ್ ಪಡೆದಿದ್ದಾರೆ ಪ್ರಶಾಂತ್ ನೀಲ್?
ಪ್ರಶಾಂತ್ ನೀಲ್ ಜೂ.ಎನ್ ಟಿ ಆರ್ ಗೆ ಆಕ್ಷನ್ ಕಟ್ ಹೇಳಲು ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಪ್ರಶಾಂತ್ ನೀಲ್ ಈಗಾಗಲೆ 2 ಕೋಟಿ ಅಡ್ವಾನ್ಸ್ ಪಡೆದಿದ್ದಾರಂತೆ.

5 ಕೋಟಿ ಸಂಭಾವನೆ
ಮೊದಲ ಬಾರಿಗೆ ತೆಲುಗಿನಲ್ಲಿ ಆಕ್ಷನ್ ಕಟ್ ಹೇಳುತ್ತಿರುವ ಪ್ರಶಾಂತ್ ನೀಲ್ ಗೆ 5 ಕೋಟಿ ಸಂಭಾವನೆ ನೀಡಲಾಗುತ್ತಿದೆಯಂತೆ. ದೊಡ್ಡ ಮೊತ್ತದ ಸಂಭಾವನೆ ಪಡೆದ ಮೊದಲ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಮೈತ್ರಿ ಮೂವೀಸ್ ಬಂಡವಾಳ ಹೂಡುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ.

Jr.NTRಗೆ ಪ್ರಶಾಂತ್ ನೀಲ್ ವಿಶ್ ಮಾಡಿದ್ದು ಹೀಗೆ
Jr.NTR ಹುಟ್ಟುಹಬ್ಬಕ್ಕೆ ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಶುಭಾಶಯ ತಿಳಿಸಿದ್ದಾರೆ. ಸಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿರುವ ಪ್ರಶಾಂತ್ "ಕಡೆಗೂ ನ್ಯೂಕ್ಲಿಯರ್ ಪ್ಲಾಂಟ್ ಪಕ್ಕದ್ದಲ್ಲಿ ಕುಳಿತರೆ ಹೇಗಾಗುತ್ತೆ ಎಂಬುದು ನನಗೆ ಗೊತ್ತಾಯಿತು. ಅಂತ ಕ್ರೇಜಿ ಎನರ್ಜಿಯ ಸುತ್ತ ಇರಲು, ಮುಂದಿನ ಬಾರಿ ನಾನು ನನ್ನ ರೇಡಿಯೇಶನ್ ಸೂಟ್ ತರುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ಸಹೋದರ ತಾರಕ್" ಎಂದು ವಿಶ್ ಮಾಡಿದ್ದಾರೆ.


Click it and Unblock the Notifications











