ರಾಜಾಜಿನಗರ ಕ್ಷೇತ್ರದಲ್ಲಿ ಜೆ.ಡಿ.ಎಸ್ ನಿಂದ ಸಾ.ರಾ.ಗೋವಿಂದು ಸ್ಪರ್ಧೆ?
Recommended Video

ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವುದರಿಂದ, ರಾಜಕೀಯಕ್ಕೆ ಧುಮುಕಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಮನಸ್ಸು ಮಾಡಿದ್ದಾರೆ.
ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೂಡ ಆಗಿರುವ ಸಾ.ರಾ.ಗೋವಿಂದು ಕನ್ನಡ ಪರ ಹೋರಾಟಗಾರ ಕೂಡ ಹೌದು. ಬೆಂಗಳೂರಿನ ರಾಜಾಜಿನಗರದಲ್ಲಿ ಕನ್ನಡ ಪರ ಸಂಘಟನೆಗಳು ಹೆಚ್ಚು ಇರುವ ಕಾರಣ, ಅದೇ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಸಾ.ರಾ.ಗೋವಿಂದು ನಿರ್ಧರಿಸಿದ್ದಾರೆ.

ರಾಜಾಜಿನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಜೆ.ಡಿ.ಎಸ್ ವರಿಷ್ಠರಿಗೆ ಸಾ.ರಾ.ಗೋವಿಂದು ಮನವಿ ಮಾಡಿದ್ದಾರಂತೆ.
ರಾಜಾಜಿನಗರ ಕ್ಷೇತ್ರದಲ್ಲಿ ಬಿ.ಜೆ.ಪಿಯಿಂದ ಹಾಲಿ ಶಾಸಕ ಸುರೇಶ್ ಕುಮಾರ್ ಕಣದಲ್ಲಿದ್ದಾರೆ. ಕಾಂಗ್ರೆಸ್ ನಿಂದ ಅಭ್ಯರ್ಥಿ ಅಂತಿಮವಾಗಿಲ್ಲ. ಸಾ.ರಾ.ಗೋವಿಂದು ಅವರಿಗೆ ರಾಜಾಜಿನಗರದಲ್ಲಿ ಕೆಲ ಸಂಘಟನೆಗಳ ನಂಟು ಇರುವುದರಿಂದ, ಟಿಕೆಟ್ ನೀಡಲು ಜೆ.ಡಿ.ಎಸ್ ವರಿಷ್ಟರು ಸಮ್ಮತಿ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ, ಅಧಿಕೃತ ಘೋಷಣೆ ಇನ್ನೂ ಆಗಿಲ್ಲ.


Click it and Unblock the Notifications











