For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್‌ಗೆ ಹಾರಲಿದ್ದಾರೆ ನಟಿ ಸಾಯಿ ಪಲ್ಲವಿ, ಹೀರೊ ಯಾರು?

  |

  ತಮ್ಮ ಅದ್ಭುತ ನಟನೆ, ನೃತ್ಯ ಶೈಲಿಯಿಂದ ದಕ್ಷಿಣ ಭಾರತ ಸಿನಿಪ್ರೇಮಿಗಳ ಮನಸ್ಸು ಗೆದ್ದಿರುವ ನಟಿ ಸಾಯಿ ಪಲ್ಲವಿ ಇದೀಗ ಬಾಲಿವುಡ್‌ಗೆ ಪಯಣ ಬೆಳೆಸಿದ್ದಾರೆ.

  ಮಲಯಾಳಂ ಸಿನಿಮಾ 'ಪ್ರೇಮಂ'ದಿಂದ ನಾಯಕಿಯಾಗಿ ಪರಿಚಯಿಸಲ್ಪಟ್ಟ ಈ ತಮಿಳು ಸುಂದರಿ ಆ ನಂತರ ಹಿಂತುರಿಗಿ ನೋಡಿದ್ದೇ ಇಲ್ಲ. ಸವಾಲೆನಿಸುವ ಪಾತ್ರಗಳನ್ನು ಆರಿಸಿಕೊಂಡು ಅದ್ಭುತ ಪ್ರದರ್ಶನ ನೀಡಿ ಗೆದ್ದಿದ್ದಾರೆ ಸಾಯಿ ಪಲ್ಲವಿ.

  ತೆಲುಗು, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ಸಾಕಷ್ಟು ಅವಕಾಶಗಳು ಇದ್ದರೂ ಸಹ ಮಧ್ಯದಲ್ಲಿಯೇ ಬಾಲಿವುಡ್‌ಗೆ ಹಾರಿದ್ದಾರೆ ಸಾಯಿ ಪಲ್ಲವಿ. ತೆಲುಗಿನ ಹಿಟ್ ಸಿನಿಮಾ ಒಂದು ಹಿಂದಿಗೆ ರೀಮೇಕ್ ಆಗುತ್ತಿದ್ದು ಆ ಸಿನಿಮಾಕ್ಕೆ ಸಾಯಿ ಪಲ್ಲವಿ ನಾಯಕಿ.

  ಹಿಂದಿಗೆ ರೀಮೇಕ್ ಆಗುತ್ತಿರುವ ತೆಲುಗಿನ 'ಛತ್ರಪತಿ'

  ಹಿಂದಿಗೆ ರೀಮೇಕ್ ಆಗುತ್ತಿರುವ ತೆಲುಗಿನ 'ಛತ್ರಪತಿ'

  2005ರಲ್ಲಿ ತೆಲುಗಿನಲ್ಲಿ ಬಿಡುಗಡೆ ಆಗಿದ್ದ ಸಿನಿಮಾ 'ಛತ್ರಪತಿ'ಯನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದ್ದು ಈ ಸಿನಿಮಾವನ್ನು ತೆಲುಗಿನ ಮಾಸ್ ಸಿನಿಮಾ ನಿರ್ದೇಶಕ ವಿವಿ ವಿನಾಯಕ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

  ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಾಯಕ

  ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಾಯಕ

  'ಛತ್ರಪತಿ' ಸಿನಿಮಾದ ಹಿಂದಿ ರೀಮೇಕ್‌ಗೆ ಇನ್ನೂ ಹೆಸರಿಡಲಾಗಿಲ್ಲ. ತೆಲುಗಿನಲ್ಲಿ ಪ್ರಭಾಸ್ ನಟಿಸಿದ್ದ ನಾಯಕ ಪಾತ್ರದಲ್ಲಿ ಹಿಂದಿಯಲ್ಲಿ ತೆಲುಗಿನ ನಟರೇ ಆದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಟಿಸಲಿದ್ದಾರೆ. ತೆಲುಗಿನಲ್ಲಿ ಶ್ರೆಯಾ ಶಿರಿನ್ ನಟಿಸಿದ್ದ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ.

  ಮಗನಿಗೆ ಅದ್ಧೂರಿ ಬಾಲಿವುಡ್ ಲಾಂಚ್

  ಮಗನಿಗೆ ಅದ್ಧೂರಿ ಬಾಲಿವುಡ್ ಲಾಂಚ್

  ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್‌ಗೆ ಇದು ಬಾಲಿವುಡ್‌ನಲ್ಲಿ ಮೊದಲ ಸಿನಿಮಾ. ತೆಲುಗಿನಲ್ಲಿ ಈಗಾಗಲೇ ಎಂಟು ಸಿನಿಮಾಗಳಲ್ಲಿ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ನಟಿಸಿದ್ದಾರೆ. ಬಾಲಿವುಡ್‌ನಲ್ಲಿ ಮಗನನ್ನು ಅದ್ಧೂರಿಯಾಗಿ ಲಾಂಚ್ ಮಾಡಬೇಕು ಎಂಬುವ ಉದ್ದೇಶದಿಂದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ತಂದೆ ಖ್ಯಾತ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್ 'ಛತ್ರಪತಿ'ಯನ್ನು ಹಿಂದಿಗೆ ರೀಮೇಕ್ ಮಾಡುತ್ತಿದ್ದಾರೆ.

  ಎರಡು ಸಿನಿಮಾ ಬಿಡುಗಡೆಗೆ ತಯಾರಿದೆ

  ಎರಡು ಸಿನಿಮಾ ಬಿಡುಗಡೆಗೆ ತಯಾರಿದೆ

  ನಟಿ ಸಾಯಿ ಪಲ್ಲವಿ ವಿಷಯಕ್ಕೆ ಮರಳುವುದಾದರೆ. ನಾಗಚೈತನ್ಯ ಜೊತೆಯಾಗಿ ಸಾಯಿ ಪಲ್ಲವಿ ನಟಿಸಿರುವ ಸಿನಿಮಾ 'ಲವ್‌ ಸ್ಟೊರಿ' ಈಗಾಗಲೇ ಬಿಡುಗಡೆ ಆಗಬೇಕಿತ್ತು ಆದರೆ ಲಾಕ್‌ಡೌನ್ ಕಾರಣದಿಂದ ಬಿಡುಗಡೆ ಮುಂದೂಡಲ್ಪಟ್ಟಿದೆ. ರಾಣಾ ದಗ್ಗುಬಾಟಿ ಜೊತೆಗೆ ನಟಿಸಿರುವ 'ವಿರಾಟ-ಪರ್ವಂ' ಸಿನಿಮಾ ಸಹ ಬಿಡುಗಡೆಗೆ ತಯಾರಿದೆ. ಈ ನಡುವೆ ನಾನಿ ಜೊತೆಗೆ 'ಶ್ಯಾಮ ಸಿಂಘ ರಾಯ್' ಸಿನಿಮಾದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದು ಚಿತ್ರೀಕರಣ ಚಾಲ್ತಿಯಲ್ಲಿದೆ.

  English summary
  Sai Pallavi acting in a Hindi movie which is remake of a hit Telugu movie. VV Vinayak will direct the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X