ಸದ್ಯದಲ್ಲೇ 'ಸಾಯಿ ಪಲ್ಲವಿ' ಮದುವೆ, ವರನ್ಯಾರು ಗೊತ್ತಾ?
ಸಾಯಿ ಪಲ್ಲವಿ ಸೌತ್ ಚಿತ್ರರಂಗದಲ್ಲಿ ಬೇಡಿಕೆ ಇರುವ ನಟಿ. ಮಲಯಾಳಂ ಚಿತ್ರದಿಂದ ಸಿನಿಮಾ ಜರ್ನಿ ಶುರು ಮಾಡಿದ ನಟಿ ಸಾಯಿ ಪಲ್ಲವಿ ನಂತರ ತಮಿಳು, ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಾಯಿ ಪಲ್ಲವಿಗೆ ತಮ್ಮದೆ ಆದ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಇತ್ತೀಚೆಗೆ ಸಾಯಿ ಪಲ್ಲವಿ ಅಷ್ಟಾಗಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ.
ಸಾಯಿ ಪಲ್ಲವಿ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರುವುದಕ್ಕೆ ಕಾರಣ ಏನು ಎನ್ನುವುದು ಈಗ ರಿವೀಲ್ ಆಗಿದೆ. ಸಾಯಿ ಪಲ್ಲವಿ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ. ಈ ಕಾರಣಕ್ಕೆ ಸಾಯಿ ಪಲ್ಲವಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ.
ಅದು ಮತ್ತೇನು ಅಲ್ಲಾ. ನಟಿ ಸಾಯಿ ಪಲ್ಲವಿ ಮದುವೆ ಬಗ್ಗೆ ಗುಸು, ಗುಸು ಹಬ್ಬಿದೆ. ಸಾಯಿ ಪಲ್ಲವಿ ಮದುವೆ ತಯಾರಿಯನ್ನು ನಡೆಸಿದ್ದಾರಂತೆ. ಮದುವೆ ಮಾಡಿಕೊಳ್ಳಲು ನಟಿ ಸಾಯಿ ಪಲ್ಲವಿ ಈಗ ಸಜ್ಜಾಗಿದ್ದು, ಸಿನಿಮಾಗಳಲ್ಲಿ ನಟಿಸುವುದು ಅನುಮಾನವೇ ಎಂಬಂತಾಗಿದೆ.

ಸಾಯಿ ಪಲ್ಲವಿಗೆ ಗಂಡು ಹುಡುಕುತ್ತಿದ್ದಾರೆ
ನಟಿ ಸಾಯಿ ಪಲ್ಲವಿಗೆ ಮನೆಯಲ್ಲಿ ಗಂಡು ಹುಡುಕುತ್ತಿದ್ದಾರಂತೆ. ಮದುವೆಯಾಗಲು ಸಾಯಿ ಪಲ್ಲವಿ ನಿರ್ಧರಿಸಿದ್ದಾರಂತೆ. ಹಾಗಂತ ಈ ಬ್ಯೂಟಿ ಯಾರನ್ನೋ ಲವ್ ಮಾಡಿಲ್ಲ. ಈಕೆಯದ್ದು ಪಕ್ಕಾ ಅರೇಂಜ್ ಮ್ಯಾರೇಜ್. ಹಾಗಾಗಿ ಮನೆಯವರೇ ಸಾಯಿ ಪಲ್ಲವಿಗೆ ತಕ್ಕ ವರನನ್ನು ಹುಡುಕುತ್ತಾ ಇದ್ದಾರೆ ಎನ್ನುವ ಸುದ್ದಿ ಹಬ್ಬಿದೆ. ಈ ಚೆಲುವೆಯ ಕೈ ಹಿಡಿಯುವ ಅದೃಷ್ಟವಂತ ಯಾರು ಎನ್ನುವ ಕುತೂಹಲ ಸದ್ಯ ಮೂಡಿದೆ.

ಮದುವೆ ಆಗಲ್ಲ ಎಂದಿದ್ದ ಸಾಯಿ ಪಲ್ಲವಿ!
ನಟಿ ಸಾಯಿ ಪಲ್ಲವಿ ಈ ಹಿಂದೆ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಆಗ ಮದುವೆಯ ಬಗ್ಗೆ ಸಾಯಿ ಪಲ್ಲವಿ ತಿರಸ್ಕಾರದ ಮಾತುಗಳನ್ನು ಆಡಿದ್ದರು. "ನಾನು ಮದುವೆ ಆಗುವುದಿಲ್ಲ. ಮದುವೆ ಆಗಿ ಪೋಷಕರನ್ನು ಬಿಟ್ಟು ಗಂಡನ ಜೊತೆ ಇರಲು ನಾನು ಸಿದ್ಧವಿಲ್ಲ. ನನ್ನ ಪೋಷಕರ ಜೊತೆಗೆ ನಾನು ಇರಬೇಕು." ಎಂದಿದ್ದರು. ಎನ್‌ಜಿಕೆ ಚಿತ್ರದ ರಿಲೀಸ್ ಸಮಯದಲ್ಲಿ ಸಾಯಿ ಪಲ್ಲವಿ ಹೀಗಂದಿದ್ದರು.

ಸಿನಿಮಾಗಳನ್ನು ಒಪ್ಪಿಕೊಳ್ಳದ ಸಾಯಿ ಪಲ್ಲವಿ!
ಇನ್ನು ಇತ್ತೀಚೆಗೆ ನಟಿ ಸಾಯಿ ಪಲ್ಲವಿ ಸಿನಿಮಾರಂಗವನ್ನು ತೊರೆದಿದ್ದಾರೆ ಎನ್ನುವ ಸುದ್ದಿಗಳು ಹಬ್ಬಿದ್ದವು. ಇದಕ್ಕೆ ಕಾರಣ ಸಾಯಿ ಪಲ್ಲವಿ ಯಾವುದೇ ಚಿತ್ರಗಳನ್ನು ಒಪ್ಪಿಕೊಳ್ಳದೇ ಇರುವುದು. ನಟಿ ಸಾಯಿ ಪಲ್ಲವಿ ಹೇಳಿ, ಕೇಳಿ ಬೇಡಿಕೆ ಇರುವ ನಟಿ. ಹಾಗಾಗಿ ಆಕೆಗೆ ಈ ಚಿತ್ರದ ಬಳಿಕ ಒಂದಷ್ಟು ಚಿತ್ರಗಳ ಆಫರ್ ಬಂದಿವೆಯಂತೆ. ಆದರೆ ಸಾಯಿ ಪಲ್ಲವಿ ಮಾತ್ರ ಸಿನಿಮಾಗಳಿಗೆ ಸಹಿ ಹಾಕದೆ. ಆ ಚಿತ್ರಗಳನ್ನು ತಿರಸ್ಕರಿಸಿದ್ದಾರಂತೆ ಎನ್ನಲಾಗಿದೆ.

'ಶ್ಯಾಮ್ ಸಿಂಗ ರಾಯ್' ಸಾಯಿ ಪಲ್ಲವಿ ಕೊನೆ ಚಿತ್ರ!
ಕೊನೆಯದಾಗಿ ಸಾಯಿ ಪಲ್ಲವಿ ನಟಿಸಿರುವ ಸಿನಿಮಾ ತೆಲುಗಿನ 'ಶ್ಯಾಮ್ ಸಿಂಗ ರಾಯ್'. ಈ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿಯ ಪಾತ್ರವನ್ನು ಸಿನಿಮಾ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. 'ಶ್ಯಾಮ್ ಸಿಂಗ ರಾಯ್' ಸಿನಿಮಾ ಹಿಟ್ ಆದ ಬಳಿಕವೂ ಸಾಯಿ ಪಲ್ಲವಿಯ ಯಾವ ಹೊಸ ಚಿತ್ರವೂ ಕೂಡ ಪ್ರಕಟ ಆಗಿಲ್ಲ. ಹಾಗಾಗಿ ಸಾಯಿ ಪಲ್ಲವಿ ಆದಷ್ಟು ಬೇಗ ತಮ್ಮ ಮದುವೆ ಸುದ್ದಿಯನ್ನು ಕೊಡಲಿದ್ದಾರೆ ಎನ್ನಲಾಗುತ್ತಿದೆ.


Click it and Unblock the Notifications










