For Quick Alerts
  ALLOW NOTIFICATIONS  
  For Daily Alerts

  ಸ್ಯಾಂಡಲ್ ವುಡ್ ಗೆ ಬಂದರು 'ಪ್ರೇಮಂ' ಬೆಡಗಿ 'ಸಾಯಿಪಲ್ಲವಿ'.?

  By Pavithra
  |
  ಸಾಯಿ ಪಲ್ಲವಿ ಅಲಿಯಾಸ್ ಮಲರ್ ಕನ್ನಡ ಸಿನಿಮಾದಲ್ಲಿ | Filmibeat Kannada

  ಸಿನಿಮಾರಂಗದಲ್ಲಿ 'ಮಲರ್' ಅಂತಾನೇ ಫೇಮಸ್ ಆಗಿರುವ 'ಸಾಯಿಪಲ್ಲವಿ' ಕನ್ನಡ ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುದಿಲ್ಲವೇ..? 'ಪ್ರೇಮಂ' ಬೆಡಗಿಯನ್ನ ಸ್ಯಾಂಡಲ್ ವುಡ್ ಗೆ ಕರೆತರೋದಿಲ್ಲವೇ.? ಅನ್ನೋದು ಅದೆಷ್ಟೋ ಹುಡುಗರ ಪ್ರಶ್ನೆ ಆಗಿತ್ತು. ಸದ್ಯ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.

  'ಸಾಯಿಪಲ್ಲವಿ'ಯನ್ನ ಸ್ಯಾಂಡಲ್ ವುಡ್ ಸಿನಿಮಾಗಾಗಿ ಕರೆತರಲು ಸಿನಿಮಾ ತಂಡವೊಂದು ಸಜ್ಜಾಗಿದೆ. ಚಿತ್ರತಂಡ 'ಪ್ರಜ್ವಲ್ ದೇವರಾಜ್' ಜೊತೆಯಲ್ಲಿ 'ಪ್ರೇಮಂ' ಬೆಡಗಿಯನ್ನ ಜೋಡಿ ಮಾಡಲು ಸಿದ್ದತೆ ನಡೆಸಿದೆ. ಹಾಗಾದ್ರೆ ಆ ಸಿನಿಮಾ ತಂಡ ಯಾವುದು.? ಮಲರ್ ದರ್ಶನ ಯಾವಾಗ ಆಗುತ್ತೆ ಅಂತೀರಾ, ಮುಂದೆ ಓದಿ...

  'ಸಾಯಿಪಲ್ಲವಿ' ಕರೆತರಲಿರುವ ಸಿನಿಮಾತಂಡ

  'ಸಾಯಿಪಲ್ಲವಿ' ಕರೆತರಲಿರುವ ಸಿನಿಮಾತಂಡ

  ಸೆಟ್ಟೇರಲು ಸಜ್ಜಾಗಿರುವ ಚಿತ್ರತಂಡ ಸಾಯಿಪಲ್ಲವಿಯವರನ್ನ ತಮ್ಮ ಸಿನಿಮಾಗೆ ನಾಯಕಿಯಾಗಿ ಆಯ್ಕೆ ಮಾಡಲು ಸಿದ್ದತೆ ನಡೆಸಿದೆ. ಸದ್ಯ ಡೇಟ್ಸ್ ಗಾಗಿ ಮಾತುಕತೆ ನಡೆಸಲು ಮುಂದಾಗಿದ್ದು, ನಟ ಪ್ರಜ್ವಲ್ ಅಭಿನಯದ ಮುಂದಿನ ಸಿನಿಮಾಗೆ ಸಾಯಿಪಲ್ಲವಿಯರನ್ನ ಕರೆತರುವ ಸಾಧ್ಯತೆಗಳು ಹೆಚ್ಚಾಗಿದೆ.

  'ಪುಷ್ಪಕವಿಮಾನ' ಟೀಂ ಜೊತೆ ಸಿನಿಮಾ

  'ಪುಷ್ಪಕವಿಮಾನ' ಟೀಂ ಜೊತೆ ಸಿನಿಮಾ

  ಈ ಹಿಂದೆ 'ಪುಷ್ಪಕ ವಿಮಾನ' ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ 'ವಿಖ್ಯಾತ್' ಸದ್ಯ ಪ್ರಜ್ವಲ್ ಅಭಿನಯದ ಹೊಸ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೂ ಟೈಟಲ್ ಇಡದ ಈ ಸಿನಿಮಾಗಾಗಿ ಸಾಯಿಪಲ್ಲವಿಯವರನ್ನ ಕರೆ ತರಲು ಪ್ರಯತ್ನ ನಡೆಯುತ್ತಿದೆ.

  'ಮಲರ್' ಬರುವ ಸಾಧ್ಯತೆ ಹೆಚ್ಚಾಗಿದೆ

  'ಮಲರ್' ಬರುವ ಸಾಧ್ಯತೆ ಹೆಚ್ಚಾಗಿದೆ

  ಈ ಹಿಂದೆ 'ರಮೇಶ್ ಅರವಿಂದ್' ಅಭಿನಯದ 'ಪುಷ್ಪಕ ವಿಮಾನ' ಸಿನಿಮಾದ ಹಾಡೊಂದಕ್ಕೆ ನಟಿ ಜೂಹಿ ಚಾವ್ಲಾರನ್ನ ನಿರ್ಮಾಪಕ ವಿಖ್ಯಾತ್ ಕರೆತಂದಿದ್ರು. ಈಗ ಅದೇ ನಿರ್ಮಾಪಕರು ಪ್ರಜ್ವಲ್ ಜೊತೆ ನಾಯಕಿಯಾಗಿ ಸಾಯಿಪಲ್ಲವಿಯರನ್ನ ಆಯ್ಕೆ ಮಾಡಿದ್ದಾರೆ.

  ಸೆಟ್ಟೇರಲು ಸಿದ್ದವಾಯ್ತು ಸಿನಿಮಾ

  ಸೆಟ್ಟೇರಲು ಸಿದ್ದವಾಯ್ತು ಸಿನಿಮಾ

  ಪ್ರಜ್ವಲ್ ಸಿನಿಮಾದಲ್ಲಿ ಫನ್ ಕಾಪ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪವನ್ ಒಡೆಯರ್ ಜೊತೆಯಲ್ಲಿ ಕೆಲಸ ಮಾಡಿದ್ದ ಶ್ರೀ ನರಸಿಂಹ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು ಇನ್ನ ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ.

  English summary
  Sai Pallavi to make Sandalwood Debut. ಪುಷ್ಪಕವಿಮಾನ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಎ ಆರ್ ವಿಖ್ಯಾತ್ ತಮ್ಮ ಮುಂದಿನ ಚಿತ್ರಕ್ಕೆ ಸಾಯಿಪಲ್ಲವಿ ಡೇಟ್ಸ್ ಗಾಗಿ ಪ್ರಯತ್ನಿಸುತ್ತಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X