ಮೊದಲ ಬಾರಿ ಪ್ರಭಾಸ್‌ ಸಿನಿಮಾದಲ್ಲಿ ಸಾಯಿಪಲ್ಲವಿ? 'ಕಲ್ಕಿ'ಯಲ್ಲಿ ದೀಪಿಕಾ ಬದಲು ಸರಳ ಸುಂದರಿ?

ಕೇವಲ ದಕ್ಷಿಣದಲ್ಲಿ ಮಾತ್ರವಲ್ಲ ಉತ್ತರದಲ್ಲಿ ಕೂಡ ತಮ್ಮ ಚಾಪು ಮೂಡಿಸುವಲ್ಲಿ ಯಶಸ್ವಿಯಾದವರು ಪ್ರಭಾಸ್. ಸೌತ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಪ್ರಸಿದ್ಧಿಯನ್ನು ಪಡೆದು ದೇಶವ್ಯಾಪಿ ಅಸಂಖ್ಯಾತ ಅಗಣಿತ ಅಭಿಮಾನಿಗಳನ್ನು ಸಂಪಾದಿಸಿದ ಪ್ರಭಾಸ್ ತಾವು ಬಾಕ್ಸಾಫೀಸ್ ಕಿಂಗ್ ಕೂಡ ಹೌದು ಎನ್ನುವುದನ್ನು ಮೇಲಿಂದ ಮೇಲೆ ರುಜುವಾತು ಮಾಡುತ್ತಾನೇ ಬಂದವರು. ಹಲವು ದಾಖಲೆಗಳನ್ನು ಕೂಡ ಸೃಷ್ಟಿಸಿದವರು.

ಇನ್ನೂ ಬಾಹುಬಲಿ ನಂತರ ಪ್ರಭಾಸ್ ಕೇವಲ ಸೌಥ್ ಸ್ಟಾರ್ ಮಾತ್ರವಲ್ಲ ಬದಲಿಗೆ ನ್ಯಾಷನಲ್ ಸ್ಟಾರ್ ಆಗಿ ಹೊರ ಹೊಮ್ಮಿದ್ದಾರೆ. ಕನ್ನಡದ ಸ್ಟಾರ್‌ಗಳಂತೆಯೇ ಸಿನಿಮಾ ಮಾಡಿದರೆ ಅದು ಕೇವಲ ಪ್ಯಾನ್ ಇಂಡಿಯಾಗೆ ಮಾತ್ರ ಎಂದುಕೊಂಡು ಚಿತ್ರಗಳನ್ನು ಒಪ್ಪಿಕೊಳ್ತಿದ್ದಾರೆ.

sai-pallavi-to-replace-deepika-padukone-the-epic-shift-in-nag-ashwin-s-sci-fi-universe-revealed

ಆದರೆ ದುರಾದೃಷ್ಟ. ಪ್ರಭಾಸ್ ಸಿನಿಮಾಗಳನ್ನೇನೋ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ ಪ್ರೇಕ್ಷಕರು ಮಾತ್ರ ಇವರನ್ನು ಅಪ್ಪಿಕೊಳ್ಳುತ್ತಿಲ್ಲ. ಅಭಿಮಾನಿಗಳು ಕೂಡ ಕೈ ಹಿಡಿಯುತ್ತಿಲ್ಲ. ಬದಲಿಗೆ ಎಲ್ಲರೂ ಸೇರಿ ಸೋಲಿನ ದರ್ಶನ ಮಾಡಿಸುತ್ತಿದ್ದಾರೆ. ಸೋಲಿನ ಕಮರಿಗೆ ಬಿದ್ದು ಪ್ರಭಾಸ್ ಒದ್ದಾಡುತ್ತಿದ್ದಾರೆ.

ಇಂಥಾ ಪ್ರಭಾಸ್ ಎದುರು ಸದ್ಯ ''ಸ್ಪಿರಿಟ್''.. ''ಕಲ್ಕಿ 2'' ಮತ್ತು ''ಫೌಜಿ'' ಚಿತ್ರಗಳಿವೆ. ''ಸಲಾರ್ 2'' ಕೂಡ ಸರತಿ ಸಾಲಿನಲ್ಲಿದೆ. ಈ ಚಿತ್ರಗಳನ್ನು ಹೊರತು ಪಡಿಸಿ ಮತ್ತೊಂದು ಚಿತ್ರವನ್ನು ಕೂಡ ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಈ ಚಿತ್ರಗಳ ಭವಿಷ್ಯ ಏನಾಗಲಿದೆ ಎಂದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ''ಕಲ್ಕಿ 2'' ಮೇಲೆ ತೆಲುಗು ಪಂಡಿತರಿಗೆ ನಿರೀಕ್ಷೆ ಇದೆ.

ಯಾಕೆಂದರೆ ಸತತ ಸೋಲಿನ ನಡುವೆ ಪ್ರಭಾಸ್‌ಗೆ ಗೆಲುವು ಅನ್ನೋದು ಏನಾದರೂ ಸಿಕ್ಕಿದ್ದರೆ ಅದು ''ಕಲ್ಕಿ'' ಚಿತ್ರದ ಮೂಲಕವೇ. ಹೀಗಿರುವಾಗ ಇದೀಗ ''ಕಲ್ಕಿ 2'' ಚಿತ್ರದಲ್ಲೊಂದು ಬದಲಾವಣೆಯಾದ ಸುದ್ದಿ ಹೊರ ಬಂದಿದೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ''ಕಲ್ಕಿ''ಯಲ್ಲಿ ದೀಪಿಕಾ ಪಡುಕೋಣೆ ನಾಯಕಿಯ ಪಾತ್ರ ನಿರ್ವಹಿಸಿದ್ದರು. ''ಕಲ್ಕಿ 2'' ಚಿತ್ರದಲ್ಲಿ ಕೂಡ ಅವರೇ ಮುಂದುವರೆಯುವ ನಿರೀಕ್ಷೆ ಇತ್ತು. ಆದರೆ.. ದೀಪಿಕಾ ಪಡುಕೋಣೆ ಅವರ ಬೇಡಿಕೆಗಳಿಗೆ ಸುಸ್ತಾದ ಚಿತ್ರತಂಡ ಅವರನ್ನು ಹೊರಗಡೆ ಕಳುಹಿಸಿತು.

sai-pallavi-to-replace-deepika-padukone-the-epic-shift-in-nag-ashwin-s-sci-fi-universe-revealed

ಹೀಗಾಗಿ ದೀಪಿಕಾ ಜಾಗಕ್ಕೆ ಎರಡನೇ ಭಾಗದಲ್ಲಿ ಯಾರು ಬರುತ್ತಾರೆ ಎನ್ನುವ ಕುತೂಹಲ ಇತ್ತು. ಈ ಕುತೂಹಲಕ್ಕೆ ಉತ್ತರ ಎಂಬಂತೆ ಸದ್ಯ ಸಾಯಿ ಪಲ್ಲವಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಂತೆ-ಕಂತೆಯ ಸಂತೆಯಲ್ಲಿ ಸದ್ಯ ಸಾಯಿ ಪಲ್ಲವಿ ಅವರ ಹೆಸರು ಕೇಳಿ ಬರುತ್ತಿದ್ದು ಈಗಾಗಲೇ ಸಾಯಿ ಪಲ್ಲವಿ ಜೊತೆ ಚಿತ್ರದ ನಿರ್ದೇಶಕ ನಾಗ್ ಅಶ್ವಿನ್ ಮಾತುಕತೆಯನ್ನು ಕೂಡ ನಡೆಸಿದ್ದಾರೆ ಎಂಬ ಮಾತು ಹೈದರಾಬಾದ್‌ನಲ್ಲಿ ಕೇಳಿ ಬರುತ್ತಿದೆ. ಸಾಯಿ ಪಲ್ಲವಿ ಕೂಡ ಒಪ್ಪಿಕೊಂಡಿದ್ದಾರೆ. ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲು ಉತ್ಸುಕರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಹಿಂದೆ ಒಮ್ಮೆ ಸಂದರ್ಶನದಲ್ಲಿ ಪ್ರಭಾಸ್ ಜೊತೆ ಅಭಿನಯಿಸುವ ಇಂಗಿತವನ್ನು ಸಾಯಿ ಪಲ್ಲವಿ ವ್ಯಕ್ತಪಡಿಸಿದ್ದರು. ಬಾಯ್ತುಂಬ ಪ್ರಭಾಸ್ ಅವರನ್ನು ಹೊಗಳಿದ್ದರು. ಈ ಹಿನ್ನೆಲೆ ''ಕಲ್ಕಿ 2'' ಚಿತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿವೆ ಎಂಬ ಚರ್ಚೆ ಕೂಡ ಅಭಿಮಾನಿ ವಲಯದಲ್ಲಿ ನಡೆಯುತ್ತಿದೆ.

ಹಾಗೊಂದು ವೇಳೆ ಈ ಸುದ್ದಿ ನಿಜಾ ಆಗಿದ್ದೇ ಆದಲ್ಲಿ ಇದೇ ಮೊದಲ ಬಾರಿ ಸಾಯಿ ಪಲ್ಲವಿ ಮತ್ತು ಪ್ರಭಾಸ್ ತೆರೆಯ ಮೇಲೆ ಜೊತೆಯಾಗಲಿದ್ದಾರೆ. ನಿಜಕ್ಕೂ ''ಕಲ್ಕಿ 2''ದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಳ್ಳುತ್ತಾರಾ..? ಉತ್ತರ ಶೀಘ್ರದಲ್ಲಿಯೇ ಸಿಗುವ ನಿರೀಕ್ಷೆ ಇದೆ. ಚಿತ್ರತಂಡ ಈ ಕುರಿತು ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ.

More from Filmibeat

English summary
Huge update on 'Kalki 2' cast! Find out why Sai Pallavi is tipped to replace Deepika Padukone in Nag Ashwin’s sci-fi epic starring Prabhas and Amitabh Bachchan.
Read more about: prabhas kalki ad 2898 tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X