ಸಾಯಿ ಪಲ್ಲವಿಗೆ ಬಂಫರ್ ಆಫರ್: ಒಪ್ಪಿಕೊಳ್ಳುತ್ತಾರೋ ಇಲ್ಲವೋ?
ಸೌತ್ ಸುಂದರಿ ಸಾಯಿ ಪಲ್ಲವಿಗೆ ಬ್ಯಾಕ್ ಟು ಬ್ಯಾಕ್ ದೊಡ್ಡ ಪ್ರಾಜೆಕ್ಟ್‌ಗಳ ಆಫರ್ ಬರ್ತಿದೆ. ಆದರೆ, ಯಾವುದನ್ನು ಒಪ್ಪುವುದು ಯಾವುದನ್ನು ಬಿಡುವುದು ಎಂಬ ಗೊಂದಲದಲ್ಲಿದ್ದಾರೆ.
ಇದೀಗ, ಪವನ್ ಕಲ್ಯಾಣ್ ನಟಿಸಲಿರುವ ಮಲಯಾಳಂ ಚಿತ್ರದ ರೀಮೇಕ್‌ನಲ್ಲಿ ಸಾಯಿ ಪಲ್ಲವಿಗೆ ಅವಕಾಶ ಬಂದಿದೆಯಂತೆ. ಚಿತ್ರದಲ್ಲಿ ಪವನ್ ಕಲ್ಯಾಣ್ ಪತ್ನಿ ಪಾತ್ರ ಮಾಡಲು ಆಫರ್ ಬಂದಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಖಚಿತ ಮಾಹಿತಿ ಇಲ್ಲ.
ಮಲಯಾಳಂ ಹಿಟ್ ಸಿನಿಮಾ 'ಅಯ್ಯಪ್ಪನುಮ್ ಕೋಶಿಯುಮ್' ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ಪವನ್ ಕಲ್ಯಾಣ್ ನಾಯಕನಾಗಿ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

'ಅಯ್ಯಪ್ಪನುಮ್ ಕೋಶಿಯುಮ್' ಸಿನಿಮಾದಲ್ಲಿ ಪೃಥ್ವಿರಾಜ್ ಸುಕುಮಾರನ್ ಮತ್ತು ಬಿಜು ಮೆನನ್ ನಟಿಸಿದ್ದಾರೆ. ತೆಲುಗಿನಲ್ಲಿ ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಅಥವಾ ನಿತೀನ್ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಸಚಿ ನಿರ್ದೇಶನ ಮಾಡಿದ್ದ ಈ ಚಿತ್ರದಲ್ಲಿ ಬಿಜೆ ಮೆನನ್ ಪತ್ನಿ ಪಾತ್ರದಲ್ಲಿ ಗೌರಿ ನಂದಾ ನಟಿಸಿದ್ದರು. ಈ ಪಾತ್ರವನ್ನು ತೆಲುಗಿನಲ್ಲಿ ಸಾಯಿ ಪಲ್ಲವಿ ಮಾಡಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನುಳಿದಂತೆ ನಾಗಚೈತನ್ಯ ಜೊತೆ 'ಲವ್ ಸ್ಟೋರಿ' ಎಂಬ ಚಿತ್ರದಲ್ಲಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ.


Click it and Unblock the Notifications











