ಡಿ-ಬಾಸ್ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ.!

Recommended Video

ರಾಬರ್ಟ್ ಬಗ್ಗೆ ಖಡಕ್ ಮಾಹಿತಿ ಕೊಟ್ಟ ನಿರ್ದೇಶಕ..!?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರಗಳಲ್ಲಿ ನಾಯಕಿಯರು ಸಖತ್ ಸದ್ದು ಮಾಡ್ತಾರೆ. ಕನ್ನಡ ನಟಿನಾ ಅಥವಾ ಪರಭಾಷೆಯಿಂದ ಬರ್ತಾರಾ ಎಂಬ ಕುತೂಹಲ ಪ್ರತಿಯೊಂದು ಚಿತ್ರದಲ್ಲೂ ಇದ್ದೇ ಇರುತ್ತೆ. ಇದೀಗ, ರಾಬರ್ಟ್ ಸಿನಿಮಾ ನಾಯಕಿ ವಿಚಾರಕ್ಕೆ ಪದೇ ಪದೇ ಸುದ್ದಿಯಾಗ್ತಿದೆ.

ಉಮಾಪತಿ ನಿರ್ಮಾಣ ಹಾಗೂ ತರುಣ್ ಸುಧೀರ್ ನಿರ್ದೇಶನದಲ್ಲಿ ಆರಂಭವಾಗುತ್ತಿರುವ ರಾಬರ್ಟ್ ಸಿನಿಮಾಗೆ ಹೀರೋಯಿನ್ ಯಾರು ಎಂಬುದು ಸದ್ಯದ ಸೆನ್ಸೆಷ್ನಲ್ ಆಗಿದೆ.

ಪೊರ್ಕಿ ಖ್ಯಾತಿಯ ಪ್ರಣಿತಾ ಸುಭಾಷ್ ಈ ಸಿನಿಮಾದಲ್ಲಿ ದರ್ಶನ್ ಗೆ ಜೋಡಿಯಾಗಲಿದ್ದಾರೆ ಎನ್ನಲಾಗಿತ್ತು. ಇದೀಗ, ಪರಭಾಷಾ ತಾರೆ ಸಾಯಿ ಪಲ್ಲವಿ ಹೆಸ್ರು ಕೇಳಿ ಬರ್ತಿದೆ.

ಹಲವು ದಿನಗಳಿಂದ ಸಾಯಿ ಪಲ್ಲವಿ ಕನ್ನಡಕ್ಕೆ ಬರ್ತಾರೆ ಎನ್ನಲಾಗುತ್ತಿದೆ. ಬಟ್, ಯಾವ ಚಿತ್ರಕ್ಕೆ ಎಂಬ ಮಾಹಿತಿ ಅಥವಾ ಚರ್ಚೆ ನಡೆಯುತ್ತಿದ್ಯಾ ಎಂಬ ವಿಷ್ಯದ ಬಗ್ಗೆ ಸುಳಿವು ಇಲ್ಲ. ಆದರೂ ಸ್ಯಾಂಡಲ್ ವುಡ್ ಗೆ ಸಾಯಿ ಪಲ್ಲವಿಯನ್ನ ಕರೆತರುವ ಪ್ರಯತ್ನ ಸಾಗುತ್ತಿದೆ ಎಂಬುದು ಮಾತ್ರ ಸತ್ಯವಂತೆ.

Sai pallavi will romance with darshan?

ಹೀಗಾಗಿ, ಈ ಬಾರಿ ಈ ಪ್ರಯತ್ನಕ್ಕೆ ರಾಬರ್ಟ್ ಚಿತ್ರತಂಡ ಮುಂದಾಗಿದೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸದ್ದು ಮಾಡ್ತಿದೆ. ಇದರಲ್ಲಿ ಎಷ್ಟು ಸತ್ಯವಿದ್ಯೋ ಗೊತ್ತಿಲ್ಲ.

ಈಗಾಗಲೇ ನಾಯಕಿ ಸೇರಿದಂತೆ ಇನ್ನಿತರ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ದೇಶಕ ತರುಣ್ ಸುಧೀರ್ ''ಚಿತ್ರತಂಡ ಅಧಿಕೃತವಾಗಿ ಹೇಳುವವರೆಗೂ ಯಾವುದನ್ನೂ ನಂಬಬೇಡಿ. ಅದೆಲ್ಲವೂ ಸತ್ಯವಲ್ಲ'' ಎಂದಿದ್ದಾರೆ. ಅಲ್ಲಿಗೆ ಸಾಯಿ ಪಲ್ಲವಿ ರಾಬರ್ಟ್ ಗೆ ನಾಯಕಿ ಅನ್ನೋದು ಬರಿ ವದಂತಿ ಅಷ್ಟೇ.

More from Filmibeat

English summary
Latest buzz sounding in sandalwood about Dimple star sai pallavi. this south beauty will romance with kannada super star darshan in robert movie?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X