ಕಿಯಾರಾ ಅಲ್ಲ, ಶ್ರದ್ಧಾ ಅಲ್ಲ..ಮಹೇಶ್ ಬಾಬು ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಈ ನಟಿ

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಹೊಸ ಸಿನಿಮಾ ಅನೌನ್ಸ್ ಆಗಿದೆ. ಅಪ್ಪನ ಹುಟ್ಟುಹಬ್ಬದ ದಿನ ಹೊಸ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಸರ್ಕಾರ ವಾರಿ ಪಾಠ ಎನ್ನುವ ವಿಭಿನ್ನವಾಗಿರುವ ಟೈಟಲ್ ಮತ್ತು ಲುಕ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

Recommended Video

777 Charlie Rakshit shetty character revealed | Teaser Breakdown | Pushkar Mallikarjunaiah

ಈ ನಡುವೆ ಮಹೇಶ್ ಬಾಬುಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲೂ ಮನೆ ಮಾಡಿದೆ. ಚಿತ್ರತಂಡ ಅಧಿಕೃತವಾಗಿ ನಾಯಕಿಯ ಹೆಸರನ್ನು ಅನೌನ್ಸ್ ಮಾಡುವವರೆಗೂ ಸಾಕಷ್ಟು ನಾಯಕಿಯರ ಹೆಸರುಗಳು ಕೇಳಿ ಬರುತ್ತಿವೆ. ಈ ಮೊದಲು ಮಹೇಶ್ ಬಾಬು ಜೊತೆ ಬಾಲಿವುಡ್ ನಟಿಯರಾದ ಕಿಯಾರ ಅಡ್ವಾನಿ, ಶ್ರದ್ಧಾ ಕಪೂರ್ ಮತ್ತು ಹೆಸರು ಕೇಳಿ ಬರುತ್ತಿತ್ತು. ಆದರೀಗ ಮತ್ತೋರ್ವ ನಾಯಕಿಯ ಹೆಸರು ವೈರಲ್ ಆಗಿದೆ. ಮುಂದೆ ಓದಿ...

ಕಿಯಾರಾ ಅಡ್ವಾನಿ ಹೆಸರು ಕೇಳಿ ಬರುತ್ತಿದೆ

ಕಿಯಾರಾ ಅಡ್ವಾನಿ ಹೆಸರು ಕೇಳಿ ಬರುತ್ತಿದೆ

ಬಾಲಿವುಡ್ ನ ಸ್ಟಾರ್ ನಟಿ ಕಿಯಾರಾ ಅಡ್ವಾನಿ ಮತ್ತೆ ಟಾಲಿವುಡ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ ಎನ್ನುವ ಮಾತು ಬಲವಾಗಿ ಕೇಳಿ ಬರುತ್ತಿದೆ. ಮಹೇಶ್ ಬಾಬು ಹೊಸ ಸಿನಿಮಾ ಸರ್ಕಾರ ವಾರಿ ಪಾಠ ಚಿತ್ರಕ್ಕೆ ಕಿಯಾರಾ ನಾಯಕಿಯಾಗಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ಆದರೀಗ ಕಿಯಾರಾ ಮಹೇಶ್ ಬಾಬು ಜೊತೆ ನಟಿಸಿವುದು ಅನುಮಾನ ಎಂದು ಹೇಳಲಾಗುತ್ತಿದೆ.

ಮತ್ತೆ ಬರ್ತಾರಾ ಶ್ರದ್ಧಾ ಕಪೂರ್?

ಮತ್ತೆ ಬರ್ತಾರಾ ಶ್ರದ್ಧಾ ಕಪೂರ್?

ಕಿಯಾರಾ ಹೆಸರಿನ ಜೊತೆಗೆ ಬಾಲಿವುಡ್ ನ ಮತ್ತೋರ್ವ ನಾಯಕಿ ಶ್ರದ್ಧಾ ಕಪೂರ್ ಹೆಸರು ಸಹ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಶ್ರದ್ಧಾ ಅಥವಾ ಕಿಯಾರಾ ಇಬ್ಬರಲ್ಲಿ ಒಬ್ಬರು ಮಹೇಶ್ ಬಾಬು ಜೊತೆ ನಾಯಕಿಯಾಗಿ ಬಣ್ಣಹಚ್ಚುವ ಸಾಧ್ಯತೆ ಹೆಚ್ಚಿದೆ. ಈಗಾಗಲೆ ಶ್ರದ್ಧಾ ಪ್ರಭಾಸ್ ಜೊತೆ ಸಾಹೋ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮಹೇಶ್ ಬಾಬುಗೆ ನಾಯಕಿಯಾದರೆ 2ನೇ ಬಾರಿ ತೆಲುಗು ಪ್ರೇಕ್ಷಕರ ಮುಂದೆ ಬರಲಿದ್ದಾರೆ ಅಂತ ಅಂದುಕೊಂಡಿದ್ದರು. ಆದರೀಗ ಮತ್ತೋರ್ವ ನಾಯಕಿಯ ಹೇಳಿರು ಕೇಳಿಬರುತ್ತಿದೆ.

ಮಹೇಶ್ ಬಾಬುಗೆ ಸಾಯಿ ಮಂಜ್ರೇಕರ್ ನಾಯಕಿ

ಮಹೇಶ್ ಬಾಬುಗೆ ಸಾಯಿ ಮಂಜ್ರೇಕರ್ ನಾಯಕಿ

ಸರ್ಕಾರ ವಾರಿ ಪಾಠ ಸಿನಿಮಾಗೆ ನಾಯಕಿಯಾರಾಗ್ತಾರೆ ಎನ್ನುವ ಲಿಸ್ಟ್ ಗೆ ಈಗ ಬಾಲಿವುಡ್ ನ ಮತ್ತೋರ್ವ ನಟಿ ಸಾಯಿ ಮಂಜ್ರೇಕರ್ ಹೆಸರು ಕೇಳಿ ಬರುತ್ತಿದೆ. ಮಹೇಶ್ ಬಾಬು ಜೊತೆ ಸರ್ಕಾರ ವಾರಿ ಪಾಠ ಸಿನಿಮಾದಲ್ಲಿ ಸಾಯಿ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ.

ಸಾಯಿ ಮಂಜ್ರೇಕರ್ ಬಗ್ಗೆ

ಸಾಯಿ ಮಂಜ್ರೇಕರ್ ಬಗ್ಗೆ

ಬಾಲಿವುಡ್ ನ ಖ್ಯಾತ ನಿರ್ದೇಶಕ ಮಹೇಶ್ ಮಂಜ್ರೇಕರ್ ಪುತ್ರಿ ಸಾಯಿ ಮಂಜ್ರೇಕರ್. 2012ರಲ್ಲಿ ರಿಲೀಸ್ ಆದ ಮಹೇಶ್ ಮಂಜ್ರೇಕರ್ ನಿರ್ದೇಶನದ ಸಿನಿಮಾದಲ್ಲಿ ಪುತ್ರಿ ಸಾಯಿ ಕಾಣಿಸಿಕೊಂಡಿದ್ದರು. ಆ ನಂತರ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಆ ನಂತರ ಯಾವುದೆ ಸಿನಿಮಾಗಳನ್ನು ಒಪ್ಪಿಕೊಳ್ಳದ ಸಾಯಿ ಈಗ ಮಹೇಶ್ ಬಾಬು ಅಭಿನಯದ ಸರ್ಕಾರ ವಾರಿ ಪಾಠ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Not kira Advani, Saiee Manjrekar to romance with Mahesh babu's Sarkar Vaari Pata. Geetha Govindam movie fame Parasuram directed this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X