For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಬಗ್ಗೆ ಪ್ರಶಾಂತ್ ನೀಲ್ ಬೇಸರ: ಡ್ಯೂಪ್ ಬಳಸಿ 'ಸಲಾರ್' ಚಿತ್ರೀಕರಣ?

  |

  'KGF' ಸರಣಿ ಸಿನಿಮಾಗಳ ನಂತರ ಪ್ರಶಾಂತ್‌ ನೀಲ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಸಲಾರ್'. ಕೊರೊನಾ ಹಾವಳಿ ಕಾರಣ ಸಿನಿಮಾ ಶೂಟಿಂಗ್ ತಡವಾಗುತ್ತಾ ಬರ್ತಿದೆ. ಇದೀಗ ಚಿತ್ರಕ್ಕೆ ಮತ್ತೊಂದು ಸಮಸ್ಯೆ ಎದುರಾಗಿದ್ದು, ಪ್ರಭಾಸ್ ಮೇಲೆ ನೀಲ್ ಬೇರಸಗೊಂಡಿದ್ದಾರೆ ಎನ್ನಲಾಗುತ್ತಿದೆ. ಏಕಕಾಲಕ್ಕೆ ಯಂಗ್‌ ರೆಬೆಲ್ ಸ್ಟಾರ್ 3 ಸಿನಿಮಾಗಳಲ್ಲಿ ನಟಿಸ್ತಿರೋದೇ ಇದಕ್ಕೆಲ್ಲಾ ಕಾರಣ. ಇದರಿಂದ ಬೇಸತ್ತಿರುವ 'KGF' ಸಾರಥಿ ಪ್ರಭಾಸ್ ಡ್ಯೂಪ್ ಬಳಸಿ ಸಿನಿಮಾ ಶೂಟಿಂಗ್ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ.

  'ಸಲಾರ್' ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನ ಮತ್ತೊಂದು ಮಹತ್ವಾಕಾಂಕ್ಷೆಯ ಸಿನಿಮಾ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗ್ತಿದೆ. ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸ್ತಿದ್ದು, ಜಗಪತಿ ಬಾಬು, ಪೃಥ್ವಿರಾಜ್‌ ಸುಕುಮಾರ್‌ರಂತಹ ದಿಗ್ಗಜ ಕಲಾವಿದರು ತಾರಾಗಣದಲ್ಲಿದ್ದಾರೆ. ಪ್ರಭಾಸ್ ಸದ್ಯ 'ಸಲಾರ್' ಜೊತೆಗೆ 'ಪ್ರಾಜೆಕ್ಟ್- K', 'ಸ್ಪಿರಿಟ್' ಸಿನಿಮಾ ಶೂಟಿಂಗ್‌ನಲ್ಲೂ ಭಾಗಿಯಾಗುತ್ತಿದ್ದಾರೆ. ಒಂದೊಂದು ಚಿತ್ರದ ಒಂದೊಂದು ಶೆಡ್ಯೂಲ್‌ನಲ್ಲಿ ಚಿತ್ರೀಕರಣ ನಡೆಸುತ್ತಿರುವುದರಿಂದ ಪದೇ ಪದೇ ಪ್ರಭಾಸ್ ಲುಕ್ ಬದಲಾಗುತ್ತಿದೆಯಂತೆ. ಇದರಿಂದ ಬೇಸತ್ತಿರುವ ನೀಲ್, ಪ್ರಭಾಸ್ ಡ್ಯೂಲ್ ಬಳಸಿ ಚಿತ್ರೀಕರಣ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

  ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!ಪ್ರಧಾನಿ ಮೋದಿಗೆ ಜೈ ಎಂದ ನಟಿ ಸಮಂತಾ ವಿರುದ್ಧ ನೆಟ್ಟಿಗರು ಫುಲ್ ಗರಂ!

  ಸ್ಟಾರ್‌ಗಳ ಸಿನಿಮಾಗಳಲ್ಲಿ ಡ್ಯೂಪ್ ಬಳಸುವುದು ಹೊಸದೇನು ಅಲ್ಲ. ರಿಸ್ಕಿ ಸನ್ನಿವೇಶಗಳಲ್ಲಿ ಅವರ ಡ್ಯೂಪ್ ಕಾಣಿಸಿಕೊಳ್ಳುತ್ತಾರೆ. 'ಸಲಾರ್' ಚಿತ್ರದಲ್ಲೂ ಇದೇ ಕಾರಣಕ್ಕೆ ಈ ಪ್ರಯತ್ನ ನಡೀತಿದೆ ಎನ್ನುವವರು ಇದ್ದಾರೆ. ಸದ್ಯ ಈವರೆಗೆ ಚಿತ್ರದ 40% ಚಿತ್ರೀಕರಣ ಮಾತ್ರ ಮುಕ್ತಾಯವಾಗಿದೆ. ಮುಂದಿನ ವರ್ಷ ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಘೋಷಿಸಲಾಗಿದೆ. ಇನ್ನು ಒಂದು ವರ್ಷ ಸಿನಿಮಾ ನೋಡುವುದಕ್ಕೆ ಕಾಯಬೇಕಾ? ಎಂದು ಅಭಿಮಾನಿಗಳು ಬೇಸರಗೊಂಡಿದ್ದಾರೆ. 'KGF' ಸರಣಿ ಚಿತ್ರಕ್ಕೆ ಕೆಲಸ ಮಾಡಿದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡುತ್ತಿದೆ.

  ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಗೆ ಬರಲಿದೆ. 'ಸಲಾರ್'ಗೂ ಮುನ್ನ ಮತ್ತೊಂದು ಸಿನಿಮಾ ಬರುತ್ತಾ ಅನ್ನುವ ಕುತೂಹಲವೂ ಅಭಿಮಾನಿಗಳಲ್ಲಿದೆ. ನಾಗ್‌ ಅಶ್ವಿನ್ ನಿರ್ದೇಶನದ 'ಪ್ರಾಜೆಕ್ಟ್- K' ಸಿನಿಮಾ 500 ಕೋಟಿ ರೂ. ಬಜೆಟ್‌ನಲ್ಲಿ ಬಹಳ ಅದ್ಧೂರಿಯಾಗಿ ನಿರ್ಮಾಣವಾಗ್ತಿದೆ. ಅಮಿತಾಬ್‌ ಬಚ್ಚನ್, ದೀಪಿಕಾ ಪಡುಕೋಣೆ ಸೇರಿದಂತೆ ದೊಡ್ಡ ತಾರಾಗಣ ಈ ಚಿತ್ರದಲ್ಲಿದೆ.

  English summary
  Salaar Movie Director Prashanth Neel Upset with Actor Prabhas. Know More.
  Tuesday, September 6, 2022, 8:53
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X