'ಸಲಾರ್' ಸ್ಟೋರಿ ಲೀಕ್? ಡಬಲ್ ರೋಲ್‌ನಲ್ಲಿ ಪ್ರಭಾಸ್? 1000 ಮಂದಿ ಎದುರು ತಂದೆ- ಮಗನ ಫೈಟ್!
ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ಟ್ರೈಲರ್‌ಗಾಗಿ ಅಭಿಮಾನಿಗಳು ಚಾತಕ ಪಕ್ಷಿಗಳಂತೆ ಕಾಯುತ್ತಿದ್ದಾರೆ. ಸಿನಿಮಾ ಬಗ್ಗೆ ದಿನಕ್ಕೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಚಿತ್ರದ ಸ್ಟೋರಿ ಲೀಕ್ ಆಗಿದೆ ಎನ್ನಲಾಗ್ತಿದ್ದು ಪ್ರಭಾಸ್ ಡಬಲ್ ರೋಲ್‌ನಲ್ಲಿ ಅಬ್ಬರುತ್ತಾರೆ ಎನ್ನುವ ಗುಸುಗುಸು ಶುರುವಾಗಿದೆ.
'KGF' ಸರಣಿಗೆ ಕೆಲಸ ಮಾಡಿದ ಬಹುತೇಕ ತಂಡ 'ಸಲಾರ್' ಚಿತ್ರಕ್ಕಾಗಿ ಶ್ರಮಿಸುತ್ತಿದೆ. ಹೈವೋಲ್ಟೇಜ್ ಆಕ್ಷನ್ ಚಿತ್ರವನ್ನು ಹೊಂಬಾಳೆ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ 2 ಭಾಗಗಳಾಗಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಸದ್ಯ ಮೊದಲ ಭಾಗದ ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸ ನಡೀತಿದೆ.

ಹೈದರಾಬಾದ್‌ನಲ್ಲಿ ಸಿನಿಮಾ ಕೆಲಸಗಳು ನಡೆದರೆ ಕಥೆ, ಕಂಟೆಂಟ್ ಲೀಕ್ ಆಗುವ ಭಯದಿಂದ ಬಸ್ರೂರಿಗೆ ಪೋಸ್ಟ್ ಪ್ರೊಡಕ್ಷನ್ಸ್ ವರ್ಕ್ ಶಿಫ್ಟ್ ಮಾಡಿದ್ದಾರೆ ಎನ್ನಲಾಗ್ತಿದೆ. ರವಿ ಬಸ್ರೂರು ಸ್ಟುಡಿಯೋದಲ್ಲಿ ರೀರೆಕಾರ್ಡಿಂಗ್ ಕೆಲಸ ನಡೀತಿದೆ. ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣದ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಕಥೆ ಲೀಕ್ ಆಗಿದೆ ಎನ್ನುವ ಗುಸುಗುಸು ಸರ್ವೇ ಸಾಮಾನ್ಯ. 'ಸಲಾರ್' ವಿಚಾರದಲ್ಲೂ ಪದೇ ಪದೆ ಇಂತಹ ಚರ್ಚೆ ನಡೆಯುತ್ತದೆ.
ಸದ್ಯ ಅಭಿಮಾನಿಯೊಬ್ಬರು ನಾನು 'ಸಲಾರ್' ಚಿತ್ರೀಕರಣದ ಜಾಗಕ್ಕೆ ಹೋಗಿದ್ದೆ. ಅಲ್ಲಿ ಸೆರೆ ಹಿಡಿಯುತ್ತಿದ್ದ ದೃಶ್ಯ ನೋಡಿ ಶಾಕ್ ಆಗಿದ್ದೆ. ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಸನ್ನಿವೇಶವೊಂದರಲ್ಲಿ ಒಬ್ಬ ಪ್ರಭಾಸ್‌ನ ಸಾವಿರಾರು ಜನ ಸುತ್ತುವರೆಯುತ್ತಾರೆ. ಆತನನ್ನು ಕಾಪಾಡಲು ಮತ್ತೊಬ್ಬ ಪ್ರಭಾಸ್ ಎಂಟ್ರಿ ಆಗುತ್ತದೆ. ಅಂದರೆ ಚಿತ್ರದಲ್ಲಿ ಪ್ರಭಾಸ್ ದ್ವಿಪಾತ್ರಾಭಿನಯ ಇದೆ ಎಂದಿದ್ದಾರೆ. ಇನ್ನು 1000 ಜನರ ನಡುವಿನ ಫೈಟ್ ಚಿತ್ರಕ್ಕೆ ಹೈಲೆಟ್.
RRR ಚಿತ್ರದಲ್ಲಿ ರಾಮ್‌ಚರಣ್ ಎಂಟ್ರಿ ಸೀನ್‌ನಲ್ಲಿ ಸಾವಿರಾರು ಜನರ ನಡುವೆ ಆಕ್ಷನ್ ಸನ್ನಿವೇಶ ಚಿತ್ರೀಕರಿಸಲಾಗಿತ್ತು. ಅದನ್ನು ಮೀರಿಸುವಂತೆ ಈ ಆಕ್ಷನ್ ಸೀನ್ ಕಂಪೋಸ್ ಮಾಡಿದ್ದಾರೆ. ಥಿಯೇಟರ್‌ಗಳಲ್ಲಿ ಈ ಸನ್ನಿವೇಶ ನೋಡಿ ಪ್ರೇಕ್ಷಕರು ಥ್ರಿಲ್ ಆಗೋದು ಗ್ಯಾರೆಂಟಿ ಎಂದಿದ್ದಾರೆ.

ಪ್ರಶಾಂತ್ ನೀಲ್ ಯಾವುದಕ್ಕು ರಾಜಿಯಾಗದೇ ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ನೂರಾರು ಜನರನ್ನು ಒಂದೆಡೆ ಸೇರಿಸಿ ಚಿತ್ರೀಕರಣ ನಡೆಸಿದ್ದಾರೆ. ಈ ಸನ್ನಿವೇಶ ಬಂದಾಗ ಥಿಯೇಟರ್‌ಗಳಲ್ಲಿ ಪ್ರಭಾಸ್ ಅಭಿಮಾನಿಗಳ ಆರ್ಭಟ ಜೋರಾಗಿರುತ್ತದೆ ಎಂದು ಆತ ಹೇಳಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಿಂದೆ ಕೂಡ 'ಸಲಾರ್' ಚಿತ್ರದಲ್ಲಿ ಪ್ರಭಾಸ್ ಡಬಲ್ ರೋಲ್ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಇದು ಎರಡು ತಲೆಮಾರಿನ ನಾಯಕ, ಖಳನಾಯಕರ ನಡುವಿನ ಕಾದಾಟದ ಕಥೆ ಎನ್ನಲಾಗಿತ್ತು.
ಚಿತ್ರದಲ್ಲಿ ತಂದೆ ಸಲಾರ್ ಹಾಗೂ ಮಗ ದೇವ ಭಾಯ್ ಆಗಿ ಎರಡು ಪಾತ್ರಗಳಲ್ಲಿ ಪ್ರಭಾಸ್ ಅಬ್ಬರಿಸಿದರೆ ಜಗಪತಿ ಬಾಬು ಹಾಗೂ ಪೃಥ್ವಿರಾಜ್ ಸುಕುಮಾರ್ ತಂದೆ ಮಕ್ಕಳಾಗಿ ಕಾಣಿಸಿಕೊಂಡಿದ್ದಾರೆ. ಹೀಗೆ ಎರೆಉ ತಲೆಮಾರುಗಳ ಕಥೆ ಇದೆ ಎನ್ನಲಾಗಿತ್ತು. ಇನ್ನು ಕನ್ನಡದ 'ಉಗ್ರಂ' ಕಥೆಯನ್ನು 'ಸಲಾರ್' ಎನ್ನುವ ಮಾತುಗಳು ಕೂಡ ಕೇಳಿಬಂದಿತ್ತು. ಆದರೆ ಯಾವುದನ್ನು ಚಿತ್ರತಂಡ ಖಚಿತಪಡಿಸಲಿಲ್ಲ. ಸೆಪ್ಟೆಂಬರ್ 28ಕ್ಕೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ಡಿಸೆಂಬರ್‌ನಿಂದಲೇ 'ಸಲಾರ್'-2 ಚಿತ್ರೀಕರಣ ಶುರುವಾಗುತ್ತದೆ ಎನ್ನಲಾಗ್ತಿದೆ. ಬಾಹುಬಲಿ ರೀತಿಯಲ್ಲಿ ಫ್ಲಾಶ್‌ಬ್ಯಾಕ್‌ನಲ್ಲಿ 'ಸಲಾರ್' ಕಥೆಯನ್ನು ಹೇಳುತ್ತಿದ್ದಾರಂತೆ. ಹಾಗಾಗಿ 2ನೇ ಭಾಗದಲ್ಲಿ ನಾಯಕನ ಬಾಲ್ಯದ ದಿನಗಳು ತೋರಿಸುತ್ತಾರಂತೆ. ಆ ಪಾತ್ರಕ್ಕಾಗಿ ಬಾಲ ನಟನ ಹುಡುಕಾಟ ಶುರುವಾಗಿದೆ ಎನ್ನುವ ಗುಸು ಗುಸು ಕೇಳಿ ಬರ್ತಿದೆ. ಆಡಿಷನ್ ಮಾಡಿ ಜ್ಯೂನಿಯರ್ ಸಲಾರ್ ಆಯ್ಕೆ ಮಾಡಿದ ಬಳಿಕ ಚಿತ್ರೀಕರಣ ಶುರುವಾಗಲಿದೆ ಎನ್ನುವ ಮಾತುಗಳು ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ.


Click it and Unblock the Notifications











