ಸೋತ್ರು ತಗ್ಗಲಿಲ್ಲ ಸಲ್ಮಾನ್ ಖಾನ್ ಸಂಭಾವನೆ; ಹೊಸ ಚಿತ್ರಕ್ಕೆ ಕೋಟಿ ಕೋಟಿ ಜೇಬಿಗಿಳಿಸಿದ ನಟ

ಸಿನಿಮಾಗಳು ಸೋತ್ರು ಗೆದ್ರು ಸ್ಟಾರ್ ನಟರ ಸಂಭಾವನೆ ಮಾತ್ರ ತಗ್ಗಲ್ಲ.. ಭಾರತೀಯ ಚಿತ್ರರಂಗದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ಚಿತ್ರವೊಂದಕ್ಕೆ ಸಲ್ಲು ನೂರು ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ಆಗಾಗ್ಗೆ ಸುದ್ದಿ ಆಗುತ್ತದೆ. ಆದರೆ ಇತ್ತೀಚೆಗೆ ಅವರ ಸಿನಿಮಾಗಳು ಗೆಲ್ಲುತ್ತಿಲ್ಲ. ಹಾಗಂತ ಸಂಭಾವನೆ ತಗ್ಗಿಸಿಲ್ಲ.

ಸದ್ಯ 'ಮಾತೃಭೂಮಿ' ಎಂಬ ಸಿನಿಮಾದಲ್ಲಿ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ್ ನಟಿಸುತ್ತಿದ್ದಾರೆ. ಬಳಿಕ ವಂಶಿ ಪೈಡಿಪಲ್ಲಿ ನಿರ್ದೇಶನದ ಚಿತ್ರದಲ್ಲಿ ಬಣ್ಣಹಚ್ಚಲಿದ್ದಾರೆ. ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದೆ. ಈ ಬಗ್ಗೆ ಸಲ್ಲು ಸ್ವತಃ ಮಾಹಿತಿ ನೀಡಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕುಲದೀಪ್ ರಾಥೋಡ್ ಮತ್ತು ರಫಿ ಕಾಜಿ ಕೂಡ ಸಾಥ್ ಕೊಟ್ಟಿದ್ದಾರೆ.

Salman Khan Commands Massive remuneration for Dil Raju Film Amid Box Office Struggles

ಒಂದ್ಕಾಲದಲ್ಲಿ ಸಲ್ಲು ಸಿನಿಮಾಗಳು ಅಂದ್ರೆ ಭಾರೀ ಹೈಪ್ ಕ್ರಿಯೇಟ್ ಆಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಬಾಲಿವುಡ್ ಮಸಲ್‌ಮ್ಯಾನ್ ಕ್ರೇಜ್ ಕಮ್ಮಿಯಾಗಿದೆ. ಅವರ ಸಿನಿಮಾಗಳಿಗೆ ಭಾರೀ ಓಪನಿಂಗ್ಸ್ ಕೂಡ ಸಿಗುತ್ತಿಲ್ಲ. ಕಳೆದ ವರ್ಷ ಬಂದಿದ್ದ 'ಸಿಕಂದರ್' ಸಿನಿಮಾ ಹೀನಾಯವಾಗಿ ನೆಲ ಕಚ್ಚಿತ್ತು. ಹೇಳಿದೊಂದು ಮಾಡಿದೊಂದು ಎಂದು ನಿರ್ದೇಶಕ ಮುರುಗದಾಸ್ ಹಾಗೂ ಸಲ್ಲು ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ.

ದಕ್ಷಿಣದ ನಿರ್ಮಾಪಕ, ನಿರ್ದೇಶಕರ ಜೊತೆ ಸಲ್ಮಾನ್ ಖಾನ್ ಸಿನಿಮಾ ಮಾಡುವುದು ಅಂದ್ರೆ ಸಾಮಾನ್ಯ ವಿಷಯ ಅಲ್ಲ. ಭಾರೀ ಸಂಭಾವನೆ ಇಲ್ಲದೇ ಇಂತಹ ಕಾಂಬಿನೇಷನ್ ಫಿಕ್ಸ್ ಆಗಲ್ಲ. ದಿಲ್ ರಾಜು ಅದೆಷ್ಟು ಕೋಟಿ ಕೊಟ್ಟು ತಮ್ಮ ಚಿತ್ರಕ್ಕೆ ಸಲ್ಲುನ ಒಪ್ಪಿಸಿದ್ರು ಎಂದು ಈಗ ಚರ್ಚೆ ನಡೀತಿದೆ. ಒಳ್ಳೆ ಕಥೆ ಸಿಕ್ಕರೆ ಧೈರ್ಯ ಮಾಡಿ ಸಿನಿಮಾ ಮಾಡಬಹುದು. ಹಿಟ್ ಸಿನಿಮಾಗಳನ್ನು ಕೊಟ್ಟ ವಂಶಿ ಮೇಲೆ ದಿಲ್ ರಾಜು ಹಾಗೂ ಸಲ್ಲು ಇಬ್ಬರೂ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಸಿನಿಮಾ ಘೋಷಣೆಯಾಗಿದೆ.

ಈ ಚಿತ್ರಕ್ಕಾಗಿ ಸಲ್ಮಾನ್ ಖಾನ್‌ಗೆ ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಕೊಟ್ಟಿದ್ದಾರೆ ಎಂದು ಹೇಳಲಾಗ್ತಿದೆ. ಅಷ್ಟೇ ಅಲ್ಲದೇ ಲಾಭದಲ್ಲಿ ಪಾಲು ಕೊಡಲು ಒಪ್ಪಿಕೊಂಡಿರುವುದಾಗಿ ಊಹಾಪೋಹ ಶುರುವಾಗಿದೆ. ಕಳೆದ 'ಗೇಮ್ ಚೇಂಜರ್' ಸಿನಿಮಾ ಮಾಡಿ ದಿಲ್ ರಾಜು ಸೋತಿದ್ದರು. ಶಂಕರ್- ರಾಮ್‌ಚರಣ್ ಕಾಂಬಿನೇಷನ್ ಸಿನಿಮಾ ಭಾರೀ ನಷ್ಟ ತಂದೊಡ್ಡಿತ್ತು. ಆದರೆ ಬೆನ್ನಲ್ಲೇ ಬಂದಿದ್ದ 'ಸಂಕ್ರಾಂತಿಕಿ ವಸ್ತಾನ್ನಾಂ' ಸಿನಿಮಾ ಗೆದ್ದಿತ್ತು. ಹಾಗಾಗಿ ನಿರ್ಮಾಪಕರು ಸೋಲಿನ ಹೊಡೆತದಿಂದ ಚೇತರಿಸಿಕೊಂಡಿದ್ದರು. ಸೋಲು, ಗೆಲುವು ಪಕ್ಕಕ್ಕಿಟ್ಟು ದಿಲ್ ರಾಜು ಸಿನಿಮಾ ನಿರ್ಮಾಣ ಮುಂದುವರೆಸಿದ್ದಾರೆ.

'ಬೃಂದಾವನಂ', 'ಊಪಿರಿ', 'ಮಹರ್ಷಿ' ರೀತಿಯ ಹಿಟ್ ಸಿನಿಮಾಗಳನ್ನು ವಂಶಿ ಪೈಡಿಪಲ್ಲಿ ಕಟ್ಟಿಕೊಟ್ಟಿದ್ದಾರೆ. ಆದರೆ ವಿಜಯ್ ನಟನೆಯ 'ವಾರೀಸು' ಸಿನಿಮಾ ಮಾತ್ರ ಸೋತಿತ್ತು. ಈ ಬಾರಿ ಸಲ್ಮಾನ್ ಖಾನ್ ಜೊತೆ ಸೇರಿ ಹಿಟ್ ಸಿನಿಮಾ ಕೊಡುವ ಪ್ರಯತ್ನದಲ್ಲಿದ್ದಾರೆ. ಅದಕ್ಕೆ ದಿಲ್ ರಾಜು ಸಾಥ್ ಸಿಕ್ಕಿದೆ. ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ಎನ್ನಲಾಗ್ತಿದೆ. ಸಲ್ಲು ಅಭಿಮಾನಿಗಳು ಬಯಸುವ ಎಲ್ಲಾ ಅಂಶಗಳು ಇರಲಿದೆ. ಹಿಂದಿ ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಲಿದ್ದು ದಕ್ಷಿಣದ ಭಾಷೆಗಳಿಗೆ ಡಬ್ ಆಗಲಿದೆ.

ಸಲ್ಮಾನ್ ಖಾನ್ ದೊಡ್ಡ ಹಿಟ್ ಸಿನಿಮಾ ಕೊಟ್ಟು ಬಹಳ ವರ್ಷಗಳಾಯಿತು. ಹಾಗಾಗಿ ವಿಭಿನ್ನ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 'ಮಾತೃಭೂಮಿ' ಸಿನಿಮಾ ಬಗ್ಗೆ ಕೂಡ ನಿರೀಕ್ಷೆ ಹೆಚ್ಚಿದೆ. ಸದ್ಯ ಘೋಷಣೆ ಆಗಿರುವ ಚಿತ್ರವನ್ನು ಮುಂದಿನ ವರ್ಷ ಈದ್ ಸಂಭ್ರಮದಲ್ಲಿ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ.

More from Filmibeat

Read more about: salman khan bollywood gossip
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X