For Quick Alerts
  ALLOW NOTIFICATIONS  
  For Daily Alerts

  ಮಾಜಿ ಭುವನ ಸುಂದರಿ ಜೊತೆ ಸಲ್ಮಾನ್ ಕುಚ್ ಕುಚ್

  By ರವಿಕಿಶೋರ್
  |

  ಯಾವ್ಯಾವ ವಯಸ್ಸಲ್ಲಿ ಏನೇನು ಆಗಬೇಕು ಅದು ಆದರೇನೆ ಚೆಂದ ಎನ್ನುತ್ತಾರೆ ಹಿರಿಯರು. ಆದರೆ ಸಲ್ಮಾನ್ ಖಾನ್ ವಿಚಾರದಲ್ಲಿ ಮದುವೆ ಮಾತ್ರ ಮುಂದಕ್ಕೆ ಹೋಗುತ್ತಲೇ ಇದೆ. ಹಗಲು ರಾತ್ರಿಗಳು ಸರಿಯುತ್ತಲೇ ಇವೆ. ಮದುವೆಗೆ ಮಾತ್ರ ಮುಹೂರ್ತ ಕೂಡಿ ಬರಲಿಲ್ಲ. ಈಗ ಅವರಿಗೆ 46ರ ಪ್ರಾಯ. ಇಷ್ಟೊತ್ತಿಗೆ ಮದುವೆಯಾಗಿದ್ದಿದ್ದರೆ ಅವರಿಗೆ ಅರ್ಧ ಡಜನ್ ಮಕ್ಕಳಿರುತ್ತಿದ್ದರು.

  ಮದುವೆ ವಿಚಾರ ಬಿಡಿ. ವಯಸ್ಸು ಮಾಗುತ್ತಿದ್ದರೂ ಸಲ್ಮಾನ್ ಖಾನ್ ಮನಸ್ಸು ಮಾತ್ರ ಇನ್ನೂ ಹರಯದ ಉತ್ಸಾಹದಲ್ಲಿದೆ. ಈಗ ಅವರು ಹೊಸ ಗರ್ಲ್ ಫ್ರೆಂಡ್ ಹುಡುಕಿಕೊಂಡಿದ್ದಾರೆ. ಈಕೆ ಬೇರಾರು ಅಲ್ಲ ಮಾಜಿ ಭುವನ ಸುಂದರಿ, ಹಾಲಿ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ.

  ಇತ್ತೀಚೆಗೆ ಸಲ್ಲು ಅಭಿನಯದ 'ಏಕ್ ಥಾ ಟೈಗರ್' ಬಾಕ್ಸಾಫೀಸಲ್ಲಿ ಭರ್ಜರಿ ಬೆಳೆ ತೆಗೆದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ನಿರ್ದೇಶಕ ಕಬೀರ್ ಖಾನ್ ಔತಣಕೂಟ ಏರ್ಪಡಿಸಿದ್ದರು. ಕತ್ರಿನಾ ಕೈಫ್ ಸೇರಿದಂತೆ 'ಏಕ್ ಥಾ ಟೈಗರ್' ಚಿತ್ರತಂಡದ ಎಲ್ಲರೂ ಆಗಮಿಸಿದ್ದರು. ಆದರೆ ಸಲ್ಲು ಮಾತ್ರ ನಾಪತ್ತೆ.

  ಎಲ್ಲಿ ಹೋದರಪ್ಪಾ ಎಂದು ಹುಡುಕಿದರೆ ಬಾಂದ್ರಾದ ತಮ್ಮ ಮನೆಯಲ್ಲಿ ಹಾಯಾಗಿ ಪ್ರಿಯಾಂಕಾ ಜೊತೆ ಲಲ್ಲೆ ಹೊಡುಯುತ್ತಿದ್ದರಂತೆ. ಬಾಲಿವುಡ್ ಗುಪ್ತಚರ ಮೂಲಗಳ ಪ್ರಕಾರ, ಸಲ್ಮಾನ್ ಖಾನ್ ಅವರ ಗ್ಯಾಲಾಕ್ಸಿ ಅಪಾರ್ಟ್ ಮೆಂಟ್ ಬಳಿ ಪ್ರಿಯಾಂಕಾ ಚೋಪ್ರಾಳ ಮರ್ಸಿಡೆಸ್ ಎಸ್-ಕ್ಲಾಸ್ ಬೆಂಚ್ ಕಾರು ನಿಂತಿದೆ.

  ಆಗ ಸಮಯ ಬೇರೆ ಮಧ್ಯರಾತ್ರಿ. ಅಲ್ಲಿಗೆ ಕಥೆ ಕ್ಲಿಯರ್ ಆಗಿ ಅರ್ಥವಾಗಿರುತ್ತದೆ. ಅದರಲ್ಲೂ ಪ್ರಿಯಾಂಕಾ ಸಡಿಲ ಉಡುಪು ಧರಿಸಿ, ನೀಳವಾದ ಕೇಶವನ್ನು ಸಿಂಗರಿಸಿಕೊಂಡು ಮಧುಚಂದ್ರಕೆ ಹೊರಟ ಮದುವಣಗಿತ್ತಿಯಂತೆ ಇದ್ದರಂತೆ.

  ಸಲ್ಲು ಮನೆಯ ಒಳಗೆ ಹೋದವಳು ಆಚೆಗೆ ಬಂದದ್ದು ಬೆಳಗಿನ ಜಾವ ಸರಿಸುಮಾರು 4.47ಕ್ಕಂತೆ. ಗೇಟಿನ ತನಕ ಸಲ್ಲು ಬಂದು ಆಕೆಯನ್ನು ಬಿಟ್ಟು ಗುಡ್ ಬೈ ಕೂಡಾ ಹೇಳಿದ್ದಾನೆ. ವಿಶೇಷ ಎಂದರೆ ಈ ಸಂದರ್ಭದಲ್ಲಿ ಸಲ್ಲು ಮನೆಯಲ್ಲಿ ಯಾರೂ ಇರಲಿಲ್ಲವಂತೆ. ಇವರಿಬ್ಬರೇ ಇದ್ದರಂತೆ. ಸಲ್ಲು ಕೂಡ ಸುಸ್ತಾದವನಂತೆ ಕಾಣುತ್ತಿದ್ದರಂತೆ. ಇಲ್ಲಿಗೆ ಕಥೆ ಮುಕ್ತಾಯವಾಯಿತು. ನಮಸ್ಕಾರ. (ಏಜೆನ್ಸೀಸ್)

  English summary
  Ek Tha Tiger director, Kabir Khan threw a party to celebrate his daughter's birthday and to celebrate Ek Tha Tiger's success. Katrina Kaif and the entire crew was present at the party except Salman Khan. Salman Khan was missing from the party because he was busy spending time with Priyanka Chopra at his Bandra residence.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X