ಸುಶಾಂತ್ ಸಿಂಗ್ ಸಿನಿಮಾಕ್ಕೆ ಸಲ್ಮಾನ್ ಖಾನ್ ಅಭಿಮಾನಿಗಳ ಅಡ್ಡಗಾಲು?
ಸುಶಾಂತ್ ಸಿಂಗ್ ಸಾವಿನ ಬಳಿಕ ಬಾಲಿವುಡ್ ಗುಂಪುಗಾರಿಕೆ ಬಗ್ಗೆ ಸಿನಿಪ್ರೇಮಿಗಳು ಅತೀವ ಆಕ್ರೋಶ ವ್ಯಕ್ತಪಡಿಸಿದ್ದರು.
Recommended Video
ಅದರಲ್ಲಿಯೂ ಬಾಲಿವುಡ್ ಗುಂಪುಗಾರಿಕೆಯ ಮುಂದಾಳತ್ವದಲ್ಲಿರುವವರು ಎಂದು ಕರಣ್ ಜೋಹರ್, ಸಲ್ಮಾನ್ ಖಾನ್ ಹಾಗೂ ಇತರ ನಟರನ್ನು ಗುರುತಿಸಿ ಅವರ ಮೇಲೆ ಮೂದಲಿಕೆಗಳ ಸುರಿಮಳೆ ಸುರಿಸಲಾಯಿತು.
ಸಲ್ಮಾನ್ ಖಾನ್ ಅನ್ನೂ ಸಹ ಸುಶಾಂತ್ ಸಿಂಗ್ ಸಾವಿಗೆ ಪರೋಕ್ಷ ಕಾರಣ ಎನ್ನಲಾಯಿತು. ಇದರಿಂದ ಸಲ್ಮಾನ್ ಖಾನ್ ಅಭಿಮಾನಿಗಳು ಆಕ್ರೋಶಗೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸ್ಟಾರ್ ರಕ್ಷಣೆಗೆ ಇಳಿದು, ಸುಶಾಂತ್ ಸಿಂಗ್ ಗೆ ಬಯ್ಯಲು ಕೆಲವರು ಪ್ರಾರಂಭಿಸಿದರು. ಇದೀಗ ಸುಶಾಂತ್ ಸಿಂಗ್ ಸಿನಿಮಾಗೂ ತೊಂದರೆ ಮಾಡಲು ಪ್ರಾರಂಭಿಸಿದ್ದಾರೆ.

ದಿಲ್ ಬೇಚಾರಾ ಟ್ರೇಲರ್ ಬಿಡುಗಡೆ
ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಸಿನಿಮಾ 'ದಿಲ್ ಬೇಚಾರ' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿದೆ. ಆದರೆ ಇದಕ್ಕೆ ಅಡ್ಡಗಾಲು ಹಾಕುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ.

ಟ್ರೇಲರ್‌ಗೆ ಡಿಸ್‌ಲೈಕ್ಸ್ ಸಹ ಇವೆ
ಸುಶಾಂತ್ ಸಿಂಗ್ ರಜಪೂತ್ ಅವರ ದಿಲ್ ಬೇಚಾರಾ ಟ್ರೇಲರ್‌ಗೆ ಲೈಕ್ಸ್ ಜೊತೆಗೆ ಡಿಸ್‌ಲೈಕ್ಸ್ ಸಹ ಹೆಚ್ಚಾಗಿಯೇ ಆಗುತ್ತಿವೆ. ನಾಲ್ಕು ಗಂಟೆಯಲ್ಲಿ ಸುಮಾರು 8 ಸಾವಿರ ಡಿಸ್‌ಲೈಕ್ಸ್ ಸಹ ಆಗಿವೆ. ಇದರ ಬಗ್ಗೆ ಹಲವರು ಪ್ರಶ್ನೆ ಮಾಡಿದ್ದಾರೆ.

ಕರೆ ಕೊಟ್ಟಿದ್ದಾರೆಯೇ ಸಲ್ಮಾನ್ ಅಭಿಮಾನಿಗಳು?
ಡಿಸ್‌ಲೈಕ್ಸ್‌ಗೆ ಸಲ್ಮಾನ್ ಖಾನ್ ಅಭಿಮಾನಿಗಳೇ ಕಾರಣ ಎಂಬ ವಾದವನ್ನು ಟ್ವಿಟ್ಟರ್‌ನಲ್ಲಿ ಕೆಲವರು ಮುಂದಿಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ, ಸಲ್ಮಾನ್ ಖಾನ್ ಅಭಿಮಾನಿಗಳು ಟ್ರೇಲರ್‌ಗೆ ಡಿಸ್‌ಲೈಕ್ ಮಾಡಿರೆಂದು ಕರೆಕೊಟ್ಟಿರುವ ಪೋಸ್ಟ್ ಅನ್ನು ಸಹ ಶೇರ್ ಮಾಡಿದ್ದಾರೆ. ಈ ಪೋಸ್ಟ್ ಅಸಲಿಯೇ ನಕಲಿಯೇ ತಿಳಿಯಬೇಕಿದೆ.

ಜುಲೈ 24 ರಂದು ಸಿನಿಮಾ ಬಿಡುಗಡೆ
'ದಿಲ್ ಬೇಚಾರ' ಸಿನಿಮಾ ಸುಶಾಂತ್ ಸಿಂಗ್ ಅವರ ಕೊನೆಯ ಸಿನಿಮಾ ಆಗಿದ್ದು, ಸಿನಿಮಾವು ಇದೇ ತಿಂಗಳ 24 ರಂದು ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದಲ್ಲಿ ಸೈಫ್ ಅಲಿ ಖಾನ್ ಮತ್ತು ನಾಯಕಿಯಾಗಿ ಸಂಜನಾ ಸಂಗಿ ನಟಿಸಿದ್ದಾರೆ.


Click it and Unblock the Notifications











