»   » ನಟ ಸಲ್ಲು ಗರ್ಲ್ ಫ್ರೆಂಡ್ ಕುಮಾರಿ ಅಲ್ಲ ಶ್ರೀಮತಿ

ನಟ ಸಲ್ಲು ಗರ್ಲ್ ಫ್ರೆಂಡ್ ಕುಮಾರಿ ಅಲ್ಲ ಶ್ರೀಮತಿ

Posted By:
Subscribe to Filmibeat Kannada

ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು. ಈಗ ನಟ ಸಲ್ಮಾನ್ ಖಾನ್ ಮನಸ್ಸು ಕೂಡ ಅಕ್ಷರಶಃ ಮೊಸರು, ಕೆಸರಿನಂತೇ ಆಗಿದೆ. ಇದಕ್ಕೆ ಕಾರಣವಾಗಿರುವುದು ಸಲ್ಲು ಗರ್ಲ್ ಫ್ರೆಂಡ್. ಬಾಲಿವುಡ್ ಮಂದಿ ಈಕೆಯ ಬಗ್ಗೆ ತಲೆಗೊಂದು ಮಾತನಾಡುತ್ತಿದ್ದಾರೆ.

ಅವುಗಳಲ್ಲಿ ಮುಖ್ಯವಾಗಿ ಕೇಳಿಬರುತ್ತಿರುವ ಮಾತು ಎಂದರೆ ಆಕೆಗೆ ಈಗಾಗಲೆ ಮದುವೆಯಾಗಿದೆ ಎಂಬುದು. ಅಂದರೆ ಸಲ್ಲು ಗರ್ಲ್ ಫ್ರೆಂಡ್ ಲುಲಿಯಾ ವಂತೂರ್ ಕುಮಾರಿ ಅಲ್ಲ ಶ್ರೀಮತಿ ಎಂಬುದು ಬಾಲಿವುಡ್ ನಲ್ಲಿ ಗುಲ್ಲಾಗಿದೆ. ಈ ಸುದ್ದಿಗಳು ಸಲ್ಲು ನಿದ್ದೆಗೂ ಸಂಚಾರ ತಂದಿವೆಯಂತೆ.

ರೋಮೇನಿಯಾ ಮೂಲದ ಲುಲಿಯಾ ಈ ಹಿಂದೆ ಗ್ರ್ಯಾಮಿ ಪ್ರಶಸ್ತಿಗೆ ನಾಮಿನೇಟ್ ಆಗಿದ್ದ ಗಾನಪಟು ಮಾರಿಯಸ್ ಮೋಗ ಜೊತೆ ಡೇಟಿಂಗ್ ಮಾಡುತ್ತಿದ್ದರಂತೆ. ಆದರೆ ಇದೀಗ ಕೇಳಿಬರುತ್ತಿರುವುದೇನೆಂದರೆ ಮೋಗ ಜೊತೆ ಈಗಾಗಲೆ ಲುಲಿಯಾಗೆ ಮದುವೆಯಾಗಿದೆ ಎಂಬುದು.

ಇನ್ನೊಂದು ವಿಶೇಷ ಎಂದರೆ ಮಾರಿಯಸ್ ಅವರ ಫೇಸ್ ಬುಕ್ ಅಕೌಂಟ್ ನಲ್ಲಿ ಅವರ ಮದುವೆ ವಿರಗಳು ಇದ್ದೂ ಲುಲಿಯಾ ಅವರನ್ನು ವರಿಸಿರುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆಯಾಗಿ ಸಲ್ಲುಗೆ ಕಡೆಗೂ ಸೆಕೆಂಡ್ ಹ್ಯಾಂಡ್ ಹುಡುಗಿ ಸಿಕ್ಕಿದಳಲ್ಲಾಪ್ಪಾ ಎಂದು ಬಾಲಿವುಡ್ ಮಂದಿ ಮುಸಿಮುಸಿ ನಗುತ್ತಿದ್ದಾರೆ.

Salman khan, Lulia Vantur

ಈಗ ಇಬರಿಬ್ಬರ ನಡುವೆ 'ದಬಾಂಗ್' ಚಿತ್ರದ ಫೆವಿಕಾಲ್ ನಂತೆ ಬೆಸುಗೆ ಬೆಸುಗೆ ಜೀವನವೆಲ್ಲಾ ಸುಂದರ ಬೆಸುಗೆ ಎಂಬಂತಾಗಿದೆ. ಇಬ್ಬರೂ ಈಗ ಹೋದಲ್ಲಿ ಬಂದಲ್ಲಿ ಫೆವಿಕಾಲ್ ನಂತೆ ಅಂಟಿಕೊಂಡೇ ಓಡಾಡುತ್ತಿದ್ದಾರೆ. ಇವು ಸಾಕಷ್ಟು ಗುಮಾನಿಗೂ ಕಾರಣವಾಗಿದ್ದವು.

ಇತ್ತೀಚೆಗಷ್ಟೇ ಸಲ್ಮಾನ್ ಜೊತೆ ಹೈದರಾಬಾದ್ ಏರ್ ಫೋರ್ಟ್ ನಲ್ಲಿ ಈ ರೋಮಾನಿಯನ್ ಸುಂದರಿ ಲುಲಿಯಾ ಜೊತೆ ಕಾಣಿಸಿಕೊಂಡಿದ್ದರು. 'ಮೆಂಟಲ್' ಚಿತ್ರೀಕರಣಕ್ಕಾಗಿ ಸಲ್ಲು ಹೈದರಾಬಾದಿಗೆ ತನ್ನ ಗರ್ಲ್ ಫ್ರೆಂಡ್ ಲುಲಿಯಾರನ್ನೂ ಕರೆದುಕೊಂಡು ಹೋಗಿದ್ದರು. (ಏಜೆನ್ಸೀಸ್)

English summary
There've been several rumours and speculations that Bollywood superstar Salman Khan is head over heels in love with his new alleged girlfriend Lulia Vantur. But the latest reports about Lulia's personal life that has been presented by a leading daily has left us shocked.
Please Wait while comments are loading...