»   » ತಂಗಿ ಮದುವೆಯಲ್ಲಿ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್

ತಂಗಿ ಮದುವೆಯಲ್ಲಿ ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್

Posted By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ದಬಾಂಗ್ ಬಾಯ್ ಸಲ್ಮಾನ್ ಖಾನ್ ತನ್ನ ತಂಗಿ ಅರ್ಪಿತಾ ಮದುವೆಯನ್ನು ಅದ್ದೂರಿಯಾಗಿ ಮಾಡಿ ಮುಗಿಸಿದ್ದಾರೆ. ತಂಗಿ ಮದುವೆ ಬಳಿಕ ಸಲ್ಲು ಮದುವೆಗೆ ಲೈನ್ ಕ್ಲಿಯರ್ ಆಗಿದೆಯಾ? ಇತ್ತೀಚೆಗೆ ತನ್ನ ತಂಗಿ ಮದುವೆಯಲ್ಲಿ ನಡೆದ ಒಂದು ಚೇತೋಹಾರಿ ಘಟನೆ ಅನುಮಾನಗಳನ್ನು ಬಲಪಡಿಸುತ್ತಿದೆ.

ಅರ್ಪಿತಾ ಮದುವೆಯಲ್ಲಿ ತನ್ನ ಗರ್ಲ್ ಫ್ರೆಂಡನ್ನು ಎಲ್ಲರಿಗೂ ಪರಿಚಯಿಸಿದ್ದಾನೆ ಸಲ್ಲು. ಈ ಹಿಂದೆಯೇ ಈ ಗರ್ಲ್ ಫ್ರೆಂಡ್ ಬಗ್ಗೆ ಸಾಕಷ್ಟು ಪುಕಾರುಗಳು ಹಬ್ಬಿದ್ದವು. ಈ ಬಾರಿ ಅರ್ಪಿತಾ ಮದುವೆಗೆ ಬಂದು ಎಲ್ಲರ ಗಮನಸೆಳೆದಿದ್ದಾರೆ ಸಲ್ಲು ಗರ್ಲ್ ಫ್ರೆಂಡ್. ಸಲ್ಲು ಗರ್ಲ್ ಫ್ರೆಂಡ್ಸ್ ಪಟ್ಟಿ ಬಹಳ ದೊಡ್ಡದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.

Salman Khan introduces new girlfriend Iulia Vantur

ಆದರೆ ಈ ಸ್ಪೆಷಲ್ ಗೆಳತಿ ಯೂಲಿಯಾ ವಂಟೂರ್ ಅವರನ್ನು ಎಲ್ಲರಿಗೂ ಪರಿಚಯಿಸಿದ್ದಾರೆ ಸಲ್ಮಾನ್. ಈ ವಿಷಯ ಈಗ ಬಾಲಿವುಡ್ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇವರಿಬ್ಬರ ಗೆಳೆತನ ಮದುವೆವರೆಗೆ ಹೋದರೂ ಅಚ್ಚರಿಯಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. [ಲೂಲಿಯಾ ಬಂಧವನ್ನೂ ಕಳಚಿಕೊಂಡ ಸಲ್ಮಾನ್?]

ಅತುಲ್ ಅಗ್ನಿಹೋತ್ರಿ ಅವರ ಸಿನಿಮಾದಲ್ಲೂ ಈ ಮೋಹಕ ಗೆಳತಿ ಕಾಣಿಸಿಕೊಂಡಿದ್ದಾರೆ. ಅರ್ಪಿತಾ ಮದುವೆಗೆ ಆಗಮಿಸಿದ್ದ ಯೂಲಿಯಾ ಎಲ್ಲರೊಂದಿಗೂ ಚೆನ್ನಾಗಿ ಬೆರೆತು ಓಡಾಡುತ್ತಿದ್ದನ್ನು ಕಂಡವರು ಇವರಿಬ್ಬರಿಗೂ ಮದುವೆ ಗ್ಯಾರಂಟಿ ಎನ್ನುತ್ತಿದ್ದಾರೆ. [ಸ್ಯಾಂಡಲ್ ವುಡ್ ಡಿಫರೆಂಟ್ ಲವ್ ಸ್ಟೋರಿಗಳು]

'ಏಕ್ತಾ ಟೈಗರ್' ಚಿತ್ರದ ಶೂಟಿಂಗ್ ವೇಳೆಯಲ್ಲೇ ಈ ರೊಮಾನಿಯನ್ ಸುಂದರಿ ಸಲ್ಲುಗೆ ಪರಿಚಯವಾಗಿದ್ದರು. ಡಬ್ಲಿನ್ ನಲ್ಲೇ ಇಬ್ಬರಿಗೂ ಸ್ನೇಹ ಸಂಬಂಧ ಕುದುರಿ ಈಗ ಇಲ್ಲಿಯವರೆಗೂ ಅವರನ್ನು ಕರೆತಂದಿದೆ. ಮುಂದೆ ಇನ್ನೆಲ್ಲಿಗೆ ಕರೆದೊಯ್ಯುತ್ತದೋ ಏನೋ ಎಂಬುದೇ ಬಾಲಿವುಡ್ ಗುಮಾನಿ.

English summary
Salman Khan introduced his latest girlfriend Iulia Vantur to his close friends and family at his sister Arpita’s wedding, according to a report in Mumbai Mirror.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada