ತೆಲುಗು ಸಿನಿಮಾ ಸೆಟ್‌ನಲ್ಲಿ ಸಲ್ಮಾನ್ ಖಾನ್ ಹಿಂದಿ ಸಿನಿಮಾ ಶೂಟಿಂಗ್!

ಬಾಲಿವುಡ್‌ನ ಸ್ಟಾರ್ ನಟ ಸಲ್ಮಾನ್ ಖಾನ್ ತೆಲುಗು ಸಿನಿಮಾದಲ್ಲಿ ನಟಿಸಿರುವುದು ಈಗ ಹಳೆಯ ಸುದ್ದಿ. ಚಿರಂಜೀವಿ ಜೊತೆ 'ಗಾಡ್ ಫಾದರ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿರುವ ಸಲ್ಮಾನ್ ಖಾನ್, ಚಿರಂಜೀವಿ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ, ಆಕ್ಷನ್ ದೃಶ್ಯದಲ್ಲಿ ಸಹ ನಟಿಸಿದ್ದಾರೆ.

ಆದರೆ ಈಗ ಬರುತ್ತಿರುವ ಹೊಸ ಸುದ್ದಿಯೆಂದರೆ ತೆಲುಗಿನ ಸಿನಿಮಾಕ್ಕಾಗಿ ಹಾಕಿದ ಸೆಟ್‌ನಲ್ಲಿ ಸಲ್ಮಾನ್‌ರ ಖಾನ್‌ರ ಹಿಂದಿ ಸಿನಿಮಾದ ಶೂಟಿಂಗ್ ನಡೆಯಲಿದೆಯಂತೆ!

ಸಲ್ಮಾನ್ ಖಾನ್‌ರ 'ಟೈಗರ್ 3' ಸಿನಿಮಾದ ಚಿತ್ರೀಕರಣ ಮುಗಿದಿದ್ದು, 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಈ ಸಿನಿಮಾದ ಬಹುತೇಕ ಚಿತ್ರೀಕರಣ ಮುಂಬೈನಲ್ಲಿ ನಡೆಯಲಿದೆ. ಜೊತೆಗೆ ಹೈದರಾಬಾದ್‌ನಲ್ಲಿ ಸಹ ಕೆಲವು ಭಾಗಗಳ ಚಿತ್ರೀಕರಣ ನಡೆಯಲಿದೆ.

ಹೈದರಾಬಾದ್‌ನಲ್ಲಿ ನಟ ಚಿರಂಜೀವಿ ಅವರ ವಿಸ್ತಾರವಾದ ಜಮೀನಿನಲ್ಲಿ 'ಆಚಾರ್ಯ' ಸಿನಿಮಾಕ್ಕಾಗಿ ಹಾಕಲಾಗಿರುವ ಸೆಟ್‌ನಲ್ಲಿ ಚಿರಂಜೀವಿ ನಟನೆಯ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಶೂಟಿಂಗ್ ನಡೆಯಲಿದೆ ಎನ್ನಲಾಗುತ್ತಿದೆ.

Salman Khans Hindi Movie Shooting Will Happen In Telugu Movie Set

'ಆಚಾರ್ಯ' ಸಿನಿಮಾಕ್ಕಾಗಿ ಏಷ್ಯಾದಲ್ಲಿಯೇ ಬೃಹತ್ ಸೆಟ್ ಹಾಕಲಾಗಿತ್ತು. ಸೆಟ್ ಅನ್ನು ಪೂರ್ಣವಾಗಿ ತೆಗೆಯಲಾಗಿಲ್ಲವಾದ್ದರಿಂದ. ಅದೇ ಸೆಟ್‌ ಅನ್ನು ಬಳಸಿ ಅದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಸಲ್ಮಾನ್ ಖಾನ್‌ರ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದ ಚಿತ್ರೀಕರಣ ಮಾಡಲಾಗುತ್ತದೆಯಂತೆ.

ತಮ್ಮ ಸಿನಿಮಾದ ಸೆಟ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಚಿರಂಜೀವಿ ತುಂಬು ಹೃದಯದಿಂದ ಒಪ್ಪಿಕೊಂಡಿದ್ದಾರಂತೆ. ತಮ್ಮ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿರುವ ಸಲ್ಮಾನ್ ಖಾನ್‌ಗೆ ತಮ್ಮ ಸೆಟ್‌ನಲ್ಲಿ ಚಿತ್ರೀಕರಣ ಮಾಡಲು ಅನುಮತಿ ನೀಡುವುದಿಲ್ಲವೇ!

ಇನ್ನು ಸಲ್ಮಾನ್ ಖಾನ್‌ರ 'ಕಭಿ ಈದ್ ಕಭಿ ದಿವಾಲಿ' ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾವನ್ನು ನಿರ್ಮಾಪಕ ಸಾಜಿದ್ ನಾಡಿಯಾವಾಲಾ ನಿರ್ಮಾಣ ಮಾಡುತ್ತಿದ್ದಾರೆ.

More from Filmibeat

English summary
Salman Khan's Hindi movie shooting will happen in Telugu movie set. Salman's Kabhi Eid Kabhi Diwali will start shooting in Hyderabad soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X