For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಸಿನಿಮಾದಲ್ಲಿ ನಟಿ ಸಮಂತಾ?

  By ಫಿಲ್ಮಿಬೀಟ್ ಡೆಸ್ಕ್
  |

  ಟಾಲಿವುಡ್ ಖ್ಯಾತ ನಟಿ ಸಮಂತಾ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಪತಿ ನಾಗ ಚೈತನ್ಯರಿಂದ ಸಮಂತಾ ದೂರ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಸ್ಟಾರ್ ದಂಪತಿ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಇಬ್ಬರೂ ದೂರ ದೂರ ಆಗಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಬಗ್ಗೆ ಸಮಂತಾ ಎಲ್ಲಿಯೂ ಪ್ರತಿಕ್ರಿಯೆ ನೀಡದೆ ಇರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ.

  ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಟಾಲಿವುಡ್ ಸ್ಟಾರ್ ನಾಗಾರ್ಜುನ ಅವರಿಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿದ್ದರು. ಆದರೆ ನಾಗಾರ್ಜುನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಮಂತಾ ಮಿಸ್ ಆಗಿದ್ದರು. ನಾಗಾರ್ಜುನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಇಡೀ ಕುಟುಂಬ ಭಾಗಿಯಾಗಿತ್ತು. ಪತ್ನಿ ಅಮಲಾ ಅಕ್ಕಿನೇನಿ, ಇಬ್ಬರ ಮಕ್ಕಳಾದ ನಾಗ ಚೈತನ್ಯ ಮತ್ತು ಅಕಿಲ್ ಅಕ್ಕಿನೇನಿ ಇಬ್ಬರು ಭಾಗಿಯಾಗಿದ್ದರು. ಆದರೆ ಸಮಂತಾ ಗೈರು ಎದ್ದು ಕಾಣುತ್ತಿತ್ತು. ಇದು ಇಬ್ಬರ ನಡುವಿನ ಬಿರುಕಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

  ಈ ಬಗ್ಗೆ ಸಮಂತಾ ಆಗಲಿ ಅಥವಾ ನಾಗ ಚೈತನ್ಯ ಎಲ್ಲಿಯೂ ಮಾತನಾಡಿಲ್ಲ. ಆದರೆ ಈ ನಡುವೆ ಸಮಂತಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ ಸಮಂತಾ ಬಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ದಿ ಫ್ಯಾಮಿಲಿ ಮ್ಯಾನ್ -2 ಸರಣಿ ಸೂಪರ್ ಸಕ್ಸಸ್ ಬಳಿಕ ಸಮಂತಾ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕೇವಲ ತೆಲುಗು ಮಾತ್ರವಲ್ಲದೇ ಬಾಲಿವುಡ್ ನಲ್ಲೂ ಸಮಂತಾ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿದ್ದಾರೆ.

  ಶಾರುಖ್ ಜೊತೆ ಸಮಂತಾ ನಟನೆ

  ಶಾರುಖ್ ಜೊತೆ ಸಮಂತಾ ನಟನೆ

  ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಮಂತಾ, ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಶಾರುಖ್ ಸದ್ಯ ಪಠಾಣ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಶಾರುಖ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಪಠಾಣ್ ಮುಗಿಯುತ್ತಿದ್ದಂತೆ ತಮಿಳು ಖ್ಯಾತ ನಿರ್ದೇಶಕ ಆಟ್ಲೀ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ನಯನತಾರಾ ಹೆಸರು ಕೇಳಿಬರುತ್ತಿದೆ

  ನಯನತಾರಾ ಹೆಸರು ಕೇಳಿಬರುತ್ತಿದೆ

  ಈ ಮೊದಲು ನಯನತಾರಾ ಹೆಸರು ಬಲವಾಗಿ ಕೇಳಿಬರುತ್ತಿತ್ತು. ಆದರೀಗ ಸಮಂತಾ ಹೆಸರು ವೈರಲ್ ಆಗಿದೆ. ಶಾರುಖ್ ಜೊತೆ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರೂ ಸ್ಟಾರ್ ನಟಿಯರಲ್ಲಿ ಶಾರುಖ್ ಯಾರ ಜೊತೆ ನಟಿಸಲಿದ್ದಾರೆ ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಒಟ್ನಲ್ಲಿ ಶಾರುಖ್ ಮುಂದಿನ ಸಿನಿಮಾಗಾಗಿ ದಕ್ಷಿಣ ಭಾರತೀಯ ನಟಿರ ಮೇಲೆ ಕಣ್ಣಿಟ್ಟಿರುವುದು ವಿಶೇಷ.

  ಶಾರುಖ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದ ಸಮಂತಾ

  ಶಾರುಖ್ ಜೊತೆ ನಟಿಸುವ ಆಸೆ ವ್ಯಕ್ತಪಡಿಸಿದ್ದ ಸಮಂತಾ

  ಅಂದಹಾಗೆ ಇತ್ತೀಚಿಗಷ್ಟೆ ಸಮಂತಾ ಸಂದರ್ಶನದಲ್ಲಿ ಶಾರುಖ್ ಜೊತೆ ನಟಿಸುವ ಬಯಕೆ ವ್ಯಕ್ತಪಡಿಸಿದ್ದರು. ಶಾರುಖ್ ಖಾನ್ ಜೊತೆ ತೆರೆಹಂಚಿಕೊಳ್ಳಬೇಕೆನ್ನುವ ಕನಸಿದೆ ಎಂದು ಸಮಂತಾ ಹೇಳಿದ್ದರು. ಶೀಘ್ರದಲ್ಲೇ ಈಡೇರಲಿದೆ ಎಂದು ಭಾವಿಸೋಣ ಅಂತ ಸಮಂತಾ ಹೇಳಿದ್ದರು. ಸಮಂತಾ ಮಾತು ಈಗ ನಿಜವಾಗುವ ಸಮಯ ಹತ್ತಿರಬರುತ್ತಿದೆ ಎನ್ನಲಾಗುತ್ತಿದೆ.

  ತೆಲುಗು-ತಮಿಳಿನಲ್ಲಿ ಸಮಂತಾ ಬ್ಯುಸಿ

  ತೆಲುಗು-ತಮಿಳಿನಲ್ಲಿ ಸಮಂತಾ ಬ್ಯುಸಿ

  ಸದ್ಯ ಸಮಂತಾ ತೆಲುಗಿನ ಬಹುನಿರೀಕ್ಷೆಯ ಶಕುಂತಲಂ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಜೊತೆಗೆ ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಘ್ನೇನ್ ಶಿವನ್ ನಿರ್ದೇಶನ ಮಾಡುತ್ತಿರುವ ಸಿನಿಮಾದಲ್ಲಿ ಸಮಂತಾ ಮತ್ತು ನಯನತಾರಾ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಇಬ್ಬರು ಬಸ್ ಏರಿ ಫುಟ್ ಬೋರ್ಡ್ ನಲ್ಲಿ ನಿಂತುಕೊಂಡು ಹೋಗುತ್ತಿರುವ ದೃಶ್ಯ ವೈರಲ್ ಆಗಿತ್ತು.

  ಸಿನಿಮಾದಿಂದ ಬ್ರೇಕ್ ಪಡೆಯುವ ಬಗ್ಗೆ ಸಮಂತಾ ಮಾತು

  ಸಿನಿಮಾದಿಂದ ಬ್ರೇಕ್ ಪಡೆಯುವ ಬಗ್ಗೆ ಸಮಂತಾ ಮಾತು

  ಸಮಂತಾ ಸಿನಿಮಾದಿಂದ ಕೊಂಚ ಬ್ರೇಕ್ ಪಡೆಯುವ ಬಗ್ಗೆಯೂ ಹೇಳಿದ್ದರು. 11 ವರ್ಷದ ವೃತ್ತಿ ಜೀವನದಲ್ಲಿ ಸಮಂತಾ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಾ, ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಹಾಗಾಗಿ ಕೊಂಚ ಬ್ರೇಕ್ ಬೇಕೆಂದ ಇತ್ತೀಚಿಗೆ ಆಂಗ್ಲ ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದರು. ಸದ್ಯ ಸಮಂತಾ ಬಳಿ ಇರುವ ತಮಿಳು ಸಿನಿಮಾ ಮುಗಿಸಿ ಬ್ರೇಕ್ ಪಡೆಯುತ್ತಾರಾ ಅಥವಾ ಶಾರುಖ್ ಜೊತೆ ನಟಿಸುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ. ಈ ನಡುವೆ ನಾಗ ಚೈತನ್ಯರಿಂದ ದೂರ ಆಗಿದ್ದಾರೆ ಎನ್ನುವ ಸುದ್ದಿಯೂ ವೈರಲ್ ಆಗಿದೆ. ಈ ಬಗ್ಗೆ ಸಮಂತಾ ಯಾವಾಗ ಸ್ಪಷ್ಟನೆ ನೀಡಲಿದ್ದಾರೆ ಎಂದು ಕಾದುನೋಡಬೇಕು.

  English summary
  Tollywood Actress Samantha Akkineni likely to act with Shah Rukh Khan's next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X