For Quick Alerts
  ALLOW NOTIFICATIONS  
  For Daily Alerts

  ಮತ್ತೊಂದು ಮಹಿಳಾ ಪ್ರಧಾನ ಕಥೆಗೆ ನಾಯಕಿ ಆಗ್ತಾರಾ ಸಮಂತಾ!

  |

  ಸೌತ್ ಸ್ಟಾರ್ ನಟಿ ಸಮಂತಾ ಅಕ್ಕಿನೇನಿ ಮತ್ತೊಂದು ಮಹಿಳಾ ಪ್ರಧಾನ ಚಿತ್ರಕ್ಕೆ ಮುಂದಾಗಿದ್ದಾರೆ ಎಂದು ಸುದ್ದಿಗಳು ಟಾಲಿವುಡ್‌ನಲ್ಲಿ ವರದಿಯಾಗಿದೆ.

  'ಓ ಬೇಬಿ' ಸಿನಿಮಾ ಬಳಿಕ ಮತ್ತೆ ಅದೇ ತಂಡದ ಜೊತೆ ಸಮಂತಾ ಇನ್ನೊಂದು ಚಿತ್ರಕ್ಕೆ ಕೈ ಜೋಡಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಓ ಬೇಬಿ ನಿರ್ದೇಶಕಿ ನಂದಿನಿ ರೆಡ್ಡಿ ಜೊತೆ ಹೊಸ ಸಿನಿಮಾ ಮಾಡುವ ಪ್ಲಾನ್ ಆಗ್ತಿದ್ಯಂತೆ.

  'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಬದಲು ಸಮಂತಾ ನಟನೆ 'ಬೆಂಗಳೂರು ನಾಗರತ್ನಮ್ಮ' ಬಯೋಪಿಕ್: ಅನುಷ್ಕಾ ಬದಲು ಸಮಂತಾ ನಟನೆ

  ಇತ್ತೀಚಿನ ದಿನಗಳಲ್ಲಿ ಸಮಂತಾ ಮಹಿಳಾ ಪ್ರಧಾನ ಪಾತ್ರಗಳ ಕಡೆ ಹೆಚ್ಚು ಒಲವು ತೋರುತ್ತಿದ್ದಾರೆ. ಓ ಬೇಬಿ, ಯು-ಟರ್ನ್, ಜಾನು ಅಂತಹ ಸಿನಿಮಾಗನ್ನು ಗಮನಿಸಿದರೆ ನಾಯಕಿ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇತ್ತು.

  ನಿರ್ದೇಶಕಿ ನಂದಿನಿ ರೆಡ್ಡಿ ಲಾಕ್‌ಡೌನ್ ಸಮಯದಲ್ಲಿ ಸಮಂತಾ ಬಳಿ ಹೊಸದೊಂದು ಕಥೆ ಹೇಳಿದ್ದು, ನಾಗಾರ್ಜುನ ಸೊಸೆಗೂ ಸ್ಕ್ರಿಪ್ಟ್ ಇಷ್ಟ ಆಗಿದೆಯಂತೆ. ಈ ಚಿತ್ರ ಸ್ಕ್ರಿಪ್ಟ್ ಕೆಲಸ ಬಹುತೇಕ ಮುಗಿದಿದ್ದು, ಬಾಲಿವುಡ್ ಸಂಸ್ಥೆಯೊಂದು ಈ ಚಿತ್ರ ನಿರ್ಮಿಸಲು ಮುಂದಾಗಿದೆಯಂತೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

  ಚಿರಂಜೀವಿ ಸೊಸೆ-ನಾಗಾರ್ಜುನ ಸೊಸೆ, ಅಡುಗೆ ಮನೆಯಲ್ಲಿ ಪ್ರತಿಭಾ ಪ್ರದರ್ಶನ!ಚಿರಂಜೀವಿ ಸೊಸೆ-ನಾಗಾರ್ಜುನ ಸೊಸೆ, ಅಡುಗೆ ಮನೆಯಲ್ಲಿ ಪ್ರತಿಭಾ ಪ್ರದರ್ಶನ!

  ಸಮಂತಾ ಸದ್ಯ ಫ್ಯಾಮಿಲಿ ಮ್ಯಾನ್ 2 ವೆಬ್ ಸಿರೀಸ್‌ನಲ್ಲಿ ನಟಿಸುತ್ತಿದ್ದು, ನವೆಂಬರ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ಡಿಸೆಂಬರ್ ವೇಳೆ ಪ್ರದರ್ಶನ ಕಾಣುವ ಸಾಧ್ಯತೆ ಇದೆ.

  English summary
  After Oh Baby, again Samantha akkineni planning to collaborate With director Nandini Reddy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X