For Quick Alerts
  ALLOW NOTIFICATIONS  
  For Daily Alerts

  ಹೊಸ ಉದ್ಯಮಕ್ಕೆ ಕೈ ಹಾಕಿದ ನಟಿ ಸಮಂತಾ ಅಕ್ಕಿನೇನಿ

  |

  ನಟಿ ಸಮಂತಾ ಅಕ್ಕಿನೇನಿ ತೆಲುಗಿನ ಬೇಡಿಕೆಯ ನಟಿ. ಇದೀಗ 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿ ಮೂಲಕ ಒಟಿಟಿಗೆ ಪಾದಾರ್ಪಣೆ ಮಾಡಿರುವ ಸಮಂತಾ ಅಲ್ಲಿಯೂ ಕ್ಲಿಕ್ ಆಗಿದ್ದಾರೆ.

  ಸಿನಿಮಾಗಳಲ್ಲಿ ಇನ್ನೂ ಬ್ಯುಸಿಯಾಗಿರುವಾಗಲೇ ಹೊಸದೊಂದು ಉದ್ಯಮಕ್ಕೆ ಕೈ ಹಾಕುತ್ತಿದ್ದಾರೆ ಸಮಂತಾ. ಈಗಾಗಲೇ 'ಸಾಕಿ' ಹೆಸರಿನ ಫ್ಯಾಷನ್ ಬ್ರ್ಯಾಂಡ್ ಹೊಂದಿರುವ ಸಮಂತಾ ಈಗ ಹೊಸ ಉದ್ಯಮ ಆರಂಭಿಸಲು ಹೊರಟಿದ್ದಾರೆ.

  ಚಿನ್ನದ ವ್ಯವಹಾರಕ್ಕೆ ಕೈ ಹಾಕಿದ್ದಾರೆ ಸಮಂತಾ. ಹೌದು, ಹೊಸದಾಗಿ ಚಿನ್ನದ ವ್ಯಾಪಾರ ಆರಂಭಿಸಲಿದ್ದಾರೆ ನಾಗಾರ್ಜುನ ಸೊಸೆ. ಈ ಕುರಿತು ಈಗಾಗಲೇ ಯೋಜನೆ ಸಿದ್ಧವಾಗಿದ್ದು, ಗ್ರೌಂಡ್ ವರ್ಕ್‌ ನಡೆಯುತ್ತಿದೆ ಎಂದು ತೆಲುಗಿನ ಪತ್ರಿಕೆಗಳು ವರದಿ ಮಾಡಿವೆ.

  ದುಬಾರಿ ವಸ್ತುವಾದ ಚಿನ್ನವನ್ನು ಕಡಿಮೆ ದರದಲ್ಲಿ ಮದ್ಯಮ ಹಾಗೂ ಕೆಳಮಧ್ಯಮ ವರ್ಗದ ಜನರಿಗೆ ಮಾರುವ ಉದ್ದೇಶದೊಂದಿಗೆ ಈ ಉದ್ದಿಮೆ ಆರಂಭಿಸುತ್ತಿದ್ದಾರೆ ಸಮಂತಾ. ಈ ಬಗ್ಗೆ ಹಲವು ಸುತ್ತುಗಳ ಚರ್ಚೆಯನ್ನು ಕುಟುಂಬ ಹಾಗೂ ಉದ್ಯಮದ ಪರಿಚಯ ಇರುವ ವ್ಯಕ್ತಿಗಳ ಜೊತೆ ಮಾಡಿದ್ದಾರಂತೆ.

  ಸಮಂತಾ ಸದಾ ಸಕ್ರಿಯವಾಗಿರುವ ನಟಿ. ಸವಾಲಗಳನ್ನು ಸ್ವೀಕರಿಸಲು ಹೊಸದನ್ನು ಪ್ರಯತ್ನಿಸಲು ಹಿಂದೆ ನೋಡುವುದಿಲ್ಲ. ಬಿಗ್‌ಬಾಸ್ ನಿರೂಪಣೆ ಮಾಡಿದರು, 'ಆಹಾ' ಒಟಿಟಿಗಾಗಿ ಟಾಕ್ ಶೋ ನಿರೂಪಣೆ ಮಾಡಿದರು. ಮಹಿಳಾ ಪ್ರಧಾನ ಸಿನಿಮಾಗಳು, ಅಂತಾಲಜಿ ಸಿನಿಮಾಗಳಲ್ಲಿ ನಟಿಸಿದರು. 'ದಿ ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಅಪ್ಪಟ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರು. ಬೇಡಿಕೆಯಲ್ಲಿರುವ ನಟಿಯೊಬ್ಬರು ಮಾಡಲು ಹಿಂಜರಿಯುವ ಪಾತ್ರಗಳನ್ನು ಸಹ ಸವಾಲಿನಂತೆ ಸ್ವೀಕರಿಸಿ ನಿರ್ವಹಿಸುವುದು ಸಮಂತಾಗೆ ಅಭ್ಯಾಸವಾಗಿದೆ.

  ಅದೇ ಜೋಶ್‌ನೊಂದಿಗೆ ಈಗ ಚಿನ್ನದ ಉದ್ದಿಮೆಗೆ ಕಾಲಿಟ್ಟಿದ್ದಾರೆ ನಟಿ ಸಮಂತಾ. ನಟಿಯ ಈ ಹೊಸ ಉದ್ದಿಮೆಗೆ ಪತಿ ನಾಗಚೈತನ್ಯ ಸಹ ಪಾಲುದಾರರಂತೆ.

  English summary
  Actress Samantha Akkineni starting Gold business. She already owns a fashion brand named Saaki.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X