ಚೈತು- ಸಮಂತಾ ಡಿವೋರ್ಸ್ ಕ್ಯಾನ್ಸಲ್ ಮಾಡಿಸ್ತಾರಾ ನಾಗಾರ್ಜುನ? ಅಸಲಿಗೆ ನಡೆದಿದ್ದು ಏನು?
ನಟಿ ಸಮಂತಾ ಮಯೋಸೈಟಿಸ್ ಎನ್ನುವ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಆರೋಗ್ಯ ಸಮಸ್ಯೆ ನಡುವೆಯೂ 'ಯಶೋದ' ಚಿತ್ರದ ಡಬ್ಬಿಂಗ್ ಮಾಡಿದ್ದರು. ಸಿನಿಮಾ ಪ್ರಚಾರದಲ್ಲೂ ಭಾಗಿ ಆಗಿದ್ದಾರೆ. ಆಕೆ ಆದಷ್ಟು ಬೇಗ ಚೇತರಿಸಿಕೊಳ್ಳಬೇಕು ಎಂದು ಅಭಿಮಾನಿಗಳು, ಆಪ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಆದರೆ ಈ ಬಗ್ಗೆ ಸ್ಯಾಮ್ ಮಾಜಿ ನಾಗ ಚೈತನ್ಯ ಮಾತ್ರ ಸ್ಪಂದಿಸದೇ ಇರುವುದು ಆಕೆಯ ಅಭಿಮಾನಿಗಳಿಗೆ ಬೇಸರ ತಂದಿದೆ.
ನಾಗ ಚೈತನ್ಯಾ ಆಸ್ಪತ್ರೆಗೆ ಹೋಗಿ ಸಮಂತಾ ಆರೋಗ್ಯ ವಿಚಾರಿಸಿದ್ದಾರೆ. ಫೋನ್ ಮಾಡಿ ಮಾತನಾಡಿ ಧೈರ್ಯ ತುಂಬಿದ್ದಾರೆ ಎನ್ನುವ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರ್ತಿದೆ. ಇದೆಲ್ಲದರ ನಡುವೆ ಖುದ್ದು ನಾಗಾರ್ಜುನ ಪುತ್ರ ನಾಗಚೈತನ್ಯಾ ಹಾಗೂ ಸಮಂತಾ ಡೈವೋರ್ಸ್ ರದ್ದು ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿದೆ. ಮಾಜಿ ಪತ್ನಿಯನ್ನು ಈ ಸ್ಥಿತಿಯಲ್ಲಿ ನೋಡಿ ತಡೆದುಕೊಳ್ಳಲು ಸಾಧ್ಯವಾಗದೇ ಚೈತು ಆಕೆಯನ್ನು ಯೋಗಕ್ಷೇಮ ವಿಚಾರಿಸಿದ್ದಾರೆ. ಸ್ಯಾಮ್ ಪೋಷಕರ ಜೊತೆಗೂ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಡೈವೋರ್ಸ್ ಕ್ಯಾನ್ಸಲ್ ಮಾಡಿಕೊಳ್ಳುಬೇಕು ಇಂತಹ ಸಮಯದಲ್ಲಿ ಪತ್ನಿ ಪಕ್ಕ ಇರಬೇಕು ಎಂದು ಮಗನಿಗೆ ನಾಗ್ ಸಲಹೆ ನೀಡಿದ್ದಾರೆ ಎನ್ನುವ ವದಂತಿ ಕೇಳಿಬರ್ತಿದೆ.

ಸಮಂತಾ ಆಪ್ತರ ಪ್ರಚಾರ ಇದೆಲ್ಲಾ ಸುಳ್ಳು ಎಂದು ಗೊತ್ತಾಗುತ್ತಿದೆ. ಸದ್ಯಕ್ಕೆ ನಾಗ ಚೈತನ್ಯಾ ಆಗಲಿ ಅವರ ಕುಟುಂಬ ಆಗಲಿ ಸಮಂತಾನ ಭೇಟಿ ಮಾಡಿಲ್ಲ. ಫೋನ್ ಮಾಡಿ ಯೋಗಕ್ಷೇಮ ವಿಚಾರಿಸಿರಬಹುದು ಅಷ್ಟೇ, ಅದು ಬಿಟ್ಟರೆ ಭೇಟಿ ಆಗಿದ್ದಕ್ಕೆ ಯಾವುದೇ ಆಧಾರ ಇಲ್ಲ ಎನ್ನಲಾಗ್ತಿದೆ. ಇನ್ನು ಡೈವೋರ್ಸ್ ಕ್ಯಾನ್ಸಲ್ ಎನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು ಎನ್ನುತ್ತಿದ್ದಾರೆ. ಸಮಂತಾ ನಟನೆಯ 'ಯಶೋದ' ಈ ವಾರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗುತ್ತಿದೆ. ಎಲ್ಲಾ ಕಡೆ ಹೋಗಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ತೆಲುಗು ಹಾಗೂ ತಮಿಳಿನಲ್ಲಿ ಒಂದೊಂದು ಸಂದರ್ಶನ ನೀಡಿದ್ದಾರೆ.

'ಯಶೋದ' ಸಿನಿಮಾ ಪ್ರಚಾರಕ್ಕಾಗಿ ನೀಡಿದ ಸಂದರ್ಶನದಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾತನಾಡುತ್ತಾ ಸಮಂತಾ ಕಣ್ಣೀರು ಹಾಕಿದ್ದರು. ಸ್ಯಾಮ್ ಮಯೋಸೈಟಿಸ್ ಎನ್ನುವ ದೀರ್ಘಕಾಲದ ಸ್ನಾಯು ರೋಗದಿಂದ ಬಳಲುತ್ತಿದ್ದಾರೆ. ಕಳೆದ 3 ತಿಂಗಳಿನಿಂದ ನಾನು ಹೋರಾಟ ನಡೆಸುತ್ತಿದ್ದೇನೆ. ಈ ಹೋರಾಟವನ್ನು ಯಾವತ್ತು ಕೈ ಬಿಡುವುದಿಲ್ಲ ಎಂದಿದ್ದರು. ಕೆಲವರು ನಾನು ಸತ್ತೇ ಹೋಗುತ್ತೇನೆ ಎನ್ನುವಂತೆ ಸುದ್ದಿ ಬರೆಯುತ್ತಿದ್ದಾರೆ. "ನಾನು ಇನ್ನು ಸತ್ತಿಲ್ಲ, ಶೀಘ್ರದಲ್ಲಿ ಸಾಯುವುದು ಇಲ್ಲ" ಎಂದು ಸುಳ್ಳು ಸುದ್ದಿ ಹರಡಿದವರ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು.
ನಾಗಚೈತನ್ಯಾ ಹಾಗೂ ಸಮಂತಾ ಏಳೆಂಟು ವರ್ಷ ಪ್ರೀತಿಸಿ ಪೋಷಕರ ಒಪ್ಪಿಗೆ ಪಡೆದು 2017ರಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದರು. 4 ಸಿನಿಮಾಗಳಲ್ಲೂ ಇಬ್ಬರು ಒಟ್ಟಾಗಿ ನಟಿಸಿದ್ದಾರೆ. ಆದರೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಲ ಭಿನ್ನಾಭಿಪ್ರಾಯಗಳಿಂದ ಇಬ್ಬರೂ ಡೈವೋರ್ಸ್‌ಗೆ ಮುಂದಾಗಿರುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಆ ನಂತರ ನಾಗ ಚೈತನ್ಯ ಅಷ್ಟಾಗಿ ಈ ಬಗ್ಗೆ ಮಾತನಾಡಲಿಲ್ಲ. ಸಮಂತಾ ಮಾತ್ರ ಪರೋಕ್ಷವಾಗಿ ಮಾಜಿ ಪತಿ ಚೈತನ್ಯಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದರು.


Click it and Unblock the Notifications











