ಟ್ಯಾಟೂ ಅಳಿಸಲು ಸಮಂತಾ ಸಜ್ಜು: ಮೈ ತುಂಬೆಲ್ಲಾ ನಾಗ ಚೈತನ್ಯ ಟ್ಯಾಟೂಗಳೇ!

ಸಮಂತಾ ಮತ್ತು ನಾಗ ಚೈತನ್ಯ ನಾಲ್ಕು ವರ್ಷಗಳ ದಾಂಪತ್ಯಕ್ಕೆ ವಿಚ್ಛೇದನದ ಮೂಲಕ ಅಂತ್ಯ ಹಾಡಿದ್ದಾರೆ. ಟಿ-ಟೌನ್‌ನಲ್ಲಿ ಅತ್ಯಂತ ಪ್ರೀತಿ ಪಾತ್ರ ದಂಪತಿಗಳು ಎನಿಸಿಕೊಂಡಿದ್ದ ಈ ಜೋಡಿ ಬೇರೆ ಆಗಿರುವುದು ನಿಜಕ್ಕೂ ಶಾಕಿಂಗ್ ಸಂಗತಿಯೇ ಆಗಿತ್ತು. ಇವರು ಒಬ್ಬರನ್ನೊಬ್ಬರು ಅತ್ಯಂತ ಪ್ರೀತಿಸುತ್ತಿದ್ದರು ಎನ್ನುವುದಕ್ಕೆ ಅವರು ಹಾಕಿಸಿಕೊಂಡಿರುವ ಟ್ಯಾಟೂಗಳೇ ಸಾಕ್ಷಿ ಆಗಿವೆ.

Recommended Video

ವಿಚ್ಛೇದನದ ವಿಷಯ ಬಿಟ್ಟಾಕಿ, ಕ್ರಿಪ್ಟೋ ಕರೆನ್ಸಿಯಲ್ಲಿ ದುಡ್ಡು ಹಾಕಿ

ಆದರೆ ಈಗ ಸಮಂತಾ ತಮ್ಮ ಟ್ಯಾಟೂಗಳನ್ನು ಅಳಿಸಿ ಹಾಕಲು ಮುಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಲಿದೆ. ಸಮಂತಾ ಮೈ ಮೇಲೆ ಇರುವ ಟ್ಯಾಟೂಗಳೆಲ್ಲವೂ ಪತಿಗೆ ನಾಗ ಚೈತನ್ಯನಿಗೆ ಮತ್ತು ತಮ್ಮ ಪ್ರೀತಿಗೆ ಸಂಬಂಧ ಪಟ್ಟ ಟ್ಯಾಟೂಗಳು. ಈಗ ಇಬ್ಬರೂ ಬೇರೆ ಆಗಿರುವ ಕಾರಣಕ್ಕೆ ಆ ಟ್ಯಾಟೂಗಳನ್ನು ತೆಗೆದು ಹಾಕಲು ಸಮಂತಾ ಮುಂದಾಗಿದ್ದಾರಂತೆ.

ಮದುವೆಯಾಗುವ ಮೊದಲು ಸಮಂತಾ, ಚಾಯ್ ಜೊತೆ ಹಲವು ವರ್ಷಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಮತ್ತು ಅವರಿಬ್ಬರು ಅನ್ಯೋನ್ಯವಾಗಿ ಇದ್ದರು ಎನ್ನುವುದಕ್ಕೆ ಅವಳಿ ಟ್ಯಾಟೂಗಳು ಪುರಾವೆಯಾಗಿವೆ. ಅವರ ಕೈ ಮಣಿಕಟ್ಟಿನ ಮೇಲಿನ ಹಚ್ಚೆ ಇದೆ. ಈ ಅಚ್ಚೆಯನ್ನೂ ಸಮಂತಾ ಮತ್ತು ನಾಗಚೈತನ್ಯ ಇಬ್ಬರೂ ಒಂದೇ ರೀತಿಯಲ್ಲಿ ಹಾಕಿಸಿಕೊಂಡಿದ್ದಾರೆ. ಇದನ್ನು 'ವೈಕಿಂಗ್' ಸಂಕೇತ ಎಂದು ಕರೆಯಲಾಗುತ್ತದೆ. ಈ ಒಂದೇ ರೀತಿಯ ಹಚ್ಚೆಯನ್ನು ಹಲವಾರು ಸಂದರ್ಭಗಳಲ್ಲಿ ಇಬ್ಬರೂ ಕೂಡ ತೋರಿಸಿಕೊಂಡಿದ್ದಾರೆ.

ಮದುವೆ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡಿದ್ದ ನಾಗ್!

ಈಗ ಬೇರೆ ಆಗಿರುವ ದಂಪತಿಗಳು ಪರಸ್ಪರ ಪ್ರೀತಿಸುತ್ತಿದ್ದು, ಹತ್ತು ವರ್ಷಗಳು ಪ್ರೀತಿ ಮಾಡಿ ನಂತರ 2017 ರಲ್ಲಿ ಮದುವೆ ಆದರು. ಆ ಬಳಿಕ ಸಮಂತಾ ಮತ್ತು ನಾಗ ಚೈನತ್ಯ ಮತ್ತೊಂದು ಟ್ಯಾಟೂ ಸುದ್ದಿ ಆಯ್ತು. ಇಬ್ಬರ ದಾಂಪತ್ಯದ ಬಾಂಧವ್ಯ ತೋರುವ ಟ್ಯಾಟೂ ಇದಾಗಿದೆ. ಮದುವೆ ಬಳಿಕ 'ವೈಕಿಂಗ್' ಚಿಹ್ನೆಯ ಕೆಳಗೆ ನಾಗ ಚೈತನ್ಯ ತಮ್ಮ ಮದುವೆಯ ದಿನಾಂಕವನ್ನು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದಿಷ್ಟೇ ಅಲ್ಲಾ ಸಮಂತಾ ತಮ್ಮ ಪ್ರೀತಿ ಸಂಕೇತ ಒಂದನ್ನು ತಮ್ಮ ಬೆನ್ನಿನ ಮೇಲೆ ಹಚ್ಚೆ ಒತ್ತಿಸಿಕೊಂಡಿದ್ದಾರೆ.

ಬೆನ್ನಿನ ಮೇಲೆ ಪ್ರೀಯ ಸಂಕೇತದ ಟ್ಯಾಟೂ!

ಮದುವೆ ಆದ ಹಲವು ದಿನಗಳ ನಂತರ ಸಮಂತಾ ಬೆನ್ನಲ್ಲಿ ಮತ್ತೊಂದು ಟ್ಯಾಟೂ ಕಾಣಿಸಿತು. ಅದುವೆ 'YMC' ಎನ್ನುವ ಅಕ್ಷರಗಳು. ಇದು ಸಮಂತಾ ಮತ್ತು ನಾಗ್ ಅವರ ಮೊದಲ ಸಿನಿಮಾ 'ಯೇ ಮಾಯಾ ಚೇಸಾವೆ' ಚಿತ್ರದ ಸಂಕೇತ ಆಗಿದೆ. ಇದೇ ಚಿತ್ರದಲ್ಲಿ ಮೊದಲ ಬಾರಿಗೆ ಇಬ್ಬರು ಒಟ್ಟಿಗೆ ಅಭಿನಯಿಸಿದ್ದರು. 'ಯೇ ಮಾಯಾ ಚೇಸಾವೆ' ಚಿತ್ರದ ಸೆಟ್‌ನಲ್ಲಿ ಸಮಂತಾ ಮೊದಲ ಬಾರಿಗೆ ನಾಗ ಚೈತನ್ಯ ಅವರನ್ನು ಭೇಟಿಯಾದರು. ಅಲ್ಲಿಂದಲೇ ಇವರ ನಡುವೆ ಪ್ರೀತಿ ಹುಟ್ಟಿದೆಯಂತೆ. ಹಾಗಾಗಿ ಆ ಚಿತ್ರದ ಹೆಸರನ್ನು ಸಮಂತಾ ಬೆನ್ನಿನ ಮೇಲೆ ಹಾಕಿಸಿಕೊಂಡಿದ್ದಾರೆ.

ಸಮಂತಾ ಸೀಕ್ರೇಟ್ ಟ್ಯಾಟೂನಲ್ಲಿ ನಾಗ ಚೈತನ್ಯ ಹೆಸರು!

ಇದಿಷ್ಟೇ ಅಲ್ಲಾ ಸಮಂತಾಳ ಮತ್ತೊಂದು ಅತ್ಯಮೂಲ್ಯ ಟ್ಯಾಟೂವನ್ನು 2019 ರಲ್ಲಿ ಸಾರ್ವಜನಿಕವಾಗಿ ಬಹಿರಂಗ ಪಡಿಸಿದರು. ಈ ಟ್ಯಾಟೂವನ್ನು ಸಮಂತಾ ಸೀಕ್ರೇಟ್ ಆಗಿ ಇಟ್ಟಿದ್ದರು. ಆ ಟ್ಯಾಟೂ ನಾಗ ಚೈತನ್ಯ ಹೆಸರು, ಪುಟ್ಟದಾಗಿ 'ಚೈ' ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಬಗ್ಗೆ ಪೋಸ್ಟ್ ಹಾಕಿದ ಸಮಂತಾ, "ಲೈವಿಂಗ್ ಮೈ ಬೆಸ್ಟ್ ಲೈಫ್, ನಾನು ಹೊಂದಿರುವ ಏಕೈಕ ಹಚ್ಚೆ, ಕೊನೆಗೂ ಈ ಟ್ಯಾಟೂವನ್ನು ತೋರಿಸುತ್ತಿದ್ದೇನೆ, ನನ್ನ ಪತಿ ನನ್ನ ಪ್ರಪಂಚ." ಎಂದು ಬರೆದುಕೊಂಡಿದ್ದರು.

ಟ್ಯಾಟೂ ಅಳಿಸಲು ಮುಂದಾದ ನಟಿ ಸಮಂತಾ!

ಟ್ಯಾಟೂ ಅಳಿಸಲು ಮುಂದಾದ ನಟಿ ಸಮಂತಾ!

ಆದರೆ ಈಗ ಇದೀಗ ಸಮಂತಾ ಮತ್ತು ನಾಗ ಚೈತನ್ಯ ಇಬ್ಬರೂ ಕೂಡ ದೂರ ಆಗಿದ್ದಾರೆ. ಅಧಿಕೃತವಾಗಿ ವಿಚ್ಛೇದನವನ್ನು ಕೂಡ ಪಡೆದುಕೊಂಡಿದ್ದಾರೆ. ಹಾಗಾಗಿ ಸಮಂತಾ ಈ ಟ್ಯಾಟೂಗಳನ್ನು ತೆಗೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಸಮಂತಾ ಇನ್ನೂ ಏನೂ ಮಾತನಾಡಿಲ್ಲ. ಅಥವಾ ಟ್ಯಾಟೂ ತೆಗೆಸಿರುವ ಫೊಟೋವನ್ನು ಕೂಡ ಹಂಚಿಕೊಂಡಿಲ್ಲ. ಹಾಗಂತ ಟ್ಯಾಟೂ ಇರುವ ಫೋಟೊಗಳನ್ನು ಕೂಡ ಹಂಚಿಕೊಂಡಿಲ್ಲ. ಸಿನಿಮಾ ಪರದೆ ಮೇಲೆ ಬಂದಾಗ ಮಾತ್ರ ಮೇಕಪ್‌ನಿಂದ ಟ್ಯಾಟೂಗಳನ್ನು ಮುಚ್ಚಲಾಗುತ್ತಿದೆ.

More from Filmibeat

English summary
Samantha Decided To Remove Tattoo Related To Ex Husband Naga Chaitanya Soon
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X