'ದಿ ಫ್ಯಾಮಿಲಿ ಮ್ಯಾನ್ 2'ರ ಪ್ರೀಕ್ವೆಲ್‌ ನಲ್ಲಿ ಸಮಂತಾ ರೋಲ್ ಏನು?

2019ರಲ್ಲಿ ಬಿಡುಗಡೆ ಆಗಿದ್ದ 'ದಿ ಫ್ಯಾಮಿಲಿ ಮ್ಯಾನ್​' ವೆಬ್​ ಸಿರೀಸ್​ ಸಿಕ್ಕಾಪಟ್ಟೆ ಜನಮೆಚ್ಚುಗೆ ಗಳಿಸಿತ್ತು. ಮನೋಜ್​ ಬಾಜಪೇಯ್​, ಪ್ರಿಯಾಮಣಿ ಮುಂತಾದವರು ಅದರಲ್ಲಿ ಮುಖ್ಯಭೂಮಿಕೆ ನಿಭಾಯಿಸಿದ್ದರು. ರಾಜ್​ ಮತ್ತು ಡಿಕೆ ನಿರ್ದೇಶನದ ಆ ಸಿರೀಸ್​ಗೆ ಸೀಕ್ವೆಲ್​ ಬರಲಿದೆ ಎಂದು ಹೇಳಿದಾಗಲೇ ಪ್ರೇಕ್ಷಕರು ಥ್ರಿಲ್​ ಆಗಿದ್ದರು. ಅದರಂತೆ 'ದಿ ಫ್ಯಾಮಿಲಿ ಮ್ಯಾನ್​ 2' ಓಟಿಟಿಯಲ್ಲಿ ರಿಲೀಸ್ ಆಗಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದು . ವಿಶೇಷ ಎಂದರೆ, ಫ್ಯಾಮಿಲಿ ಮ್ಯಾನ್ 2ನಲ್ಲಿ ನಟಿ ಸಮಂತಾ ಕಾಣಿಸಿಕೊಂಡು ಎಲ್ಲರಿಗಿಂತ ತುಸು ಹೆಚ್ಚೆ ಸುದ್ದಿಯಾದರೂ.

ಸಮಂತಾಗಾಗಿಯೇ ಅದೆಷ್ಟೋ ಮಂದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್ ಅನ್ನು ಮುಗಿಬಿದ್ದು ನೋಡಿದ್ದರು. ಫ್ಯಾಮಿಲಿ ಮ್ಯಾನ್ 2 ನಲ್ಲಿ ಸಮಂತಾ ಬೋಲ್ಡ್ ಪಾತ್ರಕ್ಕೆ ಎಲ್ಲರೂ ಫಿದಾ ಆಗಿದ್ದರೂ. ಫ್ಯಾಮಿಲಿ ಮ್ಯಾನ್ 2 ನಿಂದಲೇ ಬಾಲಿವುಡ್‌ನಿಂದ ಹೆಚ್ಚೆಚ್ಚು ಅವಕಾಶಗಳನ್ನು ಪಡೆದುಕೊಳ್ಳುತ್ತಿರುವ ಸಮಂತಾ ಇದೀಗಾ ಫ್ಯಾಮಿಲಿ ಮ್ಯಾನ್ 2 ಪ್ರೀಕ್ವೆಲ್‌ಗೆ ಸಜ್ಜಾಗುತ್ತಿದ್ದಾರೆ. ಹೌದು ಫ್ಯಾಮಿಲಿ ಮ್ಯಾನ್ 2 ಪ್ರೀಕ್ವೆಲ್ ಸಿದ್ಧವಾಗುತ್ತಿದೆ. ಆದರೇ ಅದಕ್ಕೂ ಮುನ್ನ ಸಮಂತಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದೆ. ಬಾಲಿವುಡ್‌ನ ಖ್ಯಾತ ಮ್ಯಾಗಝಿನ್ ಕೂಡ ಈ ಬಗ್ಗೆ ಇತ್ತೀಚೆಗೆ ವರದಿ ಯೊಂದನ್ನು ಪ್ರಸಾರ ಮಾಡಿದೆ.

ದಿ ಫ್ಯಾಮಿಲಿ ಮ್ಯಾನ್​ 2 ನಲ್ಲಿ ಸಮಂತಾ ಎಲ್​ಟಿಟಿಇ ಸಂಘಟನೆಯ ಸದಸ್ಯಳಾಗಿ ಕಾಣಿಸಿಕೊಂಡಿದ್ದರು. ಕಥೆಯ ಬಹುಪಾಲು ದೃಶ್ಯಗಳು ತಮಿಳುನಾಡಿನಲ್ಲಿ ಚಿತ್ರೀಕರಣ ವಾಗಿತ್ತು. ತನ್ನ ನೈಜ ಅಭಿನಯ, ಬೋಲ್ಡ್ ದೃಶ್ಯಗಳಲ್ಲಿ ನಟನೆ ಕಂಡು ಸಮಂತಾ ಅವರನ್ನು ಹಲವರು ಹಾಡಿ ಹೊಗಳಿದ್ದರು. ಇಷ್ಟೊಂದು ಹೈಪ್ ಕ್ರೀಯೇಟ್ ಮಾಡಿದ್ದ ದಿ ಫ್ಯಾಮಿಲಿ ಮ್ಯಾನ್​ 2 ಈಗ ಪ್ರೀಕ್ವೆಲ್ ಆಗಿ ಬರಲು ಸಜ್ಜಾಗುತ್ತಿದೆ. ದಿ ಫ್ಯಾಮಿಲಿ ಮ್ಯಾನ್​ 2 ಈಗ ಪ್ರೀಕ್ವೆಲ್ ರಾಜಿ (ಸಮಂತಾ) ಅವರ ಜೀವನದ ಸುತ್ತ ಕೇಂದ್ರೀಕೃತವಾಗಿರುತ್ತದೆ ಎಂದು ಹೇಳಲಾಗುತ್ತಿದೆ.

Samantha is set to star in The Family Man season 2 prequel spin-off series.

ದಿ ಫ್ಯಾಮಿಲಿ ಮ್ಯಾನ್​ 2 ಈಗ ಪ್ರೀಕ್ವೆಲ್ ನಲ್ಲಿ ಸಂಮತಾ ಪಾತ್ರದಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಕೂಡ ಇರಲಿವೆಯಂತೆ. ಕೊಂಚ ಡಿಫರೆಂಟ್ ಆಗಿ ಕೂಡ ಸಮಂತಾ ದಿ ಫ್ಯಾಮಿಲಿ ಮ್ಯಾನ್​ 2 ಈಗ ಪ್ರೀಕ್ವೆಲ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದರ ತಯಾರಿಗಾಗಿಯೇ ಸಮಂತಾ ಈಗ ಸಾಕಷ್ಟು ಸಮಯ ಜಿಮ್‌ನಲ್ಲೆ ಕಾಲ ಕಳೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. 2022ರ ಆರಂಭದಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಜಿಮ್ ವರ್ಕ್‌ಔಟ್ ಬಗ್ಗೆಯೇ ಹೆಚ್ಚೆಚ್ಚು ವೀಡಿಯೊಗಳನ್ನು ಶೇರ್ ಮಾಡುತ್ತಿರುವುದನ್ನು ಗಮನಿಸಿದ್ದೇವೆ. ಇದು ಸಮಂತಾ ಅವರ ಹವ್ಯಾಸವೂ ಹೌದು, ಹಾಗೇ ದಿ ಫ್ಯಾಮಿಲಿ ಮ್ಯಾನ್​ 2 ಈಗ ಪ್ರೀಕ್ವೆಲ್ ಗಾಗಿ ತಯಾರಿನೂ ಹೌದು ಎಂಬ ಸುದ್ದಿ ಇದೀಗ ತಿಳಿದು ಬರುತ್ತಿದೆ.

ನಟಿ ಸಮಂತಾ ಮದುವೆ ಬಳಿಕ ಸಿನಿಮಾಗಳಿಂದ ಕೊಂಚ ದೂರವಾಗುತ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಆದರೆ ನಾಗಚೈತನ್ಯ ಜೊತೆಗೆ ವಿಚ್ಚೇದನದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಸಮಂತಾಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಸಮಂತಾ ಕೂಡ ವಿಭಿನ್ನ ಪಾತ್ರಗಳು ಮಾಡಲು ಗ್ರೀನ್‌ ಸಿಗ್ನಲ್ ನೀಡುತ್ತಿದ್ದಾರೆ. ಸಮಂತಾಗೆ ಸೌತ್‌ನಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಕೂಡ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಅಲ್ಲದೇ ಸಮಂತಾ ಅವರಿಗೆ ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆಯಾದ 'ಯಶ್ ರಾಜ್‌ ಫಿಲ್ಸ್ಮ್' ವತಿಯಿಂದ ದೊಡ್ಡ ಆಫರ್‌ ಬಂದಿದೆ. ಹೀಗೇ ಸಾಲು ಸಾಲು ಆಫರ್‌ಗಳು ಸಮಂತಾ ಬಳಿ ಬರುತ್ತಿದ್ದು, ಡಿಫರೆಂಟ್ ಆಗಿರೋ ಪಾತ್ರವನ್ನು ಸಮಂತಾ ಮಾಡಲು ಮುಂದಾಗಿದ್ದಾರೆ, ಹಾಲಿವುಡ್‌ನಲ್ಲೂ ಸದ್ಯದಲ್ಲೆ ಕಮಾಲ್ ಮಾಡಲಿದ್ದಾರೆ ಎಂಬ ಸುದ್ದಿ ಕೂಡ ಕೇಳಿ ಬರುತ್ತಿದೆ.

ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದ ದಿ ಫ್ಯಾಮಿಲಿ ಮ್ಯಾನ್ 2 ವೆಬ್ ಸೀರಿಸ್‌ನಲ್ಲಿ ಸಮಂತಾ ನಟನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ, ಆ ವೆಬ್ ಸೀರಿಸ್‌ ಸಮಂತಾ ವೃತ್ತಿ ಬದುಕಿಗೆ ಭಾರಿ ತಿರುವು ನೀಡಿತು. ಇದು ಕೂಡ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಲು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ. ಇನ್ನು ನಟಿ ಸಮಂತಾ ಅವರ ಬಳಿ ಇನ್ನೂ 'ಯಶೋಧಾ', 'ಶಕುಂತಲಂ' ಮತ್ತು 'ಕಾತು ವಕುಲ ರೆಂಡು ಕಾದಲ್' ಎಂಬ ಮೂರು ಚಿತ್ರಗಳಿವೆ . 'ಕಾತು ವಾಕುಲ ರೆಂಡು ಕಾದಲ್' ಚಿತ್ರದಲ್ಲಿ ನಟಿ ಸಮಂತಾ ಅವರ ಜೊತೆಯಲ್ಲಿ ನಟಿ ನಯನತಾರಾ ಮತ್ತು ನಟ ವಿಜಯ್ ಸೇತುಪತಿ ತೆರೆಯನ್ನು ಹಂಚಿಕೊಳ್ಳಲಿದ್ದಾರೆ ಎಂಬುದು ಇದೀಗ ಗೊತ್ತಾಗಿದೆ. ಈ ಸಿನಿಮಾಗಾಗಿಯೂ ಸಮಂತಾ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ.

More from Filmibeat

English summary
Samantha who is pumped with the response Family Man 2 had garnered is excited about the prequel.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X