ಸ್ಟಾರ್ ನಟನೊಡನೆ ಬಾಲಿವುಡ್‌ಗೆ ಕಾಲಿಡಲಿದ್ದಾರೆ ಸಮಂತಾ!

ನಟಿ ಸಮಂತಾ ನಟನೆ ಆರಂಭಿಸಿ 12 ವರ್ಷಗಳಾದವು. ಈವರೆಗೆ ಹಲವು ನೆನಪುಳಿಯುವ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚಿನ ಕೆಲ ವರ್ಷಗಳಲ್ಲಿಯಂತೂ ಸಮಂತಾರ ವೃತ್ತಿಯ ಗ್ರಾಫು ದೊಡ್ಡ ಮಟ್ಟದ ಏರಿಕೆ ಕಂಡಿದೆ.

ಇಷ್ಟು ವರ್ಷ ಚಿತ್ರರಂಗದಲ್ಲಿದ್ದರೂ ಸಮಂತಾ ಒಂದೂ ಬಾಲಿವುಡ್‌ ಸಿನಿಮಾದಲ್ಲಿ ನಟಿಸಿಲ್ಲ. 'ಏಕ್ ದಿವಾನಾ ಥಾ' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದು ಬಿಟ್ಟರೆ ಪೂರ್ಣ ಪ್ರಮಾಣದ ಬಾಲಿವುಡ್ ಸಿನಿಮಾ ಮಾಡಿಲ್ಲ. ಆದರೆ ಈಗ ಅದಕ್ಕೆ ಸಮಯ ಒದಗಿ ಬಂದಿದೆ.

ಸಮಂತಾ ಈಗಾಗಲೇ 'ದಿ ಫ್ಯಾಮಿಲಿ ಮ್ಯಾನ್' ಹಿಂದಿ ವೆಬ್ ಸರಣಿಯಲ್ಲಿ ನಟಿಸಿ ಹಿಂದಿ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ. ಇದೀಗ ಪೂರ್ಣ ಪ್ರಮಾಣದ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಬಾಲಿವುಡ್‌ನ ಸ್ಟಾರ್ ನಟನೊಂದಿಗೆ ಹಿಂದಿ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಲಿದ್ದಾರೆ ಸಮಂತಾ.

ಕಳೆದ ವರ್ಷವೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಮಂತಾ, ''ನಾನು ಬಹಳ ವರ್ಷಗಳಿಂದಲೂ ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ಈ ವರೆಗೆ ನನಗೆ ಬಾಲಿವುಡ್‌ನಿಂದ ಆಫರ್‌ ಬಂದಿರಲಿಲ್ಲ. ಆದರೆ ಈಗ ಆಫರ್‌ಗಳು ಬರುತ್ತಿವೆ. ಬಾಲಿವುಡ್‌ ಪ್ರವೇಶಿಸಲು ಇದು ಸೂಕ್ತ ಸಮಯ ಎನಿಸುತ್ತದೆ'' ಎಂದಿದ್ದರು. ಅದರಂತೆ ಇದೀಗ ಬಾಲಿವುಡ್‌ನಿಂದ ದೊಡ್ಡ ಆಫರ್‌ ಒಂದು ಸಮಂತಾರನ್ನು ಅರಸಿ ಬಂದಿದ್ದು ಭರ್ಜರಿಯಾಗಿಯೇ ಬಾಲಿವುಡ್ ಪ್ರವೇಶ ಮಾಡಲಿದ್ದಾರೆ ಸ್ಯಾಮ್.

ವರುಣ್ ಧವನ್ ಜೊತೆ ಸಂಮತಾ ಎಂಟ್ರಿ!?

ವರುಣ್ ಧವನ್ ಜೊತೆ ಸಂಮತಾ ಎಂಟ್ರಿ!?

ದೊಡ್ಡ ಸಿನಿಮಾ ಬ್ಯಾನರ್‌ ಒಂದರ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸಲಿದ್ದಾರೆ. ಆ ಸಿನಿಮಾದಲ್ಲಿ ಬಾಲಿವುಡ್‌ನ ಸ್ಟಾರ್ ಯುವನಟ ವರುಣ್ ಧವನ್ ನಾಯಕಾಗಿರುತ್ತಾರೆ ಎನ್ನಲಾಗುತ್ತಿದೆ. ಸಿನಿಮಾಕ್ಕಾಗಿ ಈಗಾಗಲೇ ಒಪ್ಪಂದ ಮುಗಿದಿದ್ದು ಕೆಲವೇ ದಿನಗಳಲ್ಲಿ ಫೋಟೊ ಶೂಟ್ ಸಹ ನಡೆಯಲಿದೆ. ಇದಕ್ಕೆ ಸಾಕ್ಷಿಯೆಂಬಂತೆ ನಟ ವರುಣ್ ಧವನ್ ಹಾಗೂ ಸಮಂತಾ ಒಟ್ಟಿಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ.

ತಾಪ್ಸಿ ಪನ್ನು ನಿರ್ಮಾಣದ ಸಿನಿಮಾದಲ್ಲಿ ಸ್ಯಾಮ್

ತಾಪ್ಸಿ ಪನ್ನು ನಿರ್ಮಾಣದ ಸಿನಿಮಾದಲ್ಲಿ ಸ್ಯಾಮ್

ಸಮಂತಾ ಕೇವಲ ಒಂದು ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿಲ್ಲ ಬದಲಿಗೆ ಎರಡು ಆಫರ್‌ಗಳು ಅವರ ಮುಂದಿವೆ. ಬಾಲಿವುಡ್‌ನ ಡೇರಿಂಗ್ ನಟಿ ಎಂದೇ ಹೆಸರಾಗಿರುವ ತಾಪ್ಸಿ ಪನ್ನು ಸಿನಿಮಾ ಒಂದನ್ನು ನಿರ್ಮಾಣ ಮಾಡುತ್ತಿದ್ದು ಆ ಸಿನಿಮಾದಲ್ಲಿಯೂ ಸಮಂತಾ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ತಾಪ್ಸಿ ಪನ್ನು, ''ಸಮಂತಾಗೆ ನಾನೊಂದು ಆಫರ್ ಕೊಟ್ಟಿದ್ದೇನೆ ಆ ಆಫರ್‌ ಅನ್ನು ಆಕೆ ನಿರಾಕರಿಸುವಂತಿಲ್ಲ'' ಎಂದಿದ್ದರು. ತಾಪ್ಸಿ ಪನ್ನು ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಸಮಂತಾ ಜೊತೆಗೆ ತಾಪ್ಸಿ ಸಹ ಮುಖ್ಯ ಪಾತ್ರದಲ್ಲಿರಲಿದ್ದಾರೆ.

ಹಾಲಿವುಡ್ ಸಿನಿಮಾದಲ್ಲಿ ಸಮಂತಾ!

ಹಾಲಿವುಡ್ ಸಿನಿಮಾದಲ್ಲಿ ಸಮಂತಾ!

ಸಮಂತಾ ಕೇವಲ ಬಾಲಿವುಡ್‌ ಮಾತ್ರವಲ್ಲ ಹಾಲಿವುಡ್ ಸಿನಿಮಾ ಒಂದರಲ್ಲಿಯೂ ನಟಿಸುತ್ತಿದ್ದಾರೆ. ಹಾಲಿವುಡ್ ನಿರ್ಮಾಣ ಸಂಸ್ಥೆಯು ಭಾರತೀಯ ನಿರ್ಮಾಣ ಸಂಸ್ಥೆಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿರುವ ಇಂಗ್ಲಿಷ್ ಸಿನಿಮಾ ಒಂದರಲ್ಲಿ ಸಮಂತಾಗೆ ಪ್ರಮುಖ ಪಾತ್ರವಿದೆ. ತಿಮೇರಿ ಎನ್ ಮುರಾರಿ ಎಂಬುವರು ರಚಿಸಿರುವ 2004 ರ ಕಾದಂಬರಿ 'ಅರೇಂಜ್‌ಮೆಂಟ್ಸ್ ಆಫ್ ಲವ್' ಕತೆಯನ್ನು ಹಾಲಿವುಡ್ ನಿರ್ದೇಶಕ ಫಿಲಿಫ್ ಜಾನ್ ಅದೇ ಹೆಸರಲ್ಲಿ ತೆರೆಗೆ ತರುತ್ತಿದ್ದು ಸಿನಿಮಾದಲ್ಲಿ ಸಮಂತಾ ದ್ವಿಲಿಂಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಬಗ್ಗೆ ಸಮಂತಾಗೆ ಭಾರಿ ನಿರೀಕ್ಷೆಗಳಿವೆ.

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಹಲವು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ಇವುಗಳ ಹೊರತಾಗಿ ಸಮಂತಾ ನಟಿಸಿರುವ 'ಶಾಕುಂತಲಮ್' ಸಿನಿಮಾ ಕೆಲವೇ ತಿಂಗಳಲ್ಲಿ ಬಿಡುಗಡೆ ಆಗಲಿದೆ. ತಮಿಳಿನ 'ಕಾತುವಾಕು ರೆಂಡು ಕಾದಲ್' ಸಿನಿಮಾದಲ್ಲಿಯೂ ಸಮಂತಾ ನಟಿಸಿದ್ದು, ಈ ಸಿನಿಮಾದಲ್ಲಿ ಸಮಂತಾ ಜೊತೆಗೆ ನಯನತಾರಾ ಹಾಗೂ ವಿಜಯ್ ಸೇತುಪತಿ ಸಹ ಇದ್ದಾರೆ. ಹರಿ ಶಂಕರ್ ನಿರ್ದೇಶನದ 'ಯಶೋಧ' ಸಿನಿಮಾವನ್ನು ಸಹ ಸಮಂತಾ ಒಪ್ಪಿಕೊಂಡಿದ್ದಾರೆ. ಇವುಗಳ ಜೊತೆಗೆ 'ಪುಷ್ಪ 2' ಸಿನಿಮಾದಲ್ಲಿ ಮತ್ತೊಂದು ಐಟಂ ಹಾಡಿಗೆ ಸಮಂತಾ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Actress Samantha making her grand entry to Bollywood with star actor Varun Dhawan. Samantha acting in two Bollywood movie simultaneously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X