ವಿಚ್ಛೇದನದ ಬಳಿಕ ಸಮಂತಾ ಮೊದಲ ಸಿನಿಮಾ ರಿಲೀಸ್‌ಗೆ ರೆಡಿ!

ಪುಷ್ಪ ಸಿನಿಮಾದ ಬಳಿಕ ನಟಿ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ವಿಚ್ಛೇದನ ಪಡೆದು ವಿವಾದಕ್ಕೀಡಾದ ಬಳಿಕ ನಟಿ ಸಮಂತಾ ಪುಷ್ಪ ಚಿತ್ರದ ಹಾಡಿನ ಮೂಲಕ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಯಶಸ್ಸು ಕೂಡ ಕಾಣುತ್ತಿದ್ದಾರೆ ಸಮಂತಾ.

ಸದ್ಯ ಸಮಂತಾಳನ್ನು ಹುಡುಕಿಕೊಂಡು ಹೆಚ್ಚೆಚ್ಚು ಆಫರ್‌ಗಳು ಬರ್ತಿವೆ. ಅದರಲ್ಲಿ ಐಟಂ ಹಾಡಿಗಳಿಗೂ ಕೂಡ ಬೇಡಿಕೆ ಹೆಚ್ಚಾಗಿದೆ. ಇನ್ನು ವಿಚ್ಛೇದನದ ಬಳಿಕ ಸಮಂತಾ ಸಿನಿಮಾ ಮತ್ತು ಪಾತ್ರಗಳ ಆಯ್ಕೆಯಲ್ಲಿ ಬದಲಾಗಿವೆ ಆಗಿರುವುದು ಕಂಡು ಬರುತ್ತಿದೆ. ಸಿನಿಮಾದ ಜೊತೆ ಜೊತೆಗೆ ದೇಶ, ದೇಶ ಸುತ್ತುತ್ತಾ ಹೊಸ ದಾರಿ ಹಿಡಿದಿದ್ದಾರೆ. ಇನ್ನು ಎಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್​ ಆಗಿ ಪುಷ್ಪ ಹಾಡಿನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಇನ್ನು ಮುಂದೆ ಸ್ಯಾಮ್ ಈ ರೀತಿಯ ಹಾಡು ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಸೂಚನೆ ನೀಡಿದ್ದಾರೆ.

ಇದೀಗ ಸಮಂತಾ ಅಭಿನಯದ ಹೊಸ ಸಿನಿಮಾ ಒಂದು ರಿಲೀಸ್‌ಗೆ ರೆಡಿಯಾಗಿದೆ. ತಮಿಳಿನ 'ಕಾದು ವಾಕುಲ ರೆಂಡು ಕಾದಲ್' ಸಿನಿಮಾ ಈಗ ರಿಲೀಸ್‌ಗೆ ರೆಡಿ ಆಗಿದೆ. ಚಿತ್ರದ ಹೊಸ ಟೈಟಲ್ ಪೋಸ್ಟರ್ ಜೊತೆಗೆ ಸಿನಿಮಾದ ಚಿತ್ರದ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಲಾಗಿದೆ. ಈ ಚಿತ್ರದಲ್ಲಿ ಸಮಂತಾ ಜೊತೆಗೆ ನಯನ ತಾರಾ ಅವರು ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ನಯನ ತಾರ ಭಾವಿ ಪತಿ ವಿಘ್ನೇಶ್​ ಶಿವನ್ ನಿರ್ದೇಶನ ಇದೆ. ವಿಘ್ನೇಶ್​ ಶಿವನ್ ಚಿತ್ರದ ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಏಪ್ರಿಲ್​ನಲ್ಲಿ ಬಿಡುಗಡೆ ಆಗಲಿದೆ.

Samantha Next Movie To Be Release In April
'ಕಾದು ವಾಕುಲ ರೆಂಡು ಕಾದಲ್​' ಸಿನಿಮಾದಲ್ಲಿ ಸಮಂತಾ ಜೊತೆ ನಯನ ತಾರ ಮಾತ್ರವಲ್ಲ, ನಟ ವಿಜಯ್​ ಸೇತುಪತಿ ನಾಯಕ ನಟನಾಗಿ ಅಭಿನಯಿಸಿದ್ದಾರೆ. ಈ ಮೂವರ ಕಾಂಬಿನೇಷನ್ ಇರುವುದರಿಂದ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಫೆಬ್ರವರಿ 11ರಂದು ಈ ಸಿನಿಮಾದ ಟೀಸರ್​ ಬಿಡುಗಡೆ ಆಗಲಿದೆ. ಈ ವಿಚಾರವನ್ನು ಕೂಡ ನಿರ್ದೇಶಕ ವಿಘ್ನೇಶ್​ ಶಿವನ್​ ಘೋಷಿಸಿದ್ದಾರೆ. ವಿಚ್ಛೇದನದ ಬಳಿಕ ರಿಲೀಸ್ ಆಗುತ್ತಿರುವ ಸಮಂತಾಳ ಮೊದಲ ಸಿನಿಮಾ ಇದು. ಹಾಗಾಗಿ ಈ ಚಿತ್ರದಲ್ಲಿ ಸ್ಯಾಮ್ ಪಾತ್ರ ಹೇಗೆ ಇರಲಿದೆ ಎಂದು ನೋಡಲು ಅಭಿಮಾನಿಗಳು ಕಾಯುತ್ತಾ ಇದ್ದಾರೆ.

ಸದ್ಯ ಸಿನಿಮಾಗಿಂತಲೂ ಸಮಂತಾ ಅವರು ಮುಂದಿನ ಹಾಡು ಯಾವುದು ಎನ್ನುವ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಪುಷ್ಷಪ ಚಿತ್ರದ 'ಊ ಅಂಟಾವಾ ಮಾವ, ಊಊ ಅಂಟಾವಾ ಮಾವ' ಹಾಡಿನಲ್ಲಿ ಸಮಂತಾ ಡ್ಯಾನ್ಸ್ ಮಾಡಿರುವ ಪರಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈ ಹಾಡು​ ಸೂಪರ್​ ಹಿಟ್​ ಆದ ಬಳಿಕ ಸಮಂತಾ ಮತ್ತೆ ಯಾವ ಹಾಡಿಗೆ ಹೆಚ್ಚೆ ಹಾಕಿದ್ದಾರೆ, ಎನ್ನುವ ಬಗ್ಗೆ ಕುತೂಹಲ ಮೂಡಿದೆ.

ಸಮಂತಾ ಅವರು ವಿಜಯ್​ ದೇವರಕೊಂಡ ಮತ್ತು ಅನನ್ಯಾ ಪಾಂಡೆ ಅಭಿನಯದ 'ಲೈಗರ್' ಸಿನಿಮಾದಲ್ಲಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿಯೂ, ಪುಷ್ಪ ಚಿತ್ರದ ಹಾಡಿನ ರೀತಿಯ ಐಟಂ ಹಾಡಿನಲ್ಲಿ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

More from Filmibeat

English summary
Samantha Next Movie Kaathu Vaakula Rendu Kadhal Ready To Release
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X