ಸಮಂತಾ ಸೋಷಿಯಲ್ ಮೀಡಿಯಾ ಸಂಭಾವನೆ ವಿಷ್ಯ, 'ಬೀಸ್ಟ್' ಹಾಡಿಗೆ ಅತಿ ಹೆಚ್ಚು ಪೇಮೆಂಟ್!

ನಟಿ ಸಮಂತಾ ಸಿನಿಮಾರಂಗದಲ್ಲಿ 12 ವರ್ಷಗಳನ್ನು ಕಳೆದಿದ್ದಾರೆ. ಆದರೆ ಈಗಲೂ ಸಮಂತಾಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಯಾಕೆಂದರೆ ಸಮಂತಾ ಈಗಲೂ ಕೂಡ ಗ್ಲ್ಯಾಮರ್ ಗೊಂಬೆ. ಸಮಂತಾ ವೈಯಕ್ತಿಕ ಬದುಕಿನಲ್ಲಿ ವಿಚ್ಛೇದನದ ಬಿರುಗಾಳಿ ಬೀಸಿದರು ಕೂಡ, ಆಕೆಯ ವೃತ್ತಿ ಬದುಕಿನಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Recommended Video

ಡಿವೋರ್ಸ್ ಬಳಿಕವೂ ವಿಚಿತ್ರ ಪೋಸ್ಟ್ ಹಾಕುತ್ತಿದ್ದಾರೆ ಸಮಂತಾ

ಅಂದರೆ ಸಮಂತಾ ಮೊದಲಿಗಿಂದತಲೂ ಹೆಚ್ಚೆಚ್ಚು ಸಿನಿಮಾ ಮತ್ತು ಬೇರೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಸಮಂತಾ ಸಿನಿಮಾ ಮಾತ್ರವೇ ಅಲ್ಲ, ಬೇರೆ ನಟಿಯರ ಹಾಗೆ ಪ್ರೋಮೊಷನ್‌ನಲ್ಲೂ ಕೂಡ ದುಡ್ಡು ಮಾಡುತ್ತಾರೆ. ಸಮಂತಾಗೆ ಹೆಚ್ಚಿನ ಅಭಿಮಾನಿ ಬಳಗ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅನುಯಾಯಿಗಳು ಇರುವ ಕಾರಣಕ್ಕೆ ಬ್ರ್ಯಾಂಡ್ ಅಥವಾ ಸಿನಿಮಾದ ಪ್ರಚಾರಗಳಿಗೆ ಹೆಚ್ಚಿನ ಬೇಡಿಕೆ ಇದೆ.

ಬ್ರ್ಯಾಂಡ್ ಕಥೆ ಒಂದುಕಡೆ ಆದರೆ, ಸಮಂತಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಯಲ್ಲಿ ಹಾಕುವ ಪೋಸ್ಟ್‌ಗಳಿಂದಲೇ ಲಕ್ಷ, ಲಕ್ಷ ದುಡಿಯುತ್ತಾರೆ. ಅದು ಕೆಲವೊಮ್ಮೆ ಕೋಟಿ ಕೂಡ ಆಗಿರುತ್ತೆ. ಇತ್ತೀಚೆಗೆ ಸಮಂತಾ ಹೆಚ್ಚಾಗಿ ಪ್ರಚಾರ ಮಾಡಿದ್ದು ತಮಿಳು ನಟ ವಿಜಯ್, ಪೂಜಾ ಹೆಗ್ಡೆ ಅಭಿನಯದ 'ಬೀಸ್ಟ್' ಚಿತ್ರದ ಹಾಡು.

ಸಮಂತಾ 'ಬೀಸ್ಟ್' ಹಾಡು ಪ್ರಚಾರ!

ಸಮಂತಾ 'ಬೀಸ್ಟ್' ಹಾಡು ಪ್ರಚಾರ!

ನಟಿ ಸಮಂತಾ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇತ್ತೀಚೆಗೆ ಹೆಚ್ಚಾಗಿ ಸದ್ದು ಮಾಡುತ್ತಾ ಇರವುದು ಎಂದರೆ, ಅದು 'ಬೀಸ್ಟ್' ಚಿತ್ರದ ಹಾಡು. ನಟ ವಿಜಯ್ ಮತ್ತು ಪೂಜಾ ಹೆಗ್ಡೆ ಚಿತ್ರದ ಈ ಹಾಡಿನಲ್ಲಿ ಡಾನ್ಸ್ ಮಾಡಿದ್ದಾರೆ. ಆದರೆ ಅವರಿಗಿಂತಲೂ ಈ ಹಾಡು ಪದೇ, ಪದೇ ಕಾಣಿಸಿಕೊಂಡಿದ್ದು ಮಾತ್ರ ಸಮಂತಾ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ. ಈ ಹಾಡಿಗೆ ಸ್ಟೆಪ್ ಹಾಕಿದ ಸಮಂತಾ ಅಂದಿನಿಂದ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದಕ್ಕೆ ಸಮಂತಾ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ. ಹಾಗಾಗಿ ನಿಗದಿತ ಸಮಯದವರೆಗೂ ಪೋಸ್ಟ್ ಹಂಕೊಂಡಿದ್ದಾರೆ.

11 ಸೆಕೆಂಡಿನ ವಿಡಿಯೋಗೆ ಕೋಟಿ ಸಂಭಾವನೆ!

'ಬೀಸ್ಟ್' ಚಿತ್ರದ ಅರೇಬಿಕ್ ಹಾಡಿಗೆ 11 ಸೆಕೆಂಡಿನ ವಿಡಿಯೋ ಮಾಡಿದ್ದಾರೆ ಸಮಂತಾ. ಪದೇ, ಪದೇ ತಮ್ಮ ಸ್ಟೋರಿಯಲ್ಲಿ ಪೋಸ್ಟ್ ಮಾಡುತ್ತಿದ್ದ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಕೂಡ ಮಾಡಿದ್ದಾರೆ. ಹಾಗಾಗಿ ಈ ವಿಡಿಯೋಗೆ ಸಮಂತಾ ಪಡೆದ ಸಂಭಾವನೆ ಬಗ್ಗೆ ಹೆಚ್ಚಾಗಿ ಚರ್ಚೆ ಆಗುತ್ತಿದೆ. ಸಮಂತಾ ತಮ್ಮ ವಿಡಿಯೋ ಪೋಸ್ಟ್‌ಗಳಿಗೆ 15 ರಿಂದ 20 ಲಕ್ಷ ರೂ ತೆಗೆದುಕೊಳ್ಳುತ್ತಾರಂತೆ. ಆದರೆ ಇದು ಬೇರೆ ಸಿನಿಮಾದ ಹಾಡು ಆದ ಕಾರಣ ಇದಕ್ಕೂ ಹೆಚ್ಚಿನ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಜೊತೆಗೆ ಈ ಹಾಡನ್ನು ಹಲವು ಬಾರಿ ಸ್ಟೋರಿಯಲ್ಲೂ ಪೋಸ್ಟ್ ಮಾಡಿದ್ದಾರೆ. ಹಾಗಾಗಿ ಕೋಟಿ ಸಂಭಾವನೆ ಸಮಂತಾ ಕೈ ಸೇರಿದೆ ಎನ್ನಲಾಗುತ್ತಿದೆ.

ಪೋಸ್ಟರ್‌ಗೆ 7 ರಿಂದ 13 ಲಕ್ಷ ಫಿಕ್ಸ್!

ಪೋಸ್ಟರ್‌ಗೆ 7 ರಿಂದ 13 ಲಕ್ಷ ಫಿಕ್ಸ್!

ನಟಿ ಸಮಂತಾ ಕಡಿಮೆ ಎಂದರೆ ಒಂದು ಪೋಸ್ಟ್‌ಗೆ 7ರಿಂದ 13 ಲಕ್ಷ ಹಣ ಪಡೆಯುತ್ತಾರಂತೆ. ಇದು ಬ್ರ್ಯಾಂಡ್ ಅಥವಾ ಸಿನಿಮಾ ಪೋಸ್ಟರ್‌ಗಳಿಗೆ ಮಾತ್ರ ಸೀಮಿತಾ. ಪೋಟೋ ಮತ್ತು ವಿಡಿಯೋಗಳಿಗೆ ಪ್ರತ್ಯೇಕವಾಗಿ ಸಂಭಾವನೆ ಪಡೆದುಕೊಳ್ಳುತ್ತಾರಂತೆ ಸಮಂತಾ. ಅದು ಕೂಡ ಎಷ್ಟು ನಿಮಿಷದ ವಿಡಿಯೋ ಎನ್ನುವುದರ ಮೇಲೆ ಸಂಭಾವನೆ ನಿರ್ಧಾರ ಮಾಡುತ್ತಾರಂತೆ. ಹಾಗಾಗಿ ಸಿನಿಮಾಗಳ ಹೊರತಾಗಿ ಸಮಂತಾ ಸದ್ಯ ಸಾಮಾಜಿಕ ಜಾಲತಾಣದ ಮೂಲಕವೂ ಲಕ್ಷ, ಲಕ್ಷ ದುಡಿಯುತ್ತಿದ್ದಾರೆ.

22 ಮಿಲಿಯನ್‌ಗೂ ಅಧಿಕ ಫಾಲೊಯರ್ಸ್!

22 ಮಿಲಿಯನ್‌ಗೂ ಅಧಿಕ ಫಾಲೊಯರ್ಸ್!

ಸಮಂತಾಗೆ ಇನ್‌ಸ್ಟಾಗ್ರಾಮ್‌ನಲ್ಲಿ 22 ಮಿಲಿನಯ್‌ಗೂ ಅಧಿಕ ಅನುಯಾಯಿಗಳಿದ್ದಾರೆ. ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ನಟಿಯರಲ್ಲಿ ಸಮಂತಾ ಕೂಡ ಒಬ್ಬರು. ಈ ಸಂಖ್ಯೆ ಫೇಸ್ ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಭಿನ್ನವಾಗಿದೆ. ಆದರೆ ಇನ್‌ಸ್ಟಾಗ್ರಾಮ್ ಪ್ರೋಮೋಷನ್ ಪ್ರತ್ಯೇಕವಾಗಿ ಮಾಡುತ್ತಾರೆ. ಅಧಿಕ ಮಂದಿ ಸಮಂತಾ ಅವರನ್ನು ಫಾಲೋ ಮಾಡ್ತಿದ್ದಾರೆ. ಹಾಗಾಗಿ ಹೆಚ್ಚಿನ ಸಂಭಾವನೆಯನ್ನು ಪಡೆದುಕೊಳ್ಳುತ್ತಾರೆ.

More from Filmibeat

English summary
Do You How Much Samantha Charge For Paid Promotion Of Beast Song
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X