ನಟಿ ಸಮಂತಾ ಪ್ರಗ್ನೆಂಟ್? ಅದೊಂದು ಕಾರಣಕ್ಕೆ ಗುಟ್ಟು ರಟ್ಟಾಯ್ತಾ?
'ಮಾ ಇಂಟಿ ಬಂಗಾರಂ' ಸಿನಿಮಾ ಮೂಲಕ ಸಮಂತಾ ಈ ವಾರ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸ್ವತಃ ಸಿನಿಮಾ ನಿರ್ಮಿಸಿ ನಟಿಸಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿದ್ದು ಸ್ಯಾಮ್ ಜೋಡಿಯಾಗಿ ಕನ್ನಡ ನಟ ದಿಗಂತ್ ನಟಿಸಿದ್ದಾರೆ. ಇದೆಲ್ಲದರ ನಡುವೆ ನಟಿ ಸಮಂತಾ ಗರ್ಭಿಣಿ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಗುಲ್ಲಾಗಿದೆ.
ಸಾಕಷ್ಟು ಜನ ಅಭಿಮಾನಿಗಳು ಈಗಾಗಲೇ ಸಮಂತಾಗೆ ಕಂಗ್ರಾಟ್ಸ್ ಹೇಳುತ್ತಿದ್ದಾರೆ. ಆದರೆ ಈ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಸಿಕ್ಕಿಲ್ಲ. ಈ ಹಿಂದೆ ನಟ ನಾಗಚೈತನ್ಯಾ ಜೊತೆ ಮದುವೆಯಾಗಿದ್ದ ಸಮಂತಾ ಭಿನ್ನಾಭಿಪ್ರಾಯಗಳಿಂದ ಡಿವೋರ್ಸ್ ಪಡೆದಿದ್ದರು. ಬಳಿಕ ಇಬ್ಬರೂ ಬೇರೆ ವ್ಯಕ್ತಿಗಳ ಜೊತೆ ಮದುವೆ ಆಗಿದ್ದರು. 6 ತಿಂಗಳ ಹಿಂದೆ ನಿರ್ದೇಶಕ ರಾಜ್ ನಿಡುಮೊರು ಜೊತೆ ಸ್ಯಾಮ್ ಮದುವೆ ನಡೆದಿತ್ತು. 'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಸ್ವತಃ ಪತಿ ರಾಜ್ ಕಥೆ, ಚಿತ್ರಕಥೆ ಬರೆದಿದ್ದಾರೆ.

'ಮಾ ಇಂಟಿ ಬಂಗಾರಂ' ಚಿತ್ರವನ್ನು ಸಮಂತಾ ಪ್ರಚಾರ ಮಾಡಿದ್ದರು. ಸಾಕಷ್ಟು ಸಂದರ್ಶನಗಳಲ್ಲಿ ಭಾಗಿ ಆಗಿದ್ದರು. ಒಂದೇ ದಿನ 40 ಸಂದರ್ಶನಗಳಲ್ಲಿ ಮಾತನಾಡಿ ಗಮನ ಸೆಳೆದಿದ್ದರು. ಆದರೆ ಸಿನಿಮಾ ಪ್ರಚಾರದ ವೇಳೆ ಸಮಂತಾ ಸೀರೆ ಉಟ್ಟು ಕಾಣಿಸಿಕೊಂಡಿದ್ದರು. ಇದೇ ಕಾರಣಕ್ಕೆ ಆಕೆ ಗರ್ಭಿಣಿ ಆಗಿದ್ದಾರಾ ಎನ್ನುವ ಅನುಮಾನ ಮೂಡಿದೆ. ಬೇಬಿ ಬಂಪ್ ಮುಚ್ಚಿಡಲು ಆಕೆ ಸೀರೆಯಲ್ಲೇ ಕ್ಯಾಮರಾ ಮುಂದೆ ಬಂದಿದ್ರಾ? ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
ತೆಲುಗು ಮಾಧ್ಯಮಗಳಲ್ಲಿ ಕೂಡ ಈ ಬಗ್ಗೆ ಚರ್ಚೆ ಶುರುವಾಗಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇನ್ನು 'ಮಾ ಇಂಟಿ ಬಂಗಾರಂ' ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ಚಿತ್ರಕ್ಕೆ ಸಾಕಷ್ಟು ಆಕ್ಷನ್ ಸನ್ನಿವೇಶಗಳಲ್ಲಿ ಸ್ಯಾಮ್ ಅಬ್ಬರಿಸಿದ್ದಾರೆ.


Click it and Unblock the Notifications